ಕನ್ನಡ ಸುದ್ದಿ  /  ಕರ್ನಾಟಕ  /  2nd Puc Result; ಕಲಾ ವಿಭಾಗದಲ್ಲಿ ಬೆಂಗಳೂರಿನ ಮೇಧಾ ಡಿ ಪ್ರಥಮ, ವಿಜಯಪುರದ ವೇದಾಂತ್‌ ದ್ವಿತೀಯ; ಇಲ್ಲಿದೆ ರ‍್ಯಾಂಕ್ ಪಡೆದವರ ವಿವರ

2nd Puc Result; ಕಲಾ ವಿಭಾಗದಲ್ಲಿ ಬೆಂಗಳೂರಿನ ಮೇಧಾ ಡಿ ಪ್ರಥಮ, ವಿಜಯಪುರದ ವೇದಾಂತ್‌ ದ್ವಿತೀಯ; ಇಲ್ಲಿದೆ ರ‍್ಯಾಂಕ್ ಪಡೆದವರ ವಿವರ

2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಕಲಾ ವಿಭಾಗದಲ್ಲಿ ಒಟ್ಟು 1,28,448 ವಿದ್ಯಾರ್ಥಿಗಳು ತೇಗರ್ಡೆಯಾಗಿದ್ದಾರೆ. 596 ಅಂಕ ಗಳಿಸುವ ಮೂಲಕ ಬೆಂಗಳೂರಿನ ಮೇಧಾ ಡಿ. ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ ವಿಜಯಪುರದ ವೇದಾಂತ್‌.

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಮೇಧಾ ಡಿ (ಬಲಚಿತ್ರ)
ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಮೇಧಾ ಡಿ (ಬಲಚಿತ್ರ)

ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು ಪರೀಕ್ಷೆಗೆ ಹಾಜರಾದ 6,81,079 ವಿದ್ಯಾರ್ಥಿಗಳಲ್ಲಿ 5,52,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 1,87,891 ವಿದ್ಯಾರ್ಥಿಗಳು ಹಾಜರಾಗಿದ್ದು, 1,28,448 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು ಶೇ 68.36 ಉತ್ತೀರ್ಣ ಸಂಖ್ಯೆ ಇದೆ.

ಟ್ರೆಂಡಿಂಗ್​ ಸುದ್ದಿ

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ಮೇಧಾ ಡಿ. 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಎಸ್‌.ಎಲ್.ದಿವಾಕರ್‌ ಹಾಗೂ ಸಹನಾ ದಿವಾಕರ್‌ ಅವರ ಪುತ್ರಿ. ಇವರು ಆಂಗ್ಲ ಮಾಧ್ಯಮ ವಿದ್ಯಾರ್ಥಿಯಾಗಿದ್ದಾರೆ.

ರ‍್ಯಾಂಕ್ ನಿರೀಕ್ಷೆ ಮಾಡಿದ್ದೆ: ಮೇಧಾ ಮನದಾಳ 

ಈ ಸಲ ರ‍್ಯಾಂಕ್ ಬರಬಹುದು ಅಂತ ನಿರೀಕ್ಷೆ ಮಾಡಿದ್ದೆ. ಹೆಚ್ಚು ಅಂಕ ಬಂದಿರುವುದು ಖುಷಿಯಾಗಿದೆ. ಬೆಳಿಗ್ಗೆ 4 ಗಂಟೆಗೆ ಎದ್ದು ಓದುತ್ತಿದ್ದೆ. ನಾನು ಆರ್ಟ್ಸ್‌, ಇತಿಹಾಸ, ಸಮಾಜಶಾಸ್ತ್ರ, ಮನಃಶಾಸ್ತ್ರ ಮತ್ತು ಅರ್ಥಶಾಸ್ತ್ರದ ಕಾಂಬಿನೇಷನ್ ತಗೊಂಡಿದ್ದೆ. ಯಾವ ವಿಷಯಕ್ಕೆ ಎಷ್ಟು ಅಂಕ ಗೊತ್ತಾಗಿಲ್ಲ. ಕಾಲೇಜಿನಿಂದಲೂ ಕಾಲ್ ಬರ್ತಿದೆ. ಎಲ್ಲರೂ ವಿಶ್ ಮಾಡ್ತಿದ್ದಾರೆ.

ವೇದಾಂತ್‌ ದ್ವಿತೀಯ 

ಕನ್ನಡ ಮಾಧ್ಯಮದಲ್ಲಿ ಓದಿರುವ ವಿಜಯಪುರದ ವೇದಾಂತ್‌ ಜ್ಞಾನುಬಾ ನವಿ 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಜ್ಞಾನುಬಾ ಕೊಂಡಿಬಾ ಹಾಗೂ ನವಿ ಲಲಿತಾ ಜ್ಞಾನುಬಾ ಅವರ ಪುತ್ರನಾಗಿರುವ ಇವರು ವಿಜಯಪುರದ ಎಸ್‌ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಇಂದು ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ಕವಿತಾ ಬಿವಿ 596 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದ್ದಾರೆ.

ಧಾರಾವಾಡದ ಕೆಇಬಿ ಕ್ಯಾಂಪ್‌ ಪಿಯು ಕಾಲೇಜಿನ ರವಿನಾ ಸೋಮಪ್ಪ ಲಮಾಣಿ 595 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಪುರೋಹಿತ್‌ ಖುಷಿಬೆನ್‌ ರಾಜೇಂದ್ರಕುಮಾರ್‌ 594 ಅಂಕಗಳಿಸುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಒಟ್ಟು 23 ವಿದ್ಯಾರ್ಥಿಗಳು 590ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

IPL_Entry_Point