ಕನ್ನಡ ಸುದ್ದಿ  /  ಕರ್ನಾಟಕ  /  Karnataka Results: ಸಚಿವರ ಮಕ್ಕಳಲ್ಲಿ ಮೂವರಿಗೆ ಭಾರೀ ಮುನ್ನಡೆ, ಚಿಕ್ಕೋಡಿ, ಚಾಮರಾಜನಗರ, ಬೀದರ್‌ನಲ್ಲಿ ಕಾಂಗ್ರೆಸ್ ನಾಗಾಲೋಟ

Karnataka Results: ಸಚಿವರ ಮಕ್ಕಳಲ್ಲಿ ಮೂವರಿಗೆ ಭಾರೀ ಮುನ್ನಡೆ, ಚಿಕ್ಕೋಡಿ, ಚಾಮರಾಜನಗರ, ಬೀದರ್‌ನಲ್ಲಿ ಕಾಂಗ್ರೆಸ್ ನಾಗಾಲೋಟ

Ministers Kids Result ಕರ್ನಾಟಕದಲ್ಲಿ ಆರು ಸಚಿವರ ಮಕ್ಕಳಿಗೆ ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಲಾಗಿತ್ತು. ಇದರಲ್ಲಿ ಮೂವರು ಮುನ್ನಡೆಯಲ್ಲಿದ್ದಾರೆ.

ಪ್ರಿಯಾಂಕ ಜಾರಕಿಹೊಳಿ, ಸಾಗರ್‌ ಖಂಡ್ರೆ, ಸುನೀಲ್‌ ಬೋಸ್‌ ಮುನ್ನಡೆಯಲ್ಲಿದ್ದಾರೆ.
ಪ್ರಿಯಾಂಕ ಜಾರಕಿಹೊಳಿ, ಸಾಗರ್‌ ಖಂಡ್ರೆ, ಸುನೀಲ್‌ ಬೋಸ್‌ ಮುನ್ನಡೆಯಲ್ಲಿದ್ದಾರೆ.

ಬೆಂಗಳೂರು: ಲೋಕಸಭೆ ಚುನಾವಣೆಗೆ ಈ ಬಾರಿ ಕಾಂಗ್ರೆಸ್‌ ಸಚಿವರ ಮಕ್ಕಳಿಗೆ ಮಣೆ ಹಾಕಿತ್ತು. ಆರು ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಲಾಗಿತ್ತು. ಇದರಲ್ಲಿ ಮೂವರು ಭಾರೀ ಮುನ್ನಡೆ ಸಾಧಿಸಿದ್ದಾರೆ. ಮೂವರು ಹಿನ್ನಡೆಯಲ್ಲಿದ್ದಾರೆ. ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿಯಲ್ಲಿ, ಈಶ್ವರ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ ಬೀದರ್‌ ನಲ್ಲಿ ಹಾಗೂ ಡಾ.ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ ಚಾಮರಾಜನಗರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ್‌ ಪುತ್ರ ಮೃಣಾಲ್‌ ಹೆಬ್ಬಾಳಕರ್‌, ಬೆಂಗಳೂರು ದಕ್ಷಿಣದಲ್ಲಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಬಾಗಲಕೋಟೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಡಾ.ಮಹದೇವಪ್ಪ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ‌ಗೆ 1 ಲಕ್ಷಕ್ಕು ಅಧಿಕ ಮತಗಳ ಭಾರೀ ಮುನ್ನಡೆ ಲಭಿಸಿದೆ.ಈವರೆಗ ಸುನೀಲ್ ‌ಬೋಸ್ ‌ಗೆ 4,62,127 ಮತ ಲಭಿಸಿದ್ದರೆ, ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜುಗೆ 3,59,490 ಮತಗಳು ಬಂದಿದ್ದವು. ಇನ್ನೂ ಎಂಟು ಸುತ್ತುಗಳ ಮತ ಎಣಿಕೆ ಬಾಕಿಯಿದ್ದು, ಕಾಂಗ್ರೆಸ್‌ ಮುನ್ನಡೆ ಕಾಯ್ಡುಕೊಂಡಿದೆ.

ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಪ್ರಿಯಾಂಕ ಜಾರಕಿಹೊಳಿ ಭಾರೀ ಮುನ್ನಡೆ ಕಾಯ್ಡುಕೊಂಡಿದ್ದಾರೆ. ಪ್ರಿಯಾಂಕಗೆ 270439 ಮತ ಲಭಿಸಿದರೆ, ಬಿಜೆಪಿಯ ಅಣ್ಣಾ ಸಾಹೇಬ್‌ ಜೊಲ್ಲೆಗೆ 219029 ಮತ ಪಡೆದಿದ್ದು ಇಬ್ಬರ ನಡುವಿನ ಅಂತರ 51410 ಮತಗಳಷ್ಟಿತ್ತು. ಪ್ರಿಯಾಂಕ ಆರಂಭಿಕ ಸುತ್ತುಗಳಿಂದಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೀದರ್‌ ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಭಾರೀ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್‌ ನ ಸಾಗರ್‌ ಖಂಡ್ರೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಾಗರ್‌ಗೆ 340582 ಮತ ಲಭಿಸಿದ್ದರೆ, ಭಗವಂತ ಖೂಬಾ249109 ಮತ ಗಳಿಸಿದ್ದಾರೆ. ಇಬ್ಬರ ನಡುವಿನ ಅಂತರ 91473 ಮತಗಳಾಗಿತ್ತು. ಇನ್ನೂ ಮತ ಎಣಿಕೆ ಬೀದರ್‌ನಲ್ಲಿ ಮುಂದುವರೆದಿತ್ತು.

ಬಾಗಲಕೋಟೆಯಲ್ಲಿ ಶಿವಾನಂದ ಪಾಟೀಲ್‌ ಪುತ್ರಿ ಶಿವಾಣಂದ ಪಾಟೀಲ್‌ 243719 ಮತ ಪಡೆದರೆ, ಬಿಜೆಪಿಯ ಪಿ.ಸಿ.ಗದ್ದೀಗೌಡರಿಗೆ 260413 ಮತಗಳು ಬಂದಿವೆ. ಮತಗಳ ಅಂತರ 16694 ರಷ್ಟಿತ್ತು. ಇಲ್ಲಿಯೂ ಇನ್ನೂ ಹತ್ತು ಸುತ್ತಿನ ಮತ ಎಣಿಕೆ ಬಾಕಿಯಿದೆ.

ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಪುತ್ರ ಮೃಣಾಲ್‌ ಹೆಬ್ಬಾಳಕರ್‌ 197279 ಮತ ಪಡೆದರೆ, ಜಗದೀಶ್‌ ಶೆಟ್ಟರ್‌ಗೆ 242895 ಮತ ಬಂದಿದ್ದವು. ಇಬ್ಬರ ನಡುವೆ 45616 ಮತಗಳ ಅಂತರ ಇತ್ತು, ಇದು ಮಧ್ಯಾಹ್ನ 12ರ ಹೊತ್ತಿಗೆ ಇನ್ನೂ ಹೆಚ್ಚಿತು. ಜಗದೀಶ್‌ ಶೆಟ್ಟರ್‌ ಮುನ್ನಡೆ- 76588 ಮತಕ್ಕೆ ತಲುಪಿತ್ತು. ಸ್ವತಃ ಹೆಬ್ಬಾಳಕರ್‌ ಅವರ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆ ಹಿನ್ನಡೆ ಉಂಟಾಗಿದೆ.

ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಸೌಮ್ಯ ರೆಡ್ಡಿ194319 ಮತ ಬಂದರೆ, ಬಿಜೆಪಿಯ ತೇಜಸ್ವಿ ಸೂರ್ಯ 410804 ಮತ ಪಡೆದಿದ್ದಾರೆ. ಇಬ್ಬರ ನಡುವಿನ ಅಂತರವೇ 216485 ಮತಗಳಿದ್ದವು. ಇನ್ನೂ ಮತ ಎಣಿಕೆ ನಡೆದಿದೆ.

ಟಿ20 ವರ್ಲ್ಡ್‌ಕಪ್ 2024