ಕರ್ನಾಟಕದ ಬಸ್‌ ನಿಲ್ದಾಣಗಳಲ್ಲಿ ದೃಷ್ಟಿದೋಷ ಹೊಂದಿರುವ ಪ್ರಯಾಣಿಕರಿಗೆ ಆಡಿಯೋ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಹೈಕೋರ್ಟ್‌ ತಾಕೀತು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಬಸ್‌ ನಿಲ್ದಾಣಗಳಲ್ಲಿ ದೃಷ್ಟಿದೋಷ ಹೊಂದಿರುವ ಪ್ರಯಾಣಿಕರಿಗೆ ಆಡಿಯೋ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಹೈಕೋರ್ಟ್‌ ತಾಕೀತು

ಕರ್ನಾಟಕದ ಬಸ್‌ ನಿಲ್ದಾಣಗಳಲ್ಲಿ ದೃಷ್ಟಿದೋಷ ಹೊಂದಿರುವ ಪ್ರಯಾಣಿಕರಿಗೆ ಆಡಿಯೋ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಹೈಕೋರ್ಟ್‌ ತಾಕೀತು

ಕರ್ನಾಟಕದಲ್ಲಿ ಬಸ್‌ ನಿಲ್ದಾಣ ಮತ್ತು ಬಸ್‌ಗಳಲ್ಲಿ ದೃಷ್ಟಿದೋಷ ಹೊಂದಿರುವ ಪ್ರಯಾಣಿಕರಿಗೆ ಆಡಿಯೋ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ತಾಕೀತು ಮಾಡಿದೆ. (ವರದಿ-ಎಚ್‌. ಮಾರುತಿ, ಬೆಂಗಳೂರು)

ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌ ಎಂದು ನ್ಯಾಯಪೀಠದ ಸ್ಪಷ್ಟಪಡಿಸಿದೆ.
ಚುನಾಯಿತ ಜನಪ್ರತಿನಿಧಿಗಳ ಜಾತಿ ಸಂಬಂಧಿಸಿದ ತಕರಾರು ಅರ್ಜಿಗಳನ್ನು ಇತ್ಯರ್ಥಗೊಳಿಸಬಲ್ಲದು ಕರ್ನಾಟಕ ಹೈಕೋರ್ಟ್‌ ಎಂದು ನ್ಯಾಯಪೀಠದ ಸ್ಪಷ್ಟಪಡಿಸಿದೆ.

ಬೆಂಗಳೂರು: ದೃಷ್ಟಿದೋಷ ಹೊಂದಿರುವ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲಾ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಮುಂದಿನ 2 ವರ್ಷಗಳಲ್ಲಿ ಬಸ್‌ ಸಂಚಾರ ವಿವರಗಳ ಧ್ವನಿವರ್ಧಕ ಪ್ರಕಟಣೆಯ ಆಡಿಯೊ ವ್ಯವಸ್ಥೆ (ಆಡಿಯೊ ಅನೌನ್ಸ್‌ಮೆಂಟ್‌ ಸಿಸ್ಟಂ) ಕಲ್ಪಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಬಸ್‌ ನಿಲ್ದಾಣಗಳಲ್ಲಿ ದೃಷ್ಟಿದೋಷ ಹೊಂದಿರುವ ಪ್ರಯಾಣಿಕರಿಗೆ ಆಡಿಯೋ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಹೈಕೋರ್ಟ್‌ ತಾಕೀತು

ಈ ಸಂಬಂಧ 2022ರಲ್ಲಿ ದೃಷ್ಟಿದೋಷ ಹೊಂದಿರುವ ಹೈಕೋರ್ಟ್‌ ವಕೀಲ ಎನ್‌.ಶ್ರೇಯಸ್‌ ಮತ್ತು ಶ್ರೇಯಸ್‌ ಗ್ಲೋಬಲ್‌ ಟ್ರಸ್ಟ್‌ ಫಾರ್‌ ಸೋಷಿಯಲ್‌ ಕಾಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎನ್‌. ಕೃತಿಕಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿಅರವಿಂದ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ವಿವಿಧ ಬಸ್‌ ನಿಲ್ದಾಣಗಳಲ್ಲಿ ಬಸ್‌ ಗಳ ಆಗಮನ ಮತ್ತು ನಿರ್ಗಮನದ ಸ್ಥಳಗಳಲ್ಲಿ ದೃಷ್ಟಿದೋಷ ಹೊಂದಿದವರೂ ಸೇರಿದಂತೆ ಎಲ್ಲಾ ರೀತಿಯ ಅಂಗವಿಕಲರ ಅನುಕೂಲಕ್ಕಾಗಿ ಬಸ್‌ಗಳಲ್ಲಿ ಆಡಿಯೊ ಅನೌನ್ಸ್‌ಮೆಂಟ್‌ ಸಿಸ್ಟಂ (ಎಎಎಸ್‌) ಕಾರ್ಯ ನಿರ್ವಹಿಸುವ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದೆ. ಅಂಗವಿಕಲರ ಅನುಕೂಲಕ್ಕಾಗಿ ಧ್ವನಿವರ್ಧಕ ಪ್ರಕಟಣೆಯ ಆಡಿಯೊ ವ್ಯವಸ್ಥೆ (ಎಎಎಸ್‌) ಯನ್ನು ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕುಗಳ ಎಲ್ಲಾ ಪ್ರಮುಖ ಬಸ್‌ ನಿಲ್ದಾಣ ಮತ್ತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಸ್ಥಳಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಈ ಯೋಜನೆಯು ನಿರಂತರವಾಗಿ ಮುಂದುವರೆಸಬೇಕು. ಇದಕ್ಕಾಗಿ ಬಜೆಟ್‌ನಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿರಿಸಬೇಕು. ಈ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಜಾರಿಗೊಳ್ಳಬೇಕು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

ಇದಕ್ಕಾಗಿ ಸುಧಾರಿತ ತಾಂತ್ರಿಕ ಉಪಕರಣ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳುವಂತೆಯೂ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ಸಾರಿಗೆ ನಿಗಮಗಳಿಗೆ ನಿರ್ದೇಶಿಸಿದೆ. ಈ ಹಿಂದೆ ಆಡಿಯೊ ಅನೌನ್ಸ್‌ಮೆಂಟ್‌ ಯೋಜನೆ ಜಾರಿಯಲ್ಲಿತ್ತು. ಆದರೆ ನಂತರ ಸ್ಥಗಿತಗೊಂಡಿತ್ತು. ಈ ಸೌಲಭ್ಯವನ್ನು ಪುನಾರಂಭಿಸಲು ಕ್ರಮ ಕೈಗೊಂಡಿರುವ ಅಧಿಕಾರಿಗಳನ್ನು ನ್ಯಾಯಾಲಯ ಅಭಿನಂದಿಸಿದೆ.

ಹೆಚ್ಚುವರಿಯಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತಮ್ಮ ಫ್ಲೀಟ್‌ಗಳಲ್ಲಿ ಎಎಎಸ್ ಅನ್ನು ನಿರ್ವಹಿಸುವಂತೆ ಮತ್ತು ವಿಸ್ತರಿಸಲು ನ್ಯಾಯಾಲಯ ಸೂಚನೆ ನೀಡಿದೆ. ಪ್ರಸ್ತುತ, ಅದರ ಸರಿಸುಮಾರು 6,000 ಫ್ಲೀಟ್‌ನಲ್ಲಿ ಸುಮಾರು 3,500 ಬಿಎಂಟಿಸಿ ಬಸ್‌ಗಳಲ್ಲಿ ನಿವರ್ಧಕ ಪ್ರಕಟಣೆಯ ಆಡಿಯೊ ವ್ಯವಸ್ಥೆ ಇದೆ.

ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ

ಸರ್ಕಾರದ ಆಕ್ಸೆಸಬಲ್ ಇಂಡಿಯಾ ಅಭಿಯಾನದ ಹೊರತಾಗಿಯೂ, ಸಾರ್ವಜನಿಕ ಮೂಲಸೌಕರ್ಯವನ್ನು ತಡೆ ಮುಕ್ತಗೊಳಿಸುವ ಕೆಲಸದ ಪ್ರಗತಿ ನಿಧಾನವಾಗಿದೆ. ವಿಧಾನ ಪರಿಷತ್ತಿನಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 47 ಸರ್ಕಾರಿ ಕಟ್ಟಡಗಳನ್ನು ಮೇಲ್ದರ್ಜೆಗೆ ಏರಿಸಲು ಮಂಜೂರು ಮಾಡಲಾಗಿತ್ತು. ಆದರೆ ಇದುವರೆಗೆ 18 ಮಾತ್ರ ಪ್ರವೇಶಿಸಬಹುದಾದ ಮೂಲಸೌಕರ್ಯವನ್ನು ಹೊಂದಿದೆ.

ಸಾರ್ವಜನಿಕ ಮೂಲಸೌಕರ್ಯ ಸುಧಾರಣೆಗಳ ಪೈಕಿ ಇಳಿಜಾರುಗಳು, ಕೈಹಿಡಿಕೆ, ಟಾಕ್ಟೈಲ್‌ ಟೈಲ್ಸ್‌, ನವೀಕರಿಸಿದ ಶೌಚಾಲಯ, ಬಳಸಬಹುದಾದ ಪಾರ್ಕಿಂಗ್ ಮತ್ತು ಸ್ಥಳಾಂತರಿಸುವ ಕುರ್ಚಿಗಳು ಸೇರಿವೆ. ವಿಕಾಸ ಸೌಧ, ಕೆ.ಸಿ. ಜನರಲ್ ಆಸ್ಪತ್ರೆ, ಕನ್ನಡ ಭವನ, ಮಹಾರಾಣಿ ಕಾಲೇಜು ಮತ್ತು ಮಿನಿ ವಿ.ವಿ. ಟವರ್ ನವೀಕರಣಗಳನ್ನು ಕಂಡಿದೆ. ಹೆಚ್ಚುವರಿಯಾಗಿ, ನಂದಿನಿ ಲೇಔಟ್, ಚಂದ್ರಾ ಲೇಔಟ್ ಮತ್ತು ನಾಗರಭಾವಿಯಲ್ಲಿ ಆಯ್ದ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಈಗ ಬಳಸಬಹುದಾದ ಶೌಚಾಲಯಗಳು ಮತ್ತು ಸುಧಾರಿತ ಸೂಚನಾ ಫಲಕಗಳನ್ನು ಹೊಂದಿವೆ. ಈ ಅಭಿಯಾನಕ್ಕೆ ಇಲ್ಲಿಯವರೆಗೆ 27.05 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು.

(ವರದಿ-ಎಚ್‌. ಮಾರುತಿ, ಬೆಂಗಳೂರು)

Whats_app_banner