Honeytrap Karnataka: ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ; ಸಚಿವ ಕೆಎನ್‌ ರಾಜಣ್ಣ ಹೇಳಿಕೆ ಸೇರಿ 5 ಮುಖ್ಯ ಅಂಶ
ಕನ್ನಡ ಸುದ್ದಿ  /  ಕರ್ನಾಟಕ  /  Honeytrap Karnataka: ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ; ಸಚಿವ ಕೆಎನ್‌ ರಾಜಣ್ಣ ಹೇಳಿಕೆ ಸೇರಿ 5 ಮುಖ್ಯ ಅಂಶ

Honeytrap Karnataka: ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ; ಸಚಿವ ಕೆಎನ್‌ ರಾಜಣ್ಣ ಹೇಳಿಕೆ ಸೇರಿ 5 ಮುಖ್ಯ ಅಂಶ

Honeytrap Karnataka: ಕರ್ನಾಟಕ ವಿಧಾನಸಭೆಯಲ್ಲಿ ಹನಿಟ್ರ್ಯಾಪ್‌ ವಿಚಾರ ಪ್ರಸ್ತಾಪವಾಗಿದೆ. ರಾಷ್ಟ್ರೀಯ ನಾಯಕರು ಸೇರಿ 48 ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ ಬಿದ್ದಿರುವುದಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದರು. ಅವರ ಹೇಳಿಕೆಯ 5 ಅಂಶ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರ ಹೇಳಿಕೆ ವಿವರ ಇಲ್ಲಿದೆ.

ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎಂದು ಸಚಿವ ಕೆಎನ್‌ ರಾಜಣ್ಣ ಹೇಳಿದ್ದಾರೆ. ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.
ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎಂದು ಸಚಿವ ಕೆಎನ್‌ ರಾಜಣ್ಣ ಹೇಳಿದ್ದಾರೆ. ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.

Honeytrap Karnataka: ಕರ್ನಾಟಕ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಇಂದು ಗಂಭೀರ ಚರ್ಚೆಗೆ ಒಳಗಾಯಿತು. ಬಿಜೆಪಿ ಶಾಸಕ ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ್ದು, ಸಚಿವ ಕೆಎನ್‌ ರಾಜಣ್ಣ ಅವರ ಹೆಸರನ್ನು ಉಲ್ಲೇಖಿಸಿದರು. ಹೀಗಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ವಿದಾನಸಭೆ ಕಲಾಪದಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತ, ರಾಷ್ಟ್ರೀಯ ನಾಯಕರು ಸೇರಿ 48 ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ. ನನ್ನ ಮೇಲೆ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಲಿಖಿತ ದೂರು ದಾಖಲಿಸುವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಆಗ್ರಹಿಸಿದರು.

ರಾಷ್ಟ್ರೀಯ ನಾಯಕರು ಸೇರಿ 48 ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ: 5 ಮುಖ್ಯ ಅಂಶ

ಕರ್ನಾಟಕ ಬಜೆಟ್‌ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ವಿಜಯಪುರ ಶಾಸಕ, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸುವ ಎರಡು ಪ್ರಯತ್ನ ನಡೆದಿದೆ. ಹನಿಟ್ರ್ಯಾಪ್ ಬಲೆಗೆ ಬಿದ್ದವರನ್ನು ಬ್ಲ್ಯಾಕ್‌ಮೇಲ್ ಮಾಡುವುದು ಕೂಡ ನಡೆದಿದೆ. ಸುಸಂಸ್ಕೃತ ಸಮಾಜದ ಕರ್ನಾಟಕದಲ್ಲಿ ಇಂತಹ ಪ್ರಕರಣ ನಾಚಿಕೆಗೇಡಿನ ಸಂಗತಿ. ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದ್ದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಹೆಸರನ್ನು ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದ ಬಳಿಕ, ಹನಿಟ್ರ್ಯಾಪ್ ವಿಚಾರವನ್ನು ಸದನದಲ್ಲಿ ಅವರು ಒಪ್ಪಿಕೊಂಡು ಘಟನೆಯ ವಿವರ ನೀಡಿದರು.

1) ಕರ್ನಾಟಕವು ಸಿಡಿ ಮತ್ತು ಪೆನ್ ಡ್ರೈವ್ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಎಂದು ಅನೇಕ ಜನರು ಹೇಳುತ್ತಾರೆ. ಇದು ಗಂಭೀರ ಆರೋಪವಾಗಿದೆ. ತುಮಕೂರಿನ ಪ್ರಭಾವಿ ಮಂತ್ರಿಯೊಬ್ಬರು ಹನಿಟ್ರ್ಯಾಪ್‌ ಬಲೆಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

2) ತುಮಕೂರಿನ ಪ್ರಭಾವಿ ಮಂತ್ರಿ ಎಂದರೆ ಇರೋದೇ ಇಬ್ಬರು. ನಾನು ಮತ್ತು ಜಿ ಪರಮೇಶ್ವರ ಅವರು. ಈ ಬಗ್ಗೆ ಲಿಖಿತ ದೂರು ದಾಖಲಿಸುವೆ. ಗೃಹ ಸಚಿವರು ಖುದ್ದು ಈ ವಿಚಾರದ ತನಿಖೆಗೆ ಗಮನಹರಿಸಬೇಕು.

3) ಹನಿಟ್ರ್ಯಾಪ್ ವಿಚಾರ ಎರಡು ವಿಭಿನ್ನ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ್ದು ಇದೆ. ರಾಷ್ಟ್ರೀಯ ನಾಯಕರು ಸೇರಿ ವಿವಿಧ ರಾಜಕೀಯ ಪಕ್ಷಗಳ 48 ರಾಜಕಾರಣಿಗಳ ಹನಿಟ್ರ್ಯಾಪ್ ಪೆನ್‌ಡ್ರೈವ್ ಮತ್ತು ಸಿಡಿಗಳಿವೆ.

4) ಸದ್ಯದ ಮಾಹಿತಿ ಪ್ರಕಾರ 48 ರಾಜಕೀಯ ನಾಯಕರು ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ. ನನ್ನ ಮೇಲೂ ಇಂತಹ ಪ್ರಯತ್ನವಾಗಿದೆ. ನನ್ನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿ ಹೇಳಿಕೆ ನೀಡುತ್ತಿದ್ದು, ಲಿಳಿತ ದೂರು ದಾಖಲಿಸುವೆ.

5) ನನ್ನ ಮೇಲಿನ ಹನಿಟ್ರ್ಯಾಪ್ ಪ್ರಯತ್ನದ ಲಿಖಿತ ದೂರು ಪರಿಶೀಲಿಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ನಟರಷ್ಟೇ ಅಲ್ಲ, ನಿರ್ದೇಶಕರು, ನಿರ್ಮಾಪಕರು ಎಲ್ಲರ ವಿವರ ಬಹಿರಂಗವಾಗಬೇಕು. ಅವರನ್ನು ಕಾನೂನು ಚೌಕಟ್ಟಿನಲ್ಲಿ ನಿಲ್ಲಿಸಬೇಕು. ಸಾರ್ವಜನಿಕರಿಗೆ ಈ ಎಲ್ಲ ವಿವರ ಲಭ್ಯವಾಗಬೇಕು.

ಸದನದ ಘನತೆ ಎತ್ತಿ ಹಿಡಿಯುವೆ, ತನಿಖೆಗೆ ಕ್ರಮ ಜರುಗಿಸುವೆ ಎಂದ ಗೃಹಸಚಿವ ಜಿ ಪರಮೇಶ್ವರ

ಹನಿಟ್ರ್ಯಾಪ್ ವಿಚಾರವಾಗಿ ಕರ್ನಾಟಕ ವಿಧಾನಸಭೆಯಲ್ಲಿ ಎಲ್ಲರ ಮಾತಿನ ಬಳಿಕ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯಿಸಿದರು. ಇದು ಗಂಭೀರ ವಿಚಾರ. ಸದನದ ಘನತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಲಾಗುವುದು. ಒಂದೊಮ್ಮೆ ರಾಜಣ್ಣ ಅವರು ಲಿಖಿತ ದೂರು ದಾಖಲಿಸಿದರೆ, ಅದರ ಅಧಾರದ ಮೇಲೆ ನಾನು ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ. ಸತ್ಯ ಹೊರಗೆ ಬರಬೇಕು ಎಂದು ವಿಧಾನಸಭೆ ಕಲಾಪದ ವೇಳೆ ಹೇಳಿದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner