ಕನ್ನಡ ಸುದ್ದಿ  /  Karnataka  /  Karnataka Flag: Indian Student In London Unfurls Karnataka Flag At Graduation Ceremony. Watch

Karnataka flag: ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅರಳಿತು ಕನ್ನಡದ ಬಾವುಟ!; ಬೀದರ್‌ ಹುಡುಗನ ರಾಜ್ಯಾಭಿಮಾನದ ವಿಡಿಯೋ ನೋಡಿ

Karnataka flag: ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸಲು ತೆರಳಿದ ವಿದ್ಯಾರ್ಥಿಯೊಬ್ಬ ಕನ್ನಡದ ಬಾವುಟ ಹಿಡಿದು ತೆರಳುತ್ತಿರುವ ವಿಡಿಯೋ ವೈರಲ್‌ ಆಗಿದೆ. ಅದಿಶ್‌ ಆರ್‌ ವಾಲಿ ಎಂಬ ಕರ್ನಾಟಕದ ಕುಡಿ ಈ ರೀತಿ ಅಭಿಮಾನ ಪ್ರದರ್ಶಿಸಿರುವಂಥದ್ದು.

ಲಂಡನ್‌ನಲ್ಲಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ಕನ್ನಡ ಬಾವುಟ ಹಿಡಿದು ಸಾಗಿದ ಬೀದರ್‌ ಹುಡುಗ ಅದಿಶ್‌ ಆರ್‌ ವಾಲಿ.
ಲಂಡನ್‌ನಲ್ಲಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ಕನ್ನಡ ಬಾವುಟ ಹಿಡಿದು ಸಾಗಿದ ಬೀದರ್‌ ಹುಡುಗ ಅದಿಶ್‌ ಆರ್‌ ವಾಲಿ.

ದೂರದ ಲಂಡನ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಕನ್ನಡ ಬಾವುಟ ಅರಳಿತು! ಹೌದು.. ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸಲು ತೆರಳಿದ ವಿದ್ಯಾರ್ಥಿಯೊಬ್ಬ ಕನ್ನಡದ ಬಾವುಟ ಹಿಡಿದು ತೆರಳುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಅದಿಶ್‌ ಆರ್‌ ವಾಲಿ ಎಂಬ ಕರ್ನಾಟಕದ ಕುಡಿ ಈ ರೀತಿ ಅಭಿಮಾನ ಪ್ರದರ್ಶಿಸಿರುವಂಥದ್ದು. ಸಿಟಿ ಯೂನಿವರ್ಸಿಟಿ ಆಫ್‌ ಪಂಡನ್‌ - ಬೇಯ್ಸ್‌ ಬಿಜಿನೆಸ್‌ ಸ್ಕೂಲ್‌ (Cass)ನಲ್ಲಿ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಎಂಎಸ್‌ ವ್ಯಾಸಂಗ ಮಾಡಿದ ಅದಿಶ್‌, ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸುವಾಗ ಈ ಅಭಿಮಾನ ತೋರಿದ್ದಾರೆ. ಇದರ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಅದಿಶ್‌, ಟಿ ಯೂನಿವರ್ಸಿಟಿ ಆಫ್‌ ಪಂಡನ್‌ - ಬೇಯ್ಸ್‌ ಬಿಜಿನೆಸ್‌ ಸ್ಕೂಲ್‌ (Cass)ನಲ್ಲಿ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಎಂಎಸ್‌ ಪದವಿ ಪಡೆದುಕೊಂಡೆ. ಒಂದು ಹೆಮ್ಮೆಯ ಕ್ಷಣವಾದ ಕಾರಣ ನಮ್ಮ ಕನ್ನಡ ಬಾವುಟವನ್ನು ಅಲ್ಲಿ ಈ ಕಾರ್ಯಕ್ರಮದಲ್ಲಿ ಅರಳಿಸಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಅದಿಶ್‌ ಅವರ ವಿಡಿಯೋ ಟ್ವೀಟ್‌ ಬಹುಬೇಗ ಗಮನಸೆಳೆಯಿತು. ಅನೇಕರು ಆತನಿಗೆ ಶುಭ ಹಾರೈಸಿದರು. ತಾಯ್ನಾಡಿನ ಕುರಿತ ಆತನ ಅಭಿಮಾನವನ್ನು ಪ್ರಶಂಸಿದರು. ಕನ್ನಡ ಬಾವುಟ ಇತ್ತೀಚಿನ ದಿನಗಳಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ.

ಕಳೆದ ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿಯಲ್ಲಿ ಕಾಲೇಜು ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಕನ್ನಡದ ಬಾವುಟ ಪ್ರದರ್ಶಿಸಿದ್ದಕ್ಕೆ ಹಲ್ಲೆ ನಡೆದಿತ್ತು. ಇದರ ವಿಡಿಯೋ ವೈರಲ್‌ ಆಗಿತ್ತು.

ಗಮನಿಸಬಹುದಾದ ಸುದ್ದಿ

ಬೆಂಗಳೂರಲ್ಲಿ ಕಾಣಸಿಕ್ಕಿತು ಆಮದು ಮಾಡಿಕೊಂಡ ಹ್ಯುಮನ್‌ ಪವರ್ಡ್‌ ವೆಹಿಕಲ್‌! ಇಲ್ಲಿದೆ ವಿಡಿಯೋ, ಫೋಟೋಸ್‌

Human powered vehicle: ಬೆಂಗಳೂರಲ್ಲಿ ಕಂಡ ಇಂಪೋರ್ಟೆಡ್‌ ಹ್ಯುಮನ್‌ ಪವರ್ಡ್‌ ವೆಹಿಕಲ್‌ನ ವಿಡಿಯೋ, ಫೋಟೋ ಟ್ವೀಟ್‌ ರೀಟ್ವೀಟ್‌ ಮತ್ತು ಲೈಕ್ಸ್‌ ಅನ್ನು ಪಡೆದುಕೊಂಡಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಸ್ಲೀಪಿಂಗ್‌ ಪಾಡ್‌ ಆಕಾರದ ಈ ವಾಹನ ಪತ್ತೆಯಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಭೋಪಾಲ ವಿಜ್ಞಾನ ಹಬ್ಬದಲ್ಲಿ ಹರಡಿತು ಕನ್ನಡದ ಕಂಪು; ವಿಜ್ಞಾನ ಸಂವಹನದಲ್ಲಿ ಕನ್ನಡದ ಸಾಧನೆ ವ್ಯಕ್ತ - 2 ಕನ್ನಡ ಕೃತಿ ಬಿಡುಗಡೆ

Vigyanika: ಇಂಡಿಯಾ ಇಂಟರ್ ನ್ಯಾಶನಲ್ ಸೈನ್ಸ್ ಫೆಸ್ಟಿವಲ್‌ನ ಭಾಗವಾಗಿ ಈ ಸಾಹಿತ್ಯ ಹಬ್ಬ ಜನವರಿ 22 ಮತ್ತು 23ರಂದು ಅಂದರೆ ನಿನ್ನೆ ಮತ್ತು ಇಂದು ನಡೆಯುತ್ತಿದೆ. ಈ ಕಾರ್ಯಕ್ರಮದ ಮೊದಲ ದಿನದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಹಲವು ಆಯಾಮಗಳಿಗೆ ವೇದಿಕೆ ದೊರೆತದ್ದು ವಿಶೇಷ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ತೆಲುಗು ಗಾಯಕಿ ಮಂಗ್ಲಿ ಕಾರಿನ ಮೇಲೆ ದಾಳಿ; ನಿಜವಾ ಸುಳ್ಳಾ? ಮಂಗ್ಲಿ ಏನು ಹೇಳಿದ್ರು? ಎಸ್‌ಪಿ ಸ್ಪಷ್ಟೀಕರಣ ಏನು?

ಬಳ್ಳಾರಿ ಉತ್ಸವದ ಸಂಗೀತ ಕಾರ್ಯಕ್ರಮಕ್ಕೆ ಬಂದ ತೆಲುಗು ಗಾಯಕಿ ಮಂಗ್ಲಿ ಕಾರಿನ ಮೇಲೆ ದಾಳಿ ನಡೆದಿದೆ. ಕಲ್ಲುತೂರಾಟ ಆಗಿದ್ದರಿಂದ ಕಾರಿನ ಗಾಜು ಒಡೆದಿದೆ. ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ ಎಂಬಿತ್ಯಾದಿ ಸುದ್ದಿ ಹರಡಿತ್ತು. ಆದರೆ, ಈ ಬಗ್ಗೆ ಗಾಯಕಿ ಮಂಗ್ಲಿ ಟ್ವೀಟ್‌ ಮಾಡಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ಮಾಧ್ಯಮಗಳ ಜತೆಗೆ ಮಾತನಾಡಿದ್ದಾರೆ. ಅವರು ಹೇಳಿರುವುದೇನು? ಘಟನೆ ನಡೆದಿರುವುದೇನು? ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point