Nota: ಕರ್ನಾಟಕ ವಿಧಾನಸಭೆ ಚುನಾವಣೆ; ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚಿನ ಮತ ಬಂದಲ್ಲಿ ಏನಾಗಲಿದೆ ಫಲಿತಾಂಶ; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  Nota: ಕರ್ನಾಟಕ ವಿಧಾನಸಭೆ ಚುನಾವಣೆ; ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚಿನ ಮತ ಬಂದಲ್ಲಿ ಏನಾಗಲಿದೆ ಫಲಿತಾಂಶ; ಇಲ್ಲಿದೆ ಮಾಹಿತಿ

Nota: ಕರ್ನಾಟಕ ವಿಧಾನಸಭೆ ಚುನಾವಣೆ; ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚಿನ ಮತ ಬಂದಲ್ಲಿ ಏನಾಗಲಿದೆ ಫಲಿತಾಂಶ; ಇಲ್ಲಿದೆ ಮಾಹಿತಿ

ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ ಹೊರ ಬೀಳಲಿದ್ದು, ಯಾವ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ಕುತೂಹಲ ಹೆಚ್ಚಿದೆ. ಇದರ ನಡುವೆ ಅಭ್ಯರ್ಥಿಗಿಂತ ನೋಟಾಗೆ ಹೆಚ್ಚು ಮತಗಳು ಬಂದರೆ ಏನಾಗಬಹುದು ಎಂಬುದರ ಮಾಹಿತಿ ಇಲ್ಲಿದೆ.

ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಿಂತ ನೋಟಾಗೆ ಹೆಚ್ಚು ಮತಗಳು ಬಂದರೆ ಏನಾಬಹುದು ಅನ್ನೋದರ ಮಾಹಿತಿ ಇಲ್ಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಿಂತ ನೋಟಾಗೆ ಹೆಚ್ಚು ಮತಗಳು ಬಂದರೆ ಏನಾಬಹುದು ಅನ್ನೋದರ ಮಾಹಿತಿ ಇಲ್ಲಿದೆ.

ಬೆಂಗಳೂರು: ಹೈವೋಲ್ಟೇಜ್ ಕಣವಾಗಿರುವ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Election Result 2023) ನಾಳೆ (ಮೇ 13, ಶನಿವಾರ) ಹೊರಬೀಳಲಿದ್ದು, ಯಾವ ಪಕ್ಷಕ್ಕೆ ಮತದಾರನ ಆಶೀರ್ವಾದ ಸಿಕ್ಕಿದೆ ಎಂಬುದು ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ಸಿಗಲಿದೆ.

ಮತದಾನ ಮುಗಿದ ಬಳಿಕ ಸ್ವಲ್ಪ ರಿಲ್ಯಾಗ್ಸ್ ಮೂಡ್‌ಗೆ ಜಾರಿದ್ದ ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳಿಗೆ ಇದೀಗ ಫಲಿತಾಂಶದ ಬಗ್ಗೆ ಎದೆ ಬಡಿತ ಜೋರಾಗಿದೆ. ತಮಗೆ ಎಷ್ಟು ಮತಗಳು ಸಿಗಬಹುದು, ಗೆಲುವಿನ ಅಂತರದ ಲೆಕ್ಕಾಚಾರಗಳ ನಡುವೆ ಒಂದು ವೇಳೆ ಅಭ್ಯರ್ಥಿಗಳಿಗಿಂತ ನೋಟಾ ಮತಗಳು (NOTA Votes) ಹೆಚ್ಚು ಬಂದರೆ ಏನಾಗಬಹುದು ಎಂಬುದರ ಕುತೂಹಲ ಎಲ್ಲರೂ ಇದೆ.

ಚಲಾವಣೆಯಾದ ಒಟ್ಟು ಮತಗಳಲ್ಲಿ ಅರ್ಧಕ್ಕೂ ಅಧಿಕ ಪ್ರಮಾಣದ ಮತಗಳು ನೋಟಾ ಚಿಹ್ನೆಗೆ ಬಿದ್ದರೆ, ಆ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗಳ ಗೆಲುವು ಘೋಷಣೆ ಮಾಡಲಾಗುವುದಿಲ್ಲ. ಬದಲಾಗಿ, ಅಲ್ಲಿ ಮರು ಚುನಾವಣೆ ಮಾಡಬೇಕಾಗುತ್ತದೆ. ವಿಶೇಷವೆಂದರೆ, ಇಂತಹ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಪಡಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಲಾಗುತ್ತದೆ. ಮತ್ತೆ ಆರಂಭದಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ.

ಒಂದು ವೇಳೆ ನೋಟಾಗೆ ಅಧಿಕ ಮತಗಳು ಬಿದ್ದರೆ, ಅಂದರೆ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇಕಡಾ 50ಕ್ಕಿಂತ ಅಧಿಕ ಮತಗಳು ಬಂದರೆ ಆ ಕ್ಷೇತ್ರದಲ್ಲಿ ಎರಡನೇ ಅಧಿಕ ಮತ ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸುವ ಅವಕಾಶ ಇಲ್ಲ. ಏಕೆಂದರೆ ಆ ಕ್ಷೇತ್ರದಲ್ಲಿ ನಿಂತಿರುವ ಅಭ್ಯರ್ಥಿಗಳು ನೋಟಾಗೆ ಬಂದಿರುವಷ್ಟು ಮತ ಪಡೆಯಲು ವಿಫಲರಾದರೆ ಅವರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ನೋಟಾಗೆ ಅಧಿಕ ಮತಗಳು ಬಂದಿವೆ ಎಂದರೆ ಆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಜನಮನ್ನಣೆಗಳಿಸಲು ಸ್ಪಷ್ಟವಾಗಿ ವಿಫಲರಾಗಿದ್ದಾರೆ ಎಂದರ್ಥ. ಅಲ್ಲದೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿಯೇ ಇಲ್ಲಿ ನೋಟಾ ಬಳಿಕ ಎರಡನೇ ಅಧಿಕ ಮತಗಳನ್ನು ಪಡೆಯುವ ಅಭ್ಯರ್ಥಿಗಳಿಗೆ ಗೆಲುವು ಸಿಗುವುದಿಲ್ಲ.

ವಿಧಾನಸಭಾ ಚುನಾವಣೆಯಲ್ಲಿ ನೋಟಾ ಬಗ್ಗೆ ಹೇಳಿವುದಾದರೆ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ನೋಟಾ ಜಾರಿಗೆ ಬಂತು. ಆಗ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 0.9 ರಷ್ಟು ಮತಗಳು ನೋಟಾಗೆ ಬಿದ್ದಿದ್ದವು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 15,829 ಮತದಾರರು ನೋಟಾಗೆ ಮತ ಹಾಕಿದ್ದರು. ಇದು ರಾಜ್ಯದಲ್ಲೇ ಕ್ಷೇತ್ರವೊಂದರಲ್ಲಿ ನೋಟಾ ಪರ ಚಲಾವಣೆಯಾದ ಅಧಿಕ ಮತಗಳು ಎನಿಸಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಶೇ.1.04ರಷ್ಟು ಮತಗಳು (ಸುಮಾರು 65 ಲಕ್ಷ ಜನರು) ನೋಟಾಗೆ ಮತ ಹಾಕಿದ್ದರು. ಅದಕ್ಕೂ ಹಿಂದೆ, ಅಂದರೆ 2014ರ ಲೋಕಸಭೆ ಚುನಾವಣೆಯಲ್ಲಿ ಶೇ. 1.08ರಷ್ಟು ( ಸುಮಾರು 60 ಲಕ್ಷ ಮತಗಳು) ಮತದಾರರು ನೋಟಾಗೆ ಮತ ಹಾಕಿದ್ದರು. ಲೋಕಸಭಾ ಚುನಾವಣೆಯಲ್ಲಿ 2014ರಲ್ಲಿ ಮೊದಲ ಬಾರಿಗೆ ನೋಟಾ ಜಾರಿಗೆ ಬಂತು.

ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮೇ 10 (ಬುಧವಾರ) ರಂದು ನಡೆದಿದ್ದು, ನಾಳೆ (ಮೇ 13, ಶನಿವಾರ) ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ನಡೆದಿದ್ದು, ಬಹುತೇಕ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ಗೆ ಮುನ್ನಡೆ ಸಿಗಲಿದೆ ಎಂದು ಹೇಳಿದ್ದಾರೆ.

Whats_app_banner