Liquor price Hike: ಮದ್ಯದ ದರ ಹೆಚ್ಚಳ ಆಗಿಲ್ಲ, ರಿಯಾಲಿಟಿ ಚೆಕ್ ಮಾಡುವೆ: ಸಚಿವ ತಿಮ್ಮಾಪುರ
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಘೋಷಣೆ ಬಳಿಕ ಆದಾಯ ಸರಿದೂಗಿಸಲು ಮದ್ಯದ ದರ ಏರಿಕೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಆದರೆ ನಮ್ಮ ಸರ್ಕಾರ ಈವರೆಗೂ ದರ ಏರಿಸಿಲ್ಲ. ಏರಿಸೋ ಪ್ರಸ್ತಾವವೂ ಇಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಬೆಂಗಳೂರು: ಈವರೆಗೂ ಕರ್ನಾಟಕದಲ್ಲಿ ಮದ್ಯದ ದರವನ್ನು ಹೆಚ್ಚಳ ಮಾಡಿಲ್ಲ. ಅಂತಹ ಪ್ರಸ್ತಾಪ ನಮ್ಮ ಇಲಾಖೆ ಮುಂದಿಲ್ಲ. ಹಾಗೇನಾದರೂ ಹೆಚ್ಚಳ ಮಾಡುವುದಾದರೆ ಮಾಹಿತಿ ನೀಡುತ್ತೇನೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಹೇಳಿದರು.
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಲ್ಲಿ ಶೇಕಡಾ 20ರಷ್ಟು ಮದ್ಯದ ಬೆಲೆ ಏರಿಕೆಯಾಗಿದೆ ಎನ್ನುವ ಮಾತುಗಳಿವೆಯಲ್ಲಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಬೆಂಗಳೂರಿನಲ್ಲಿ ಅವರು ಉತ್ತರ ನೀಡಿದರು.
ನನಗೆ ತಿಳಿದ ಹಾಗೆ ಯಾವುದೇ ಮದ್ಯದ ದರ ಏರಿಕೆಯಾಗಿಲ್ಲ. ಬಿಯರ್ ದರ ಹೆಚ್ಚಾಗಿದೆ ಎನ್ನುವುದು ನಿಮ್ಮಿಂದ ತಿಳಿದಿದ್ದೇನೆ. ಇದಕ್ಕೆ ಬೇಕಾದರೆ ರಿಯಾಲಿಟಿ ಚೆಕ್ ಮಾಡುತ್ತೇನೆ. ಹಾಗೇನಾದರೂ ಸರ್ಕಾರದ ಗಮನಕ್ಕೆ ಬಾರದೇ ಮದ್ಯದ ದರ ಏರಿಕೆಯಾಗಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಸಮನ್ವಯ ಸಮಿತಿಗೆ ಸಿಎಂಗೆ ವೈನ್ ಮರ್ಚೆಂಟ್ಸ್ ಅಹವಾಲು
ಕರ್ನಾಟಕದಲ್ಲಿ ವೈನ್ ಸ್ಟೋರ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಮಾರಾಟ ಪ್ರಮಾಣ ಕಡಿಮೆಯಾಗಿದೆ ಎಂದು ಮದ್ಯ ಮಾರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದರು. ಮದ್ಯ ಉತ್ಪಾದಿಸುವ-ಪ್ಯಾಕ್ ಮಾಡುವ ಡಿಸ್ಟಿಲರಿಗಳು ಹಾಗೂ ಮಾರಾಟ ನಿಯಂತ್ರಿಸುವ ಅಬಕಾರಿ ಇಲಾಖೆಯ ನಡುವೆ ಮಾರಾಟಗಾರರು ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಮೂರೂ ವ್ಯವಸ್ಥೆಯಲ್ಲಿ ಸಮನ್ವಯದ ಕೊರತೆ ಕಾಡುತ್ತಿದೆ. ಇದು ಸುಧಾರಿಸಲು ಸಮನ್ವಯ ಸಮಿತಿ ರಚಿಸಬೇಕು ಎಂದು ಅವರು ಕೋರಿದರು.
ರಾಜ್ಯದಲ್ಲಿ 2863 ವೈನ್ ಅಂಗಡಿಗಳು ಹೆಚ್ಚಾಗಿದ್ದು, ಮಾರಾಟ ಕಡಿಮೆಯಾಗಿದೆ. ಡಿಸ್ಟಿಲರಿಗಳು, ಅಬಕಾರಿ, ಚಿಲ್ಲರೆ ವ್ಯಾಪಾರಿಗಳ ಮಧ್ಯೆ ಸಮನ್ವಯದ ಕೊರತೆಯಿದ್ದು, ಸಮನ್ವಯ ಸಮಿತಿ ರಚಿಸಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಈ ಕುರಿತು ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆ ನೀಡಿದ ಮುಖ್ಯ ಮಂತ್ರಿಗಳು, ಸೋರಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿರಿ
ವಿಭಾಗ