ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಮುಂಗಾರು 2024; ಜೂನ್‌ನಿಂದ ಸೆಪ್ಟೆಂಬರ್ ತನಕ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಮುನ್ಸೂಚನೆ

ಕರ್ನಾಟಕದಲ್ಲಿ ಮುಂಗಾರು 2024; ಜೂನ್‌ನಿಂದ ಸೆಪ್ಟೆಂಬರ್ ತನಕ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಮುನ್ಸೂಚನೆ

ಹಿಂದೆಂದಿಗಿಂತಲೂ ಹೆಚ್ಚು ತಾಪಮಾನ ಅನುಭವಿಸುತ್ತಿರುವುದಲ್ಲದೆ, ನೀರಿನ ಕೊರತೆ, ಬರ ಪರಿಸ್ಥಿತಿ ಜನರನ್ನು ಕಂಗೆಡಿಸಿರುವಾಗಲೇ ಕೊಂಚ ಸಮಾಧಾನದ ಸುದ್ದಿ ಬಂದಿದೆ. ಕರ್ನಾಟಕದಲ್ಲಿ ಮುಂಗಾರು 2024ರ ಸೀಸನ್ ತೃಪ್ತಿಕರವಾಗಿರಲಿದೆ. ಜೂನ್‌ನಿಂದ ಸೆಪ್ಟೆಂಬರ್ ತನಕ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ.

ಕರ್ನಾಟಕದಲ್ಲಿ ಮುಂಗಾರು 2024; ಈ ಸಲ ಮುಂಗಾರು ಸೀಸನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಮುಂಗಾರು 2024; ಈ ಸಲ ಮುಂಗಾರು ಸೀಸನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ.

ಬೆಂಗಳೂರು: ತೀವ್ರ ಬರಪರಿಸ್ಥಿತಿಯಿಂದ ಕಂಗೆಟ್ಟಿರುವ ಬಹುಪಾಲು ಕರ್ನಾಟಕ ವಾಸಿಗಳಿಗೆ ಮನಸ್ಸಿಗೆ ಸಮಾಧಾನ ನೀಡುವ ಸುದ್ದಿ ಇದು. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುಂಗಾರು ಮಳೆ ಮುನ್ಸೂಚನೆ ಪ್ರಕಾರ, ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಈ ವಿವರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಂಚಿಕೊಂಡಿದ್ದು, ಕರ್ನಾಟಕದ ಮುಂಗಾರು ಮಳೆ ಮುನ್ಸೂಚನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಒದಗಿಸಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಮುಂಗಾರು 2024 ಆರಂಭ ವಾಡಿಕೆಯಂತೆ ಜೂನ್ ತಿಂಗಳಲ್ಲೇ ಆಗಲಿದ್ದು, ಸೆಪ್ಟೆಂಬರ್ ತನಕವೂ ಇರಲಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಂಚಿಕೊಂಡ ಮಾಹಿತಿ ಪ್ರಕಾರ, ರಾಜ್ಯದ 2024ರ ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆಯ ಮುಖ್ಯಾಂಶಗಳು ಹೀಗಿವೆ-

ಕರ್ನಾಟಕ ಮುಂಗಾರು ಮಳೆ 2024 - ಮಳೆ ಮುನ್ಸೂಚನೆ ವರದಿ

ರಾಜ್ಯಕ್ಕೆ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪುಮಾಣ 85.2 ಸೆ.ಮೀ ರಷ್ಟಿದೆ. ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆ - 2024 ಅನ್ವಯ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದೆ.

ಮುಂಗಾರು ಮಳೆ ಮುನ್ಸೂಚನೆ 2024 ನಕ್ಷೆಗಳು
ಮುಂಗಾರು ಮಳೆ ಮುನ್ಸೂಚನೆ 2024 ನಕ್ಷೆಗಳು

ರಾಜ್ಯದ ದೀರ್ಘಾವಧಿ ಸರಾಸರಿ ವಾಡಿಕೆ ಮಳೆ ಜೂನ್‌ನಲ್ಲಿ 19.9 ಸೆಂ.ಮೀ, ಜುಲೈನಲ್ಲಿ 27.1 ಸೆಂ.ಮೀ, ಆಗಸ್ಟ್‌ನಲ್ಲಿ 22 ಸೆಂ.ಮೀ ಹಾಗೂ ಸೆಪ್ಟೆಂಬರ್‌ನಲ್ಲಿ 16.1 ಸೆಂ.ಮೀ ನಷ್ಟಿದ್ದು ಒಟ್ಟಾರೆ ರಾಜ್ಯಕ್ಕೆ ಮುಂಗಾರು ಹಂಗಾಮಿನಲ್ಲಿ 85.2 ಸೆಂ.ಮೀ ನಷ್ಟಿದೆ. ರಾಜ್ಯದ ವಾರ್ಷಿಕ ಮಳೆಯ ಶೇಕಡ 74 ಕೊಡುಗೆ ಮುಂಗಾರು ಅವಧಿಯಲ್ಲಿ ಸಿಗುತ್ತದೆ. ಇದು 115.3 ಸೆಂ.ಮೀ. ಈ ಬಾರಿ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ.

ಭಾರತದಲ್ಲಿ ಮುಂಗಾರು ಮಳೆ 2024 - ಮಳೆ ಮುನ್ಸೂಚನೆ ಪ್ರಕಾರ ಸಾಮಾನ್ಯಕ್ಕಿಂತ ಹೆಚ್ಚು ಮಳೆ

ಭಾರತದಲ್ಲಿ ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚು ಇರಲಿದೆ. ಭಾರತೀಯ ಹವಾಮಾನ ಇಲಾಖೆ ಸೋಮವಾರ (ಏಪ್ರಿಲ್ 15) ಬಿಡುಗಡೆ ಮಾಡಿದ ಮುಂಗಾರು ಮಳೆ ಮುನ್ಸೂಚನೆ ವರದಿ ಪ್ರಕಾರ, ದೇಶದ ದೀರ್ಘಾವಧಿ (1971-2020) ಸರಾಸರಿ ವಾಡಿಕೆ ಮಳೆ ಪ್ರಮಾಣ 87 ಸೆಂಟಿ ಮೀಟರ್‌ ನಷ್ಟಿದೆ. ಈ ಬಾರಿ ಇದು ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ, 2024ರ ಮುಂಗಾರು (ಜೂನ್ ಸೆಪ್ಟೆಂಬರ್) ಅವಧಿಯಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದಲ್ಲಿ ಶೇಕಡ 5 ಹೆಚ್ಚು ಅಥವಾ ಕಡಿಮೆಯ ಲೆಕ್ಕಾಚಾರದಲ್ಲಿ ವಾಡಿಕೆಗಿಂತ ಹೆಚ್ಚು ಅಂದರೆ ಶೇಕಡಾ 106 ರಷ್ಟು ಮಳೆಯಾಗುವ ಸಾಧ್ಯತೆಗಳಿದೆ.

ಮುಂಗಾರು (ಜೂನ್ - ಸೆಪ್ಟೆಂಬರ್) ಮಳೆ ಮುನ್ಸೂಚನೆ ಅನ್ವಯ ದೇಶದಾದ್ಯಂತ (ದೀರ್ಘಾವಧಿ ಸರಾಸರಿ ಶೇಕಡಾ 104 -110 ರಷ್ಟು) ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ದೇಶದಾದ್ಯಂತ ಕಾಲೋಚಿತ (ಜೂನ್ ನಿಂದ ಸೆಪ್ಟೆಂಬರ್) ಮಳೆಯ ಐದು ವರ್ಗದ ಸಂಭವನೀಯತೆಯ ಮುನ್ಸೂಚನೆಗಳು ನೈಋತ್ಯ ಮಾನ್ಸೂನ್ ಕಾಲೋಚಿತ ಮಳೆಯ ಹೆಚ್ಚಿನ ಸಂಭವನೀಯತೆ (61%) ಸಾಮಾನ್ಯಕ್ಕಿಂತ (>104% LPA) ಎಂದು ಸೂಚಿಸುತ್ತದೆ.

ಬಹು ಆಯಾಮದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಹಾಗೂ ಹವಾಮಾನ ಮಾದರಿಗಳ ಅನ್ವಯ ಪ್ರಸ್ತುತ ಎಲ್‌ ನಿನೋ ಪರಿಸ್ಥಿತಿ ಮತ್ತಷ್ಟು ದುರ್ಬಲಗೊಳ್ಳುವ  ಸಾಧ್ಯತೆ ಇದೆ. ಮಾನ್ಸೂನ್ ಋತುವಿನ ಆರಂಭಿಕ ಭಾಗ ಮತ್ತು ಲಾನಿನಾ ಪರಿಸ್ಥಿತಿಗಳು ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ.

IPL_Entry_Point