ಕನ್ನಡ ಸುದ್ದಿ / ಕರ್ನಾಟಕ /
Congress Manifesto: ಬಿಜೆಪಿಯ ಕೃಷಿ ಕಾಯ್ದೆ ರದ್ದು, ರೈತರಿಗೆ ಬಡ್ಡಿ ರಹಿತ 10 ಲಕ್ಷವರೆಗೆ ಸಾಲ ಸೇರಿ ಕಾಂಗ್ರೆಸ್ ಬಂಪರ್ ಭರವಸೆಗಳ ಘೋಷಣೆ
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡ್ತೇವೆ. ರೈತರಿಗೆ 10 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗಾಗಿ (Assembly Elections) ಇಂದು ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಎಂಬ ಪ್ರಣಾಳಿಕೆ (Congress Manifesto) ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಯಕರು (Congress Leaders) ರೈತರಿಗೆ ಬಂಪರ್ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು, ಎಂಪಿಎಂಸಿ ತಿದ್ದುಪಡಿ ಕಾಯ್ದೆಗಳು ರದ್ದು, ರೈತರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಎಲ್ಲಾ ಪ್ರಕರಣಗಳು ವಾಪಸ್ ತೆಗೆದುಕೊಳ್ಳುವುದು ಹಾಗೂ ರೈತರಿಗೆ ಒಡ್ಡಿ ರಹಿತ ಸಾಲ 3 ಲಕ್ಷ ರೂಪಾಯಿಯಿಂದ 10 ಲಕ್ಕ ರೂ.ಗೆ ವಿಸ್ತರಣೆ. ಕನಿಷ್ಠ ಶೇ.3ರ ಬಡ್ಡಿದರದಲ್ಲಿ 15 ಲಕ್ಷದವರೆಗೆ ಸಾಲ. ಸರ್ಕಾರದಿಂದಲೇ ಬಡ್ಡಿ ವ್ಯತ್ಯಾಸ ಪಾವತಿ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.
ರೈತರು ಸೇರಿದಂತೆ ವಿವಿಧ ವರ್ಗಗಳಿಗೆ ಘೋಷಣೆ ಮಾಡಿರುವ ಯೋಜನೆಗಳ ವಿವರುಗಳು ಹೀಗಿವೆ
- ರೈತರ ಹಕ್ಕಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಅನುಷ್ಠಾನಗೊಳಿಸಲು ಸ್ವಾಮಿನಾಥನ್ ವರದಿ ಮತ್ತು ಕರ್ನಾಟಕ ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗದ ವರದಿಗಳ ಆಧಾರದಂತೆ, ರೈತರ ಪ್ರತನಿಧಿಗಳೊಂದಿಗೆ ಚರ್ಚೆ ಮಾಡಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ನೀತಿ ಜಾರಿ
- ಮಿಷನ್ ಕ್ಷೀರ ಕ್ರಾಂತಿ-ಪ್ರತಿ ದಿನ 1.5 ಕೋಟಿ ಲೀಟರ್ ಹಾಲು ಉತ್ಪಾದನೆ ಗುರಿ ಸಾಧನೆಗಾಗಿ ಯೋಜನೆ
- ಪಶು ಭಾಗ್ಯ-ಉತ್ತಮ ತಳಿಯ ಹಸು ಅಥವಾ ಎಮ್ಮೆ ಖರೀದಿಗೆ ಶೂನ್ಯ ಬಡ್ಡಿದರಲ್ಲಿ 3 ಲಕ್ಷ ರೂಪಾಯಿ ಸಲ
- ರೇಷ್ಮೆ ಸ್ಥಿರತೆ ನಿಧಿಗೆ ಆರಂಭಿಕ ಹಂತದಲ್ಲಿ 2000 ಕೋಟಿ ರೂ.ಅನುದಾನ
- ಎಲ್ಲಾ ರೇಷ್ಮೆ ನೂಲು ರೀಲರ್‌ಗಳಿಗೆ 3 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ
- ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ ಒದಗಿಸಲು 500 ಕೋಟಿ
- ಕಾಫಿ ಕರ್ನಾಟಕ ಬ್ರಾಂಡ್ ಸೃಷ್ಟಿ
- ಬರಗಾಲ ಮತ್ತು ಕ್ಷಾಮದ ಅವಧಿಯಲ್ಲಿ ಕೃಷಿ ಉತ್ಪನ್ನಗಳಿಗೆ ಆಗುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸಾಲ ಮರುಪಾವತಿ ಮುಂದೂಡುವಿಕೆ
- ವಸತಿ ಸಮಸ್ಯೆಗೆ ತೊಡಗಕಾಗಿರುವ ಅರಣ್ಯ ಕಾಯ್ದೆಯ ವಿಧಿಗಳ ತಿದ್ಜುಪಡಿ
- ಗ್ರಾಮೀಣ ಕೃಷಿಕ ಮಹಿಳೆಯರಿಗಾಗಿ ಸ್ವ ಸಹಾಯ ಗುಂಪುಗಳಿಗೆ ಹಾಗೂ 3 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ
- ಜಲ ಚೇತನ ಆಂದೋನಲ-ತುಂತುರು ಮತ್ತು ಹನಿ ನೀರಾವರಿ ಅಳವಡಿಕೆಗೆ ಶೇ. 100 ರಷ್ಟು ಸಬ್ಬಿಡಿ
- ಗ್ರಾಮೀಣ ಮಹಿಳೆಯರ ನಡೆಸುವ ಕೃಷಿ ಆಧಾರಿತ ಗ್ರಾಮೀಣ ಉದ್ಯಮಗಳ ಉತ್ತೇಜನಕ್ಕೆ 200 ಕೋಟಿ ಹೂಡಿಕೆ
- ಸಾವಯವ ಸರದಾರ ಯೋಜನೆ ಸಾವಯವ ಕೃಷಿ ಉತ್ತೇಜನಕ್ಕೆ 2,500 ಕೋಟಿ ರೂ. ಹೂಡಿಕೆ
- ಪ್ರತಿ ವಿಭಾಗಕ್ಕೆ ಒಂದರಂತೆ ಕೃಷಿ ಬೆಲೆ ಆಯೋಗ ಸ್ಥಾಪನೆ
- ಕೃಷಿ ಉತ್ಪನ್ನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್ ಆರಂಭಿಸಲು ಮತ್ತು ಇತರ ಸಂಶೋಧನೆಗಳ ಉತ್ತೇಜನಕ್ಕಾಗಿ 500 ಕೋಟಿ ಸಾಲ ನಿಧಿ
- ಕುರಿಗಾಹಿ ಸಂವರ್ಧನಾ ನಿಧಿ-ಕುರಿ ಸಾಕಾಣಿಕೆಗಾಗಿ 1 ಸಾವಿರ ಕೋಟಿ ರೂ.ನಿಧಿ ಸ್ಥಾಪನೆ
- ಕ್ಷೀರಧಾರೆ-ಪ್ರತಿ ಲೀಟರ್ ಹಾಲಿನ ಸಬ್ಸಿಡಿಯನ್ನು 5 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಳ
- ಕ್ಷೀರ ಕ್ರಾಂತಿ ಕ್ರೆಡಿಟ್ ಕಾರ್ಡ್-50 ಸಾವಿರ ಮಿತಿಯೊಂದಿಗೆ ಎಲ್ಲಾ ಕೃಷಿಕರಿಗೆ ಕ್ರೆಡಿಟ್ ಕಾರ್ಡ್
- ಋಣಮುಕ್ತ ಕುರಿಗಾಹಿ ಯೋಜನೆ - ಎಲ್ಲಾ ಕುರಿ, ಮೇಕೆ ಸಾಕಣಿಕೆದಾರರ 1 ಲಕ್ಷದವರೆಗಿನ ಸಾಲ ಮನ್ನಾ
- ಜಾನುವಾರು ಸಾಕಣಿಕೆದಾರರಿಂದ ಪ್ರತಿ ಕೆಜಿಗೆ 3 ರೂಪಾಯಿಯಂತೆ ಸಗಣಿ (ಗೊಬ್ಬರ) ಖರೀದಿ. ಗ್ರಾಮೀಣ ಮಹಿಳೆ ಅಥವಾ ಯುವಕರನ್ನು ತೊಡಗಿಸಿಕೊಂಡು ಪ್ರತಿ ಪಂಚಾಯತ್‌ನಲ್ಲಿ ಗೊಬ್ಬರ ತಯಾರಿಕಾ ಕೇಂದ್ರಗಳ ಸ್ಥಾಪನೆ
ಇದನ್ನೂ ಓದಿ: ಖಾಲಿ ಹುದ್ದೆಗಳ ಭರ್ತಿ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಿವು