ಕನ್ನಡ ಸುದ್ದಿ  /  ಕರ್ನಾಟಕ  /  2nd Puc Result: ವಿಜ್ಞಾನ ವಿಭಾಗದಲ್ಲಿ ಶೇ 89.96 ಫಲಿತಾಂಶ; ಧಾರಾವಾಡದ ಎ ವಿದ್ಯಾಲಕ್ಷ್ಮೀ ರಾಜ್ಯಕ್ಕೆ ಪ್ರಥಮ, ಕೆ ಎಚ್‌ ಉರ್ವೀಶ್‌ ದ್ವಿತೀಯ

2nd Puc Result: ವಿಜ್ಞಾನ ವಿಭಾಗದಲ್ಲಿ ಶೇ 89.96 ಫಲಿತಾಂಶ; ಧಾರಾವಾಡದ ಎ ವಿದ್ಯಾಲಕ್ಷ್ಮೀ ರಾಜ್ಯಕ್ಕೆ ಪ್ರಥಮ, ಕೆ ಎಚ್‌ ಉರ್ವೀಶ್‌ ದ್ವಿತೀಯ

2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದಲ್ಲಿ ಒಟ್ಟು 2,49,927 ವಿದ್ಯಾರ್ಥಿಗಳು ತೇಗರ್ಡೆಯಾಗಿದ್ದಾರೆ. 598 ಅಂಕ ಗಳಿಸುವ ಮೂಲಕ ಹುಬ್ಬಳ್ಳಿ- ಧಾರವಾಡದ ಎ.ವಿದ್ಯಾಲಕ್ಷ್ಮೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, 597 ಅಂಕ ಗಳಿಸುವ ಮೂಲಕ ಮೈಸೂರಿನ ಕೆ.ಎಚ್‌. ಉರ್ವಿಶ್‌ ಪ್ರಶಾಂತ್‌ ದ್ವಿತೀಯ ಸ್ಥಾನ ಗಳಿಸಿದ್ದಾರೆ.

 ಎ ವಿದ್ಯಾಲಕ್ಷ್ಮೀ (ಎಡಚಿತ್ರ), ಕೆ ಎಚ್‌ ಉರ್ವೀಶ್‌ (ಬಲಚಿತ್ರ)
ಎ ವಿದ್ಯಾಲಕ್ಷ್ಮೀ (ಎಡಚಿತ್ರ), ಕೆ ಎಚ್‌ ಉರ್ವೀಶ್‌ (ಬಲಚಿತ್ರ)

ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು ಪರೀಕ್ಷೆಗೆ ಹಾಜರಾದ 6,81,079 ವಿದ್ಯಾರ್ಥಿಗಳಲ್ಲಿ 5,52,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ಸೈನ್ಸ್‌ ವಿಭಾಗದಲ್ಲಿ 2,77,831 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,49,927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡವಾರು 89.96 ಫಲಿತಾಂಶ ಸಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡದ ವಿದ್ಯಾನಿಕೇತನ ಎಸ್‌ಸಿ ಪಿಯು ಕಾಲೇಜಿ ಎ. ವಿದ್ಯಾಲಕ್ಷ್ಮೀ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಎಸ್‌. ಅಕಿಲೇಶ್ವರನ್‌ ಹಾಗೂ ಎ. ಕೃತಿಗಾ ಅವರ ಪುತ್ರಿ. 597 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ ಮೈಸೂರಿನ ಆದಿಚುಂಚನಗಿರಿ ಪಿಯು ಕಾಲೇಜಿನ ಕೆ.ಎಚ್‌.ಉರ್ವೀಶ್‌ ಪ್ರಶಾಂತ್‌. ಇವರು ಕೆವಿ ಹರೀಶ್‌ ಪ್ರಶಾಂತ್‌ ಹಾಗೂ ಸವಿತಾ ಪ್ರಶಾಂತ್‌ ಅವರ ಪುತ್ರ.

ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ವೈಭವಿ ಆಚಾರ್ಯ 597 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದ್ದಾರೆ.

ಮೈಸೂರಿನ ಆರ್‌ವಿಪಿಬಿ ಪಿಯು ಕಾಲೇಜಿನ ಜಾಹ್ನವಿ ತುಮಕೂರ್‌ ಗುರುರಾಜ್‌ 597 ಅಂಕಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಮಂಗಳೂರಿನ ಎಕ್ಸ್‌ಲೆಂಟ್‌ ಪಿಯು ಕಾಲೇಜಿನ ಗುಣಸಾಗರ್‌ ಡಿ 597 ಅಂಕಗಳಿಸುವ ಮೂಲಕ 5ನೇ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು 25ಕ್ಕೂ ವಿದ್ಯಾರ್ಥಿಗಳು 590ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

IPL_Entry_Point