ಕನ್ನಡ ಸುದ್ದಿ  /  ಕರ್ನಾಟಕ  /  Karnataka Results: ಕರ್ನಾಟಕದಲ್ಲಿ ಬೆಳಿಗ್ಗೆ 10ರ ಹೊತ್ತಿಗೆ ಎನ್‌ಡಿಎ ಭಾರೀ ಮುನ್ನಡೆ, ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್‌

Karnataka Results: ಕರ್ನಾಟಕದಲ್ಲಿ ಬೆಳಿಗ್ಗೆ 10ರ ಹೊತ್ತಿಗೆ ಎನ್‌ಡಿಎ ಭಾರೀ ಮುನ್ನಡೆ, ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್‌

Karnataka Trends ಲೋಕಸಭೆ ಚುನಾವಣೆಯ ಕರ್ನಾಟಕದ ಮತ ಎಣಿಕೆ ಪ್ರಗತಿಯಲ್ಲಿದ್ದು, ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ಹಲವು ಕಡೆ ಹಿನ್ನಡೆ ಅನುಭವಿಸಿದ್ದು. ಆರು ಕಡೆ ಮುನ್ನಡೆ ಕಾಯ್ದುಕೊಂಡಿದೆ.

ಕರ್ನಾಟಕದಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ.
ಕರ್ನಾಟಕದಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಹುತೇಕ ಬಿಜೆಪಿ ಮುನ್ನಡೆ ಸಾಧಿಸಿದೆ. ಜೆಡಿಎಸ್‌ ಕೂಡ ಮೂರು ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಕರ್ನಾಟಕದ ಹಿನ್ನಡೆ ಕಾಣುತ್ತಿದೆ. ಈವರೆಗೂ ಬಿಜೆಪಿ19, ಜೆಡಿಎಸ್‌ 3 ಹಾಗೂ ಕಾಂಗ್ರೆಸ್‌ 6 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬೆಳಿಗ್ಗೆ 8 ಕ್ಕೆ ಬಹುತೇಕ ಎಲ್ಲ ಕಡೆ ಮತ ಎಣಿಕೆ ಶುರುವಾಯಿತು.ಮೊದಲು ಅಂಚೆ ಮತ ಎಣಿಕೆ ಶುರುವಾಯಿತು. ಇದಾಗುತ್ತಲೇ ಮೊದಲ ಸುತ್ತಿನ ಮತ ಎಣಿಕೆಯನ್ನೂ ಹದಿನೈದು ನಿಮಿಷದಲ್ಲಿಯೇ ಶುರು ಮಾಡಲಾಯಿತು. ಬಹುತೇಕ ಕಡೆ ಮೂರನೇ ಸುತ್ತು ಮುಗಿಸಿ ನಾಲ್ಕು ಹಾಗೂ ಐದನೇ ಸುತ್ತಿನ ಮತ ಎಣಿಕೆ ಪ್ರಗತಿಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ನಾಲ್ಕು ಕ್ಷೇತ್ರ, ತುಮಕೂರು, ಬೆಳಗಾವಿ, ಬೀದರ್‌, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಚಿತ್ರದುರ್ಗದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಕೋಲಾರ, ಮಂಡ್ಯ ಹಾಗೂ ಹಾಸನದಲ್ಲಿ ಜೆಡಿಎಸ್‌ ಮುನ್ನಡೆ ಕಾಪಾಡಿಕೊಂಡಿದೆ. ಚಿಕ್ಕೋಡಿ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಚಾಮರಾಜನಗರ, ರಾಯಚೂರು,ಕಲಬುರಗಿಯಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದೆ.

ಬೆಂಗಳೂರು ಗ್ರಾಮಾಂತರ, ಹಾಸನ, ಚಿತ್ರದುರ್ಗ, ಬಳ್ಳಾರಿ, ಚಿಕ್ಕೋಡಿ ಸಹಿತ ಹಲವು ಕ್ಷೇತ್ರದಲ್ಲಿ ನೇರಾನೇರ ಹಣಾಹಣಿ ಕಂಡುಕೊಂಡಿದೆ.

ಚಿತ್ರದುರ್ಗದಲ್ಲಿ 3,341 ಮತಗಳಿಂದ ಬಿಜೆಪಿ ಮುನ್ನಡೆ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಗೋವಿಂದ ಕಾರಜೋಳ ಅವರು 3,341 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.ಗೋವಿಂದ ಕಾರಜೋಳ ಅವರು 67,985 ಮತ ಗಳಿಸಿದ್ದು, ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ64,644 ಮತ ಪಡೆದಿದ್ದಾರೆ. ಎರಡನೇ ಸುತ್ತಿನಲ್ಲಿ 1,37,534 ಮತ ಎಣಿಕೆ ಆಗಿದೆ.

ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ ಮುನ್ನಡೆ

ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳುತ್ತಲೇ ಇದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೋಳಿ ಪಡೆದ ಮತಗಳು 126727. ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಪಡೆದ ಮತಗಳು 104189. ಅಂತರ - 22538 ಮತಗಳಿಷ್ಟಿತ್ತು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕೈ ಬಲ

ಚಾಮರಾಜನಗರದಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್. 30,779ಮತಗಳಿಂದ ಸುನೀಲ್ ಬೋಸ್ ಮುನ್ನಡೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ 1,50,701 ಮತ ಲಭಿಸಿದರೆ, ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜುಗೆ 1,19,922 ಮತ ಬಂದಿವೆ.

ಮೈಸೂರು-ಕೊಡಗು ಕ್ಷೇತ್ರದಲ್ಲಿ ರಾಜವಂಶಸ್ಥ ಮುನ್ನಡೆ

ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದು, ಯದುವೀರ್ ಮತಗಳ ಮುನ್ನಡೆ 26087ರಷ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ -107650 ಮತ ಬಂದರೆ, ಬಿಜೆಪಿ ಅಭ್ಯರ್ಥಿ ಯದುವೀರ್-133737 ಮತ ಲಭಿಸದೆ.

ವಿಜಯಪುರದಲ್ಲಿ ಬಿಜೆಪಿ

ವಿಜಯಪುರ ಮೀಸಲು ಕ್ಷೇತ್ರದ ಮೊದಲನೇ ಸುತ್ತಿನ ಅಂತ್ಯಕ್ಕೆ ಬಿಜೆಪಿಯ ರಮೇಶ ಜಿಗಜಿಣಗಿ ಮುನ್ನಡೆ ಕಾಯ್ಡುಕೊಂಡಿದ್ದಾರೆ.

ಬಿಜೆಪಿಯ ರಮೇಶ ಜಿಗಜಿಣಗಿ 4426 ಮತ ಗಳಿಸಿದರೆ.

ಕಾಂಗ್ರೆಸ್ ನ ರಾಜು ಅಲಗೂರ ಅವರಿಗೆ 2323 ಮತ ಲಭಿಸಿವೆ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮುನ್ನಡೆ-2103ಯಷ್ಟಿತ್ತು.

ಹಾಸನದಲ್ಲಿ ಪ್ರಜ್ವಲ್‌ಗೆ ಮುನ್ನಡೆ

ಬಹು ನಿರೀಕ್ಷೆಇತ ಹಾಸನ ಕ್ಷೇತ್ರದ ಆರನೇ ಸುತ್ತು ಮುಕ್ತಾಯಕ್ಕೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 2950 ಮತಗಳ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ನ ಪ್ರಜ್ವಲ್‌ 164699, ಕಾಂಗ್ರೆಸ್ ನ ಶ್ರೇಯಸ್‌ ಪಟೇಲ್‌ 161749 ಮತ ಪಡೆದಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್‌ ನಾಗಾಲೋಟ

ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಕುಮಾರಸ್ವಾಮಿ ಅವರು 60,519 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಜೆಡಿಎಸ್​​ (ಮೈತ್ರಿ ಅಭ್ಯರ್ಥಿ)- ಹೆಚ್.ಡಿ.ಕುಮಾರಸ್ವಾಮಿ ಪಡೆದ ಮತಗಳು 1,50,629 ರಷ್ಟಿದ್ದರೆ, ಕಾಂಗ್ರೆಸ್​- ವೆಂಕಟರಮಣೇಗೌಡ @ ಸ್ಟಾರ್ ಚಂದ್ರು - ಪಡೆದ ಮತಗಳು- 90,110 ರಷ್ಟಿತ್ತು.

ಟಿ20 ವರ್ಲ್ಡ್‌ಕಪ್ 2024