IAS Posting: ಐಎಎಸ್‌ ಅಧಿಕಾರಿ ವರ್ಗಾವಣೆ, ಮಂಡ್ಯ ಜಿಲ್ಲಾಪಂಚಾಯಿತಿ ನೂತನ ಸಿಇಒ ಆಗಿ ನಂದಿನಿ ನೇಮಕ
ಕನ್ನಡ ಸುದ್ದಿ  /  ಕರ್ನಾಟಕ  /  Ias Posting: ಐಎಎಸ್‌ ಅಧಿಕಾರಿ ವರ್ಗಾವಣೆ, ಮಂಡ್ಯ ಜಿಲ್ಲಾಪಂಚಾಯಿತಿ ನೂತನ ಸಿಇಒ ಆಗಿ ನಂದಿನಿ ನೇಮಕ

IAS Posting: ಐಎಎಸ್‌ ಅಧಿಕಾರಿ ವರ್ಗಾವಣೆ, ಮಂಡ್ಯ ಜಿಲ್ಲಾಪಂಚಾಯಿತಿ ನೂತನ ಸಿಇಒ ಆಗಿ ನಂದಿನಿ ನೇಮಕ

ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಐಎಎಸ್‌ ಅಧಿಕಾರಿ ಕೆ.ಆರ್‌.ನಂದಿನಿ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಮಂಡ್ಯ ಜಿಪಂ ಸಿಇಒ ಆಗಿ ನೇಮಕಗೊಂಡ ಐಎಎಸ್‌ ಅಧಿಕಾರಿ ಕೆಆರ್‌ ನಂದಿನಿ,
ಮಂಡ್ಯ ಜಿಪಂ ಸಿಇಒ ಆಗಿ ನೇಮಕಗೊಂಡ ಐಎಎಸ್‌ ಅಧಿಕಾರಿ ಕೆಆರ್‌ ನಂದಿನಿ,

ಬೆಂಗಳೂರು: ಕರ್ನಾಟಕ ಸರ್ಕಾರ ಐಎಎಸ್‌ ಅಧಿಕಾರಿಯನ್ನು ವರ್ಗ ಮಾಡಿದ್ದು ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ಆರ್.ನಂದಿನಿ ಅವರನ್ನು ನೇಮಕ ಮಾಡಿದೆ. ಮಂಡ್ಯ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶೇಖ್‌ ತನ್ವೀರ್‌ ಆಸಿಫ್‌ ಅವರು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಈ ಕಾರಣದಿಂದಾಗಿ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇತ್ತು. ಮಂಡ್ಯ ಜಿಲ್ಲಾಧಿಕಾರಿಯಾಗಿರುವ ಡಾ.ಕುಮಾರ ಅವರಿಗೆ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರ ನೀಡಲಾಗಿತ್ತು. ಈಗ ಪೂರ್ಣ ಪ್ರಮಾಣದಲ್ಲಿಯೇ ಅಧಿಕಾರಿ ನಿಯೋಜಿಸಲಾಗಿದೆ.

ಕರ್ನಾಟಕದ ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದ ಶಿಕ್ಷಕ ದಂಪತಿಯ ಪುತ್ರಿಯಾದ ನಂದಿನಿ ಅವರು ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಬಳಿಕ ಬೆಂಗಳೂರಿನ ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪೂರೈಸಿದ್ದಾರೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದವರು. ಆನಂತರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಮೊದಲ ಸೇವೆಯಲ್ಲೇ ಸುಂಕ ಮತ್ತು ತೆರಿಗೆ ಇಲಾಖೆಗೆ ಆಯ್ಕೆಯಾಗಿ ಉತ್ತರ ಭಾರತದಲ್ಲಿ ಕೆಲಸ ಮಾಡಿದರು. ಆದರೆ ಐಎಎಸ್‌ ಆಗಬೇಕು ಎನ್ನುವ ಗುರಿಯೊಂದಿಗೆ ಇನ್ನೆರಡು ಬಾರಿ ಪ್ರಯತ್ನಿಸಿದರೂ ಆಗಲಿಲ್ಲ. ಕೊನೆಗೆ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು. ಆದೂ 2016 ರ ಸಿವಿಲ್ ಸರ್ವೀಸ್ ಪರೀಕ್ಷೆಗಳಲ್ಲಿ ಮೊದಲ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದರು. ಕರ್ನಾಟಕದವರೊಬ್ಬರು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದವರು ಈವರೆಗೂ ಇವರೊಬ್ಬರೇ. ಕರ್ನಾಟಕದ ಸೇವೆಗೆ ನಿಯೋಜನೆಗೊಂಡಿದ್ದ ಅವರು ಬಳ್ಳಾರಿ, ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸಿದ್ದರು. ಎರಡು ವರ್ಷದಿಂದ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿದ್ದರು.

ಶುಕ್ರವಾರ ಸಂಜೆಯೇ ನಂದಿನಿ ಅವರು ಪ್ರಭಾರ ಸಿಇಒ ಆಗಿದ್ದ ಡಾ.ಕುಮಾರ ಅವರಿಂದ ಅಧಿಕಾರ ವಹಿಸಿಕೊಂಡರು.

Whats_app_banner