ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

ಕರ್ನಾಟಕ ಸರ್ಕಾರವು ಸಾರಿಗೆ ದರವನ್ನು ಏರಿಕೆ ಮಾಡಿದ್ದು ಭಾನುವಾರದಿಂದಲೇ ಇದು ಜಾರಿಗೆ ಬಂದಿದೆ. ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ಪ್ರಯಾಣ ದರದ ವಿವರ ಇಲ್ಲಿದೆ.

ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ಹೆಚ್ಚಳವಾಗಿರುವ ಸಾರಿಗೆ ದರ
ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ಹೆಚ್ಚಳವಾಗಿರುವ ಸಾರಿಗೆ ದರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಹಾಗೂ ವಾಣಿಜ್ಯ ನಗರಿಯಾದ ಹುಬ್ಬಳ್ಳಿ ನಗರದಿಂದಲೂ ಸಾರಿಗೆ ಬಸ್‌ ಹೊಸ ಪ್ರಯಾಣ ದರ ಇಂದಿನಿಂದ ಜಾರಿಯಾಗಿದೆ. ಹುಬ್ಬಳ್ಳಿ ನಗರದಿಂದ ವಿಜಯಪುರ, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಕಾರವಾರ, ಹಾವೇರಿ, ಗದಗ, ಕೊಪ್ಪಳ, ಇಳಕಲ್‌, ದಾವಣಗೆರೆ, ಶಿವಮೊಗ್ಗ, ರಾಣೆಬೆನ್ನೂರು, ಧರ್ಮಸ್ಥಳ ಸಹಿತ ಪ್ರಮುಖ ನಗರಗಳ ಟಿಕೆಟ್‌ ದರ ಭಾನುವಾರದಿಂದಲೇ ಹೊಸ ಪ್ರಯಾಣ ಬಳಕೆಯಲ್ಲಿದೆ. ಇದಲ್ಲದೇ ಹುಬ್ಬಳ್ಳಿಯಿಂದ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹೈದ್ರಾಬಾದ್‌, ಗೋವಾ, ಪುಣೆ ಸೇರಿದಂತೆ ಹಲವು ನಗರಗಳ ಪ್ರಯಾಣ ದರದಲ್ಲೂ ಭಾರೀ ವ್ಯತ್ಯಾಸವಾಗಿದೆ. ಸಾಮಾನ್ಯ ಬಸ್‌ ಪ್ರಯಾಣ ದರವಲ್ಲದೇ ರಾಜಹಂಸ, ಎಸಿ ವೋಲ್ವೋ ದರದಲ್ಲೂ ಬದಲಾವಣೆಯಾಗಿದೆ.

ಯಾವ ಊರಿಗೆ ಎಷ್ಟು ಪ್ರಯಾಣ ದರ ಎನ್ನುವುದನ್ನು ಇಲ್ಲಿ ನೀಡಲಾಗಿದೆ. ಆವರಣದಲ್ಲಿದ್ದುದು ಹಿಂದಿನ ಪ್ರಯಾಣ ದರ.

ಹುಬ್ಬಳ್ಳಿಯಿಂದ ವಿಜಯಪುರ 256(223)

ಹುಬ್ಬಳ್ಳಿಯಿಂದ ಬೆಳಗಾವಿ 146 (129)

ಹುಬ್ಬಳ್ಳಿಯಿಂದ ಗದಗ 86(77)

ಹುಬ್ಬಳ್ಳಿಯಿಂದ ಶಿರಸಿ 126 (109)

ಹುಬ್ಬಳ್ಳಿಯಿಂದ ಕಾರವಾರ 228(200)

ಹುಬ್ಬಳ್ಳಿಯಿಂದ ಹಾವೇರಿ 106 (94)

ಹುಬ್ಬಳ್ಳಿಯಿಂದ ಬಾಗಲಕೋಟೆ 177(154)

ಹುಬ್ಬಳ್ಳಿಯಿಂದ ಇಲಕಲ್‌ 206(179)

ಹುಬ್ಬಳ್ಳಿಯಿಂದ ಹೈದ್ರಾಬಾದ್‌ 697(604)

ಹುಬ್ಬಳ್ಳಿಯಿಂದ ಪಣಜಿ 219(199)

ಹುಬ್ಬಳ್ಳಿಯಿಂದ ಮಂತ್ರಾಲಯ 508(449)

ಹುಬ್ಬಳ್ಳಿಯಿಂದ ಪುಣೆ 622(592)

ಹುಬ್ಬಳ್ಳಿಯಿಂದ ಧರ್ಮಸ್ಥಳ 592(519)

ಹುಬ್ಬಳ್ಳಿಯಿಂದ ಕೊಪ್ಪಳ 176(157)

ಹುಬ್ಬಳ್ಳಿಯಿಂದ ಕಲಬುರಗಿ 488(427)

ಹುಬ್ಬಳ್ಳಿಯಿಂದ ಕಲಘಟಗಿ 43(37)

ಹುಬ್ಬಳ್ಳಿಯಿಂದ ಕುಂದಗೋಳ 37(32)

ಹುಬ್ಬಳ್ಳಿಯಿಂದ ನವಲಗುಂದ 53(45)

ಹುಬ್ಬಳ್ಳಿಯಿಂದ ದಾವಣಗೆರೆ 205(182)

ಹುಬ್ಬಳ್ಳಿಯಿಂದ ಶಿವಮೊಗ್ಗ 280(226)

ಹುಬ್ಬಳ್ಳಿಯಿಂದ ರಾಣೆ ಬೆನ್ನೂರು 155(135)

ಹುಬ್ಬಳ್ಳಿಯಿಂದ ಶಿರಹಟ್ಟಿ 95 (85)

ಹುಬ್ಬಳ್ಳಿಯಿಂದ ಲಕ್ಷ್ಮೇಶರ 75(64)

ಹುಬ್ಬಳ್ಳಿಯಿಂದ ಬೆಳಗಾವಿ ರಾಜಹಂಸ 175(150)

ಹುಬ್ಬಳ್ಳಿಯಿಂದ ಬೆಳಗಾವಿ ವೋಲ್ವೋ ಎಸಿ 190(170)

ಕಲಘಟಗಿಯಿಂದ ಧಾರವಾಡ 60(45)

 

Whats_app_banner