ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ: ಸಚಿವನಾಗಲು ನನಗೂ ಆಸೆ ಇದೆ ಎಂದ ಉಪ ಸಭಾಪತಿ ರುದ್ರಪ್ಪ ಲಮಾಣಿ
ಸಚಿವನಾಗಲು ನನಗೂ ಆಸೆ ಇದೆ, ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಮೈಸೂರಿನಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿ ಹೇಳಿಕೆ ನೀಡಿದ್ದಾರೆ.

ಮೈಸೂರು: ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಮೈಸೂರಿನಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿ ಹೇಳಿಕೆ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಮಾತನಾಡಿದ ಅವರು, ಸಚಿವನಾಗಲು ನನಗೂ ಆಸೆ ಇದೆ, ಕಳೆದ ಅವಧಿಯಲ್ಲೇ ನಾನು ಸಚಿವನಾಗಬೇಕಿತ್ತು. ನಮ್ಮ ಸಮುದಾಯ ಚುನಾವಣೆಯಲ್ಲಿ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಆ ಸಮುದಾಯದ ಪ್ರತಿನಿಧಿಯಾಗಿ ನಾನಿದ್ದೇನೆ, ಹೀಗಾಗಿ ಸಚಿವ ಸ್ಥಾನ ನನಗೆ ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದು ಹೇಳಿದ್ದಾರೆ.
ಕಳೆದ ಸಂಪುಟದಲ್ಲಿ ಸಚಿವ ಸ್ಥಾನದ ಲಿಸ್ಟ್‌ನಲ್ಲಿ ನನ್ನ ಹೆಸರಿತ್ತು. ಅಂತಿಮ ಕ್ಷಣದಲ್ಲಿ ಹೆಸರನ್ನು ಬದಲಿಸಲಾಯಿತು. ಪಕ್ಷದ ನಾಯಕರು ನನ್ನನ್ನು ಮನವೊಲಿಸಿ ಉಪಸಭಾಪತಿ ಸ್ಥಾನ ನೀಡಿದರು. ಮುಂದಿನ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನನಗೆ ಸಚಿವ ಸ್ಥಾನ ನೀಡುವ ಭರವಸೆ ಇದೆ ಉಪ ಸಭಾಪತಿ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಯಾವಾಗ ಸಂಪುಟ ವಿಸ್ತರಣೆ ಆಗುತ್ತದೆಯೊ ಅಂದೇ ಸಚಿವ ಸ್ಥಾನ ನೀಡಲಿ. ಎಲ್ಲರಿಗೂ ಆಸೆ ಇರುವಂತೆ ನನಗೂ ಸಚಿವನಾಗುವ ಆಸೆ ಇದೆ ಎಂದು ಮೈಸೂರಿನಲ್ಲಿ ಲಮಾಣಿಯವರು ಹೇಳಿಕೆ ನೀಡಿದ್ದಾರೆ.