ಬೆಂಗಳೂರು ಡಿಎಚ್‌ಒ, ಹಿರಿಯೂರು ಎಸಿಎಫ್‌, ಚನ್ನಪಟ್ಟಣ ಡಿವೈಎಸ್ಪಿ ಬಳಿ ಕೋಟಿ ಕೋಟಿ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದ್ದೆಷ್ಟು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಡಿಎಚ್‌ಒ, ಹಿರಿಯೂರು ಎಸಿಎಫ್‌, ಚನ್ನಪಟ್ಟಣ ಡಿವೈಎಸ್ಪಿ ಬಳಿ ಕೋಟಿ ಕೋಟಿ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದ್ದೆಷ್ಟು

ಬೆಂಗಳೂರು ಡಿಎಚ್‌ಒ, ಹಿರಿಯೂರು ಎಸಿಎಫ್‌, ಚನ್ನಪಟ್ಟಣ ಡಿವೈಎಸ್ಪಿ ಬಳಿ ಕೋಟಿ ಕೋಟಿ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದ್ದೆಷ್ಟು

ಮಿತಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ದೂರು ಆಧರಿಸಿ ಕರ್ನಾಟಕದ ನಾನಾ ಊರುಗಳಿಲ್ಲ ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಆಸ್ತಿ ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ.

ಕರ್ನಾಟಕದಲ್ಲಿ ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ನಗದು ಹಾಗೂ ಆಭರಣ, ನೋಟು ಎಣಿಸುವ ಯಂತ್ರ.
ಕರ್ನಾಟಕದಲ್ಲಿ ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ನಗದು ಹಾಗೂ ಆಭರಣ, ನೋಟು ಎಣಿಸುವ ಯಂತ್ರ.

ಬೆಂಗಳೂರು: ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದ ತಂಡವು ಕರ್ನಾಟಕದ ನಾನಾ ಭಾಗದಲ್ಲಿರುವ ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಮನೆ, ಕಚೇರಿಗಳ ಮೇಲೆ ಮಂಗಳವಾರ ದಾಳಿ ನಡೆಸಿತ್ತು. ಚಿತ್ರದುರ್ಗ, ಬೆಂಗಳೂರು, ಕಲಬುರಗಿ, ಗದಗ, ಕೊಪ್ಪಳದಲ್ಲಿ ಏಕಕಾಲಕ್ಕೆ ನಡೆದಿದ್ದ ದಾಳಿ ಮಂಗಳವಾರ ರಾತ್ರಿವರೆಗ ತಪಾಸಣೆ ಮುಂದುವರಿದಿತ್ತು. ಭ್ರಷ್ಟ ಅಧಿಕಾರಿಗಳ ಕಚೇರಿ. ಮನೆ ಮೇಲೆ ದಾಳಿ ವೇಳೆ ಮಿತಿಗಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿತ್ತು. ನಗದು ಹಣ, ಆಭರಣ, ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ಕೆಲವು ಅಧಿಕಾರಿಗಳ ಆಸ್ತಿಯನ್ನು ಮೂರ್ನಾಲ್ಕು ವರ್ಷದಲ್ಲಿಯೇ ಹೆಚ್ಚಾಗಿರುವುದು ಕಂಡು ಬಂದಿತ್ತು. ಇನ್ನೂ ವಿಚಾರಣೆ ಮುಂದುವರಿದಿದ್ದು. ವಶಪಡಿಸಿಕೊಂಡಿರುವ ಅಧಿಕೃತ ಮಾಹಿತಿಯನ್ನು ಅಂತಿಮಗೊಳಿಸಲಾಗುತ್ತಿದೆ. ಇವರ ವಿರುದ್ದ ಮೊಕದ್ದಮೆಗಳೂ ದಾಖಲಾಗಿದ್ದು, ತನಿಖೆಯೂ ಶುರುವಾಗಿದೆ. ಬೇರೆ ಬೇರೆ ಭಾಗದ ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿ, ಹಣದ ವಿವರ ಹೀಗಿದೆ ನೋಡಿ.

  • ಚನ್ನಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಡಿವೈಎಸ್​ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಜುಂಡಯ್ಯ ಅವರ ವಿವಿಧೆಡೆಯ ನಿವಾಸಗಳ ಮೇಲೆ ದಾಳಿ ಮಾಡಿದಾಗ ಪತ್ತೆಯಾಗಿರುವ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 12,53,00,225 ಕೋಟಿ ರೂ. ನಿಗದಿಗಿಂತ ನಾಲ್ಕೈದು ಪಟ್ಟು ಆಸ್ತಿ ಇವರ ಬಳಿ ಪತ್ತೆಯಾಗಿದೆ. ಬೆಂಗಳೂರಿನ ಹೊರ ವಲಯದ ರಾಜಾನುಕುಂಟೆ ಬಳಿ ಇರುವ ನಂಜುಂಡಯ್ಯ ಅವರ ನಿವಾಸ ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದು ನಿಜ. ಅವರ ಮನೆ ಕಂಡು ಒಳ ಹೊಕ್ಕಾಗ ಇದೇನೂ ಸಾಮಾನ್ಯ ಮನೆಯೋ ಅರಮನೆಯೋ ಎನ್ನುವ ಅನುಮಾನವೂ ಲೋಕಾಯುಕ್ತ ಅಧಿಕಾರಿಗಳಿಗೆ ಕಾಡಿತ್ತು. ಮನೆಯೊಳಗೆ ಏನೆಲ್ಲಾ ಐಶಾರಾಮಿ ವ್ಯವಸ್ಥೆ ಇದೆ ಎಂದರೆ ಅಲ್ಲಿ ಬೃಹತ್‌ ಈಜು ಕೊಳ, ಜಿಮ್ ಮತ್ತು ಹೋಮ್‌ ಥಿಯೇಟರ್ ಕೂಡ ಪತ್ತೆಯಾಗಿತ್ತು.
  • ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿಯಾಗಿರುವ ಏಕೇಶ್ ಬಾಬು ಅವರ ಬಳಿಯೂ ಭಾರೀ ಪ್ರಮಾಣದಲ್ಲಿ ಆಸ್ತಿ, ಹಣ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ಅವರ ಬಳಿಕ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 7,92,00,000 ಕೋಟಿ ರೂ. ದೊರೆತಿದೆ. ವಿಶೇಷ ಎಂದರೆ ಏಕೇಶ್‌ ಬಾಬು ಅವರ ನಿವಾಸದಲ್ಲಿ ಹಣ ಎಣಿಸುವ ಮಷಿನ್ ಪತ್ತೆಯಾಗಿದ್ದು., ಇದನ್ನು ಕಂಡು ಅಧಿಕಾರಿಗಳೇ ಹೌ ಹಾರಿದ್ದಾರೆ.

    ಇದನ್ನೂ ಓದಿರಿ: Bidar News: 6ನೇ ತರಗತಿಗೆ ಪ್ರವೇಶ ನೀಡಲು ಲಂಚಕ್ಕೆ ಬೇಡಿಕೆ; ಬೀದರ್‌ನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಿನ್ಸಿಪಾಲ್
  • ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ಬೆಸ್ಕಾಂನಲ್ಲಿ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿರುವ ಎಂ. ಲೋಕೇಶ್ ಬಾಬು ಅವರ ಬಳಿಯೂ ನಿರೀಕ್ಷೆ ಮೀರಿದ ಆಸ್ತಿ ದೊರೆತಿದೆ. ಅವರ ಬಳಿ ಸಿಕ್ಕ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 6,70,95,000 ಕೋಟಿ ರೂ. ಇದು ಅವರ ವೇತನ ಹಾಗೂ ಇತರೆ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಿದೆ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಾ.ಸುನೀಲ್ ಕುಮಾರ್ ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಿದಾಗ ಭರ್ಜರಿ ಪ್ರಮಾಣದ ಆಸ್ತಿಯೇ ದೊರೆತಿದೆ. ಸುರೇಶ್‌ಕುಮಾರ್‌ ಅವರ ಬಳಿ ಪತ್ತೆಯಾಗಿರುವ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 6,63,90,000 ಕೋಟಿ ರೂ. ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ಡಿಹೆಚ್​ಒ ಸುನಿಲ್ ಕುಮಾರ್‌ ನಿವಾಸದ ಮೇಲೆ ದಾಳಿ ನಡೆಸಲು ಬಂದಾಗ ತಾಸು ಗಟ್ಟಲೇ ಕಾಯಿಸಿದ್ದರು. ಕೊನೆಗೆ ಬಿಸಿ ಮುಟ್ಟಿಸಿದ ನಂತರ ಕುಟುಂಬಸ್ಥರು ತನಿಖೆಗೆ ಅನುವು ಮಾಡಿಕೊಟ್ಟಿದ್ದರು. ಸುನೀಲ್‌ ಕುಮಾರ್‌ ಅವರ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನಾಭರಣ ಹಾಗು ಬೆಳ್ಳಿ ವಸ್ತುಗಳು ತನಿಖೆ ವೇಳೆ ಪತ್ತೆಯಾಗಿವೆ.

    ಇದನ್ನೂ ಓದಿರಿ: Mysore News: ಮನೆಯಲ್ಲೇ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಚೆಸ್ಕಾಂ ಎಂಜಿನಿಯರ್‌ ; ಚಾಮರಾಜನಗರದಲ್ಲೂ ಇಬ್ಬರ ಬಂಧನ
  • ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿನ ಮಹಾನಗರ ಪಾಲಿಕೆಯಲ್ಲಿ ಅಧೀಕ್ಷಕ ಎಂಜಿನಿಯರ್‌ ಆಗಿರುವ ರಾಮಪ್ಪ ಜಾಧವ್‌ ಅವರ ಬಳಿಯೂ ಭಾರೀ ಪ್ರಮಾಣದ ಆಸ್ತಿ ಲೋಕಾಯುಕ್ತರಿಗೆ ಸಿಕ್ಕಿವೆ. ಅವರ ಬಳಿ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 3,58,46,000 ಕೋಟಿ ರೂ. ದಾಖಲೆ,ನಗದು ಸಂಗ್ರಹವಾಗಿದೆ.
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿರುವ ಎಸ್.ಸುರೇಶ್ ಅವರ ಬಳಿಯೂ ಭಾರೀ ಆಸ್ತಿ ದೊರೆತಿದೆ. ಸುರೇಶ್‌ ಅವರಿಂದ 3,50,14,417 ಕೋಟಿ ರೂ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಪತ್ತೆ ಮಾಡಲಾಗಿದೆ.
  • ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರಿಗೆ ನಿರೀಕ್ಷಕರಾಗಿರುವ ಕೃಷ್ಣಪ್ಪ ಅವರ ನಿವಾಸದ ಮೇಲೂ ದಾಳಿ ಮಾಡಲಾಗಿತ್ತು. ಆಗ ಅವರ ಬಳಿ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 2,21,09,551 ಕೋಟಿ ರೂ. ನಗ, ನಗದು ಹಾಗೂ ಆಸ್ತಿ ದಾಖಲೆಗಳು ಸಿಕ್ಕಿವೆ.
  • ಗದಗದಲ್ಲಿ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಲಕ್ಷ್ಮಣ ಕೊನೆರಪ್ಪ ಕರ್ಣಿ ಅವರ ಬಳಿ ಸಿಕ್ಕ ಆಸ್ತಿ ಅವರ ಸಂಪಾದನೆಗಿಂತ ಐದಾರು ಪಟ್ಟು ಅಧಿಕವಾಗಿದೆ. ಕರ್ಣಿ ಅವರ ಬಳಿ ಒಟ್ಟು 2,01,81,000 ಕೋಟಿ ರೂ ಮೌಲ್ಯ. ಚರಾಸ್ತಿ ಮತ್ತು ಸ್ಥಿರಾಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.
  • ಬೆಂಗಳೂರಿನಲ್ಲಿ ಕಂದಾಯ ನಿರೀಕ್ಷಕಯಾಗಿ ಕೆಲಸ ಮಾಡುತ್ತಿರುವ ಎಸ್.ಜಿ.ಸುರೇಶ್ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 1,82,61,215 ಕೋಟಿ ರೂಗಳಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿಯೇ ಅಕ್ರಮ ಆಸ್ತಿ ಇರುವುದು ಕಂಡು ಬಂದಿದೆ.

    ಇದನ್ನೂ ಓದಿರಿ: ಕರ್ನಾಟಕದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; 26 ಕೋಟಿ ರೂಪಾಯಿಗೂ ಅಧಿಕ ಆದಾಯ ಮೀರಿದ ಆಸ್ತಿ ಪತ್ತೆ
  • ಕೊಪ್ಪಳದಲ್ಲಿ ಅಬಕಾರಿ ಇಲಾಖೆಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಅಗಡಿ ಅವರ ಬಳಿಯೂ ಮಿತಿಗೆ ಮೀರಿದ ಆಸ್ತಿಯನ್ನು ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ ಮೌಲ್ಯ 1,61,23,175 ರೂ.ಗಳಷ್ಟಾಗಿದೆ.

Whats_app_banner