ಪಾಕಿಸ್ತಾನವನ್ನು ನಂಬುವುದಕ್ಕೆ ಆಗಲ್ಲ, ಕದನ ವಿರಾಮ ಉಲ್ಲಂಘನೆ ಮಾಡೋದು ಅವರಿಗೆ ಹೊಸದಲ್ಲ: ಸಚಿವ ಪ್ರಿಯಾಂಕ ಖರ್ಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಪಾಕಿಸ್ತಾನವನ್ನು ನಂಬುವುದಕ್ಕೆ ಆಗಲ್ಲ, ಕದನ ವಿರಾಮ ಉಲ್ಲಂಘನೆ ಮಾಡೋದು ಅವರಿಗೆ ಹೊಸದಲ್ಲ: ಸಚಿವ ಪ್ರಿಯಾಂಕ ಖರ್ಗೆ

ಪಾಕಿಸ್ತಾನವನ್ನು ನಂಬುವುದಕ್ಕೆ ಆಗಲ್ಲ, ಕದನ ವಿರಾಮ ಉಲ್ಲಂಘನೆ ಮಾಡೋದು ಅವರಿಗೆ ಹೊಸದಲ್ಲ: ಸಚಿವ ಪ್ರಿಯಾಂಕ ಖರ್ಗೆ

ಕದನ ವಿರಾಮ ಘೋಷಣೆ ಮಾಡಿದರೂ, ಅದನ್ನು ಉಲ್ಲಂಘಿಸುವ ಮೂಲಕ ಪಾಕಿಸ್ತಾನ ಮತ್ತೆ ತನ್ನ ಬುದ್ಧಿ ತೋರಿಸಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಸಚಿವ ಪ್ರಿಯಾಂಕ ಖರ್ಗೆ ಮೈಸೂರಿನಲ್ಲಿ ಹೇಳಿಕೆ
ಸಚಿವ ಪ್ರಿಯಾಂಕ ಖರ್ಗೆ ಮೈಸೂರಿನಲ್ಲಿ ಹೇಳಿಕೆ

ಮೈಸೂರು : ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ನಡುವೆ, ಪಾಕಿಸ್ತಾನವನ್ನು ನಂಬುವುದಕ್ಕೆ ಆಗಲ್ಲ, ಕದನ ವಿರಾಮ ಉಲ್ಲಂಘನೆ ಮಾಡೋದು ಅವರಿಗೆ ಹೊಸದಲ್ಲ ಎಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ. ಯುದ್ಧದ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕ, ಉಭಯ ರಾಷ್ಟ್ರಗಳ ಈಗಿನ ಪರಿಸ್ಥಿತಿ ಕುರಿತು ಅವರು ಮಾತನಾಡಿದ್ದಾರೆ.

ಪಾಕಿಸ್ತಾನ ಪ್ರಚೋದನೆ ಮಾಡುತ್ತಲೇ ಬಂದಿದೆ. ನಮ್ಮ ದೇಶ ಯಾವಾಗಲೂ ಪ್ರಚೋದನೆ ಮಾಡಿಲ್ಲ, ದೇಶದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡರೂ ನಮ್ಮ ಸಹಕಾರ ಇದೆ. ಭಯೋತ್ಪಾದನೆ ಎಲ್ಲಿಯೂ ಬೆಳೆಯಬಾರದು. ಅದನ್ನು ಬೇರು ಸಮೇತ ಕಿತ್ತು ಹಾಕಬೇಕು. ಪಾಕಿಸ್ತಾನದ ವಿಚಾರದಲ್ಲಿ ಈಗ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ನೋಡೋಣ. ನಮ್ಮ ಸಹಕಾರ ಇದ್ದೇ ಇದೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆಯಾ ಎಂಬುದೆಲ್ಲ ನಮಗೆ ಗೊತ್ತಿಲ್ಲ. ನಾವಂತೂ ಯಾವ ರಾಜಕೀಯವನ್ನು ಮಾಡುತ್ತಿಲ್ಲ. ನಮಗೆ ಮೊದಲು ದೇಶ ಮುಖ್ಯ, ದೇಶದ ಜನ ಮುಖ್ಯ. ದೇಶದ ಹಿತಾಸಕ್ತಿ, ನಾಗರೀಕರ ಹಿತಾಸಕ್ತಿಗಾಗಿ ನಮ್ಮ ಸಹಕಾರ ಇದೆ. ಪಾಕಿಸ್ತಾನ ಮೊದಲಿನಿಂದಲೂ ನಿಯಮಗಳನ್ನು ಮೀರುತ್ತಲೇ ಬಂದಿದೆ. ಪಾಕಿಸ್ತಾನವನ್ನು ನಂಬುವುದಕ್ಕೆ ಆಗಲ್ಲ ಎಂದು ನಂಜನಗೂಡಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in