ಕನ್ನಡ ಸುದ್ದಿ  /  ಕರ್ನಾಟಕ  /  Hassan Results: ಹಾಸನದಲ್ಲಿ ಪ್ರಜ್ವಲ್‌- ಶ್ರೇಯಸ್‌ ನಡುವೆ ಟೈಟ್‌ ಫೈಟ್‌‌, ಮುನ್ನಡೆಯಲ್ಲಿ ಕಾಂಗ್ರೆಸ್

Hassan Results: ಹಾಸನದಲ್ಲಿ ಪ್ರಜ್ವಲ್‌- ಶ್ರೇಯಸ್‌ ನಡುವೆ ಟೈಟ್‌ ಫೈಟ್‌‌, ಮುನ್ನಡೆಯಲ್ಲಿ ಕಾಂಗ್ರೆಸ್

Karnataka Results ಇಡೀ ದೇಶದ ಗಮನ ಸೆಳೆದಿರುವ ಹಾಸನದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ತುರುಸಿನ ಸ್ಪರ್ಧೆ ಇರುವುದು ಮತ ಎಣಿಕೆಯಲ್ಲಿ ಕಂಡು ಬರುತ್ತಿದೆ.

ಹಾಸನದಲ್ಲಿ ಪ್ರಜ್ವಲ್‌ ಹಾಗೂ ಶ್ರೇಯಸ್‌ ನಡುವೆ ತೀವ್ರ ಸ್ಪರ್ಧೆ.
ಹಾಸನದಲ್ಲಿ ಪ್ರಜ್ವಲ್‌ ಹಾಗೂ ಶ್ರೇಯಸ್‌ ನಡುವೆ ತೀವ್ರ ಸ್ಪರ್ಧೆ.

ಹಾಸನ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದಿರುವ ಹಾಸನ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ನೇರಾನೇರ ಸ್ಪರ್ಧೆ ಕಂಡು ಬಂದಿದೆ. ಮತ ಎಣಿಕೆ ಸುತ್ತುಗಳಲ್ಲಿ ಒಮ್ಮೆ ಜೆಡಿಎಸ್‌ ಮತ್ತೊಮ್ಮೆ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ಎಸ್‌ ಐಟಿ ವಶದಲ್ಲಿರುವ ಪ್ರಜ್ವಲ್‌ ರೇವಣ್ಣ( Prajwal Revanna) ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈಗಾಗಲೇ ಏಳು ಸುತ್ತುಗಳ ಮತ ಎಣಿಕೆಯಲ್ಲಿ ಜೆಡಿಎಸ್‌ ಅಲ್ಪ ಮತಗಳ ಅಂತರವನ್ನು ಕಾಯ್ಡುಕೊಂಡಿತ್ತು. ನಂತರ ಅದು ಕಾಂಗ್ರೆಸ್‌ ಕಡೆಗೆ ತಿರುಗಿತು.

ಟ್ರೆಂಡಿಂಗ್​ ಸುದ್ದಿ

ಈವರೆಗೂ ಮುಗಿದಿರುವ ಮತ ಎಣಿಕೆಯ ಪ್ರಕಾರ ಪ್ರಜ್ವಲ್‌ ರೇವಣ್ಣ ಅವರು 215941 ಮತ ಗಳಿಸಿದರೆ, ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್‌ ಅವರಿಗೆ 210466 ಮತಗಳು ಲಭಿಸಿವೆ. ಇಬ್ಬರ ನಡುವಿನ ಮತಗಳ ಅಂತರ 5475 ರಷ್ಟಿತ್ತು. ಪ್ರಜ್ವಲ್‌ ರೇವಣ್ಣ ಮುನ್ನಡೆಯನ್ನು ಕಾಯ್ದುಕೊಂಡಿದ್ದರು.

ಆದರೆ ಎಂಟನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಮತ್ತೆ ಕಾಂಗ್ರೆಸ್‌ ನ ಶ್ರೇಯಸ್‌ ಪಟೇಲ್‌ ಮುನ್ನಡೆ ಕಾಯ್ದುಕೊಂಡರು. ಶ್ರೇಯಸ್‌ ಪಟೇಲ್‌ಗೆ386393 ಮತ ಬಂದರೆ, ಪ್ರಜ್ವಲ್‌ ರೇವಣ್ಣ ಅವರಿಗೆ 376206 ಮತ ಲಭಿಸಿದ್ದವು. ಮತಗಳ ಅಂತರ 10187ರಷ್ಟಿತ್ತು.

ಹತ್ತನೇ ಸುತ್ತು ಮುಗಿಯುವ ಹೊತ್ತಿಗೆ ಶ್ರೇಯಸ್‌ ಅಂತರ ಹೆಚ್ಚಿತ್ತು.13537 ಮತಗಳ ಅಂತರವನ್ನು ಶ್ರೇಯಸ್‌ ಕಾಯ್ಡುಕೊಂಡಿದ್ದರು.

ಇದರಿಂದ ಫಲಿತಾಂಶ ಕೊನೆವರೆಗೂ ಕುತೂಹಲವನ್ನು ಮೂಡಿಸಲಿದೆ. ಇನ್ನೂ ಹತ್ತು ಸುತ್ತಿನ ಮತ ಎಣಿಕೆ ಅಲ್ಲಿ ಬಾಕಿಯಿದೆ.

ಹಾಸನದಲ್ಲಿ ವಿಜಯಲಕ್ಷ್ಮಿ ಹೊಯ್ದಾಟದಲ್ಲಿದ್ದು ಯಾರಿಗಾದರೂ ಗೆಲುವು ಸಿಗಬಹುದು. ಮತ ಅಂತರ ಕಡಿಮೆ ಇರಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

ನೋಟಾಕ್ಕೂ ಮತ

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯದ ಪ್ರಕರಣ ಮತದಾನದ ವೇಳೇ ಹೆಚ್ಚು ಬಯಲಿಗೆ ಬಂದಿರಲಿಲ್ಲ. ಆದರೂ ಇಲ್ಲಿನ ಮತದಾರರು 5713 ನೋಟಾಕ್ಕೆ ಚಲಾಯಿಸಿದ್ದಾರೆ. ಈ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆಯಿದೆ.

ಟಿ20 ವರ್ಲ್ಡ್‌ಕಪ್ 2024