ಸಹಕಾರ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೇ, ಈ ಡಿಪ್ಲೋಮಾ ಕೋರ್ಸ್‌ ಮುಗಿಸಿಕೊಳ್ಳಿ: ಜತೆಗೆ ಮಾಸಿಕ ಶಿಷ್ಯವೇತನವೂ ಉಂಟು
ಕನ್ನಡ ಸುದ್ದಿ  /  ಕರ್ನಾಟಕ  /  ಸಹಕಾರ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೇ, ಈ ಡಿಪ್ಲೋಮಾ ಕೋರ್ಸ್‌ ಮುಗಿಸಿಕೊಳ್ಳಿ: ಜತೆಗೆ ಮಾಸಿಕ ಶಿಷ್ಯವೇತನವೂ ಉಂಟು

ಸಹಕಾರ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೇ, ಈ ಡಿಪ್ಲೋಮಾ ಕೋರ್ಸ್‌ ಮುಗಿಸಿಕೊಳ್ಳಿ: ಜತೆಗೆ ಮಾಸಿಕ ಶಿಷ್ಯವೇತನವೂ ಉಂಟು

ಕರ್ನಾಟಕ ಸಹಕಾರ ಇಲಾಖೆಯು ಸಹಕಾರ ವಲಯದಲ್ಲಿ ಆಸಕ್ತಿ ಇರುವವರು ಹಾಗೂ ಉದ್ಯೋಗ ಬಯಸುವವರಿಗೆ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‌ ಆಯೋಜಿಸುತ್ತಿದೆ. ಇದರ ವಿವರ ಇಲ್ಲಿದೆ.

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‌ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‌ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮಡಿಕೇರಿ: ನೀವು ಸಹಕಾರ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಬೇಕು ಎನ್ನುವ ಆಸಕ್ತಿ ಇಟ್ಟುಕೊಂಡಿದ್ದೀರಾ, ಸಹಕಾರ ಕ್ಷೇತ್ರದಲ್ಲಿ ಈಗಾಗಲೇ ನಿಮ್ಮನ್ನು ತೊಡಗಿಸಿಕೊಂಡಿದ್ದೀರಾ, ಇಂತಹವರಿಗೆಂದು ಕರ್ನಾಟಕ ಸಹಕಾರ ಇಲಾಖೆಯೂ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್(ಡಿಸಿಎಂ ತರಬೇತಿ) ಕೋರ್ಸ್‌ ನಡೆಸುತ್ತಿದೆ. ಈ ಕೋರ್ಸ್‌ ಪೂರೈಸಿದವರು ಸಹಕಾರ ಇಲಾಖೆ, ಸಂಘಗಳಲ್ಲಿ ಉದ್ಯೋಗವನ್ನೂ ಪಡೆದುಕೊಂಡಿದ್ದಾರೆ. ಈ ಸಾಲಿನ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‌ಗೆ ಸಹಕಾರ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯಲ್ಲಿ 6 ತಿಂಗಳ (ಡಿಸಿಎಂ) ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯು ಇದೇ ಜನವರಿ, 01 ರಿಂದ ಪ್ರಾರಂಭವಾಗಲಿದೆ.

ಶಿಕ್ಷಣ ಎಲ್ಲೆಲ್ಲಿ ಸಿಗಲಿದೆ

ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕುಗಳು ಡಿಸಿಎಂ ತರಬೇತಿ ಸಂಸ್ಥೆಯ ವ್ಯಾಪ್ತಿಯಲ್ಲಿ ಬರಲಿದ್ದು, ಅರ್ಹರಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಮಾಸಿಕ ರೂ.600 ಹಾಗೂ ಇತರೆ ಅಭ್ಯರ್ಥಿಗಳಿಗೆ ರೂ.500 ಶಿಷ್ಯವೇತನ ನೀಡಲಾಗುತ್ತದೆ. ಉಚಿತ ವಸತಿ ಗೃಹ ಸೌಲಭ್ಯವಿದೆ. ಸಹಕಾರ ಸಂಘ/ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಆದ್ಯತೆ ನೀಡಲಾಗುವುದು ಹಾಗೂ ಖಾಸಗಿ ಅಭ್ಯರ್ಥಿಗಳಿಗೂ ಅವಕಾಶವಿದೆ. ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ. ರಿಯಾಯಿತಿ ದರದಲ್ಲಿ ಡಿಸಿಎಂ ಪಠ್ಯ ಪುಸ್ತಕಗಳನ್ನು ನೀಡಲಾಗುವುದು.

ಶಿಕ್ಷಣ ಹೇಗಿರಲಿದೆ

ದೂರಶಿಕ್ಷಣ (ಡಿಸಿಎಂ)(ಸಹಕಾರ ಸಂಘ/ಸಂಸ್ಥೆ/ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ) ಇತ್ತೀಚಿನ ಕಾಯಿದೆ ತಿದ್ದುಪಡಿ ಅನ್ವಯ ಕೆ.ಸಿ.ಎಸ್ ನಿಯಮ 17(ಎ)(ಬಿ) ಪ್ರಕಾರ ಪದೋನ್ನತಿ ಹೊಂದಬೇಕಾದರೆ ಕಡ್ಡಾಯವಾಗಿ ಡಿಸಿಎಂ ಕೋರ್ಸ್ ಪಡೆಯಬೇಕಾಗುತ್ತದೆ. ಪ್ರತಿ ವರ್ಷ ಜನವರಿ-ಜೂನ್ ಮತ್ತು ಜುಲೈ-ಡಿಸೆಂಬರ್‍ವರೆಗೆ ಎರಡು ಅಧಿವೇಶನಗಳು ಸಂಪರ್ಕ ರಹಿತ ಕೋರ್ಸ್ ಪ್ರವೇಶಕ್ಕೆ ಅವಕಾಶ. ಶಿಕ್ಷಣ ಪಡೆಯಲು ಬರುವವರಿಗೆ ಸಂಸ್ಥೆಯಿಂದಲೇ ಅಧ್ಯಯನ ಮಾಹಿತಿ ನೀಡಲಾಗುವುದು.

10 ದಿನಗಳ ಸಂಪರ್ಕ ತರಗತಿಗಳು ಇರಲಿದೆ. ಸಹಕಾರ ಇಲಾಖೆ,ಸಂಘಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವವರು ಪದೋನ್ನತಿ ಹಾಗೂ ವಾರ್ಷಿಕ ಬಡ್ತಿ ಪಡೆಯಲು ಈ ಕೋರ್ಸ್‌ ಉಪಯುಕ್ತ ಪ್ರವೇಶಾತಿಗೆ ಆನ್‍ಲೈನ್ ಲಿಂಕ್: Website: www.kscfdcm.co.in

ಇಲ್ಲಿ ಮಾಹಿತಿ ಪಡೆಯಿರಿ

ಅರ್ಜಿ ಫಾರಂ ದೊರೆಯುವ ಸ್ಥಳ ಮತ್ತು ವಿಳಾಸ: ಪ್ರಾಂಶುಪಾಲರು, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಮುತ್ತಪ್ಪ ದೇವಸ್ಥಾನದ ಹತ್ತಿರ, ಅಬ್ಬಿಫಾಲ್ಸ್ ರಸ್ತೆ, ಮಡಿಕೇರಿ -571201. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಸನ, ಮೈಸೂರು, ಚಿಕ್ಕಮಗಳೂರು ಜಿಲ್ಲಾ ಸಹಕಾರ ಯೂನಿಯನ್. ಹೆಚ್ಚಿನ ಮಾಹಿತಿಗೆ ದೂ.ಸಂ. 8792628437, 9663153922, 8762925862, 8762110952, 9845318364 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್ಸ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಂಶುಪಾಲರಾದ ಡಾ.ಆರ್.ಎಸ್.ರೇಣುಕಾ ಅವರು ತಿಳಿಸಿದ್ದಾರೆ.

Whats_app_banner