Siddaramaiah Budget: ಜುಲೈ 7ರಂದು ರಾಜ್ಯ ಬಜೆಟ್, ಸಿಎಂ ಸಿದ್ದರಾಮಯ್ಯರಿಗೆ ಇದು 14ನೇ ಆಯವ್ಯಯ, ಓದಿ ಇವರ ಬಜೆಟ್ ದಾಖಲೆಗಳ ವಿವರ
ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಲ್ಲಿ(Karnataka budget 2023) ಸಿದ್ದರಾಮಯ್ಯ (Siddaramaiah Budget) ದಾಖಲೆಗಳ ಸರದಾರ. ಈ ಬಾರಿ ಇವರು ಮಂಡಿಸಲಿರುವುದು ತನ್ನ 14ನೇ ಬಜೆಟ್. ಮುಖ್ಯಮಂತ್ರಿಯಾಗಿ 5 ಬಾರಿ, ಉಪಮುಖ್ಯಮಂತ್ರಿಯಾಗಿ 7 ಬಾರಿ ಬಜೆಟ್ ಮಂಡಿಸಿರುವ ಇವರು ಎಚ್‌ಡಿ ದೇವೇಗೌಡ, ಜೆಎಚ್ ಪಟೇಲ್ ಸರಕಾರವಿದ್ದಾಗಲೂ ಬಜೆಟ್ ಮಂಡಿಸಿದ್ದರು.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರಕಾರದ ನೂತನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಮಂಡಿಸಲಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್ ಮೂಲಕ ಸಿಎಂ ಸಿದ್ದರಾಮಯ್ಯ ಹೊಸ ದಾಖಲೆ ಬರೆಯಲಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಮಂಡಿಸುತ್ತಿರುವುದು 14ನೇ ಬಜೆಟ್. ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಅತ್ಯಧಿಕ ಬಜೆಟ್ ಮಂಡನೆ ಮಾಡಿರುವ ಕೀರ್ತಿಗೆ ಸಿಎಂ ಸಿದ್ದರಾಮಯ್ಯ ಪಾತ್ರವಾಗಲಿದ್ದಾರೆ. ಅಂದಹಾಗೆ, ಬೇರೆ ರಾಜ್ಯಗಳಲ್ಲಿನ ದಾಖಲೆ ನೋಡುವುದಾದರೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವಜುಬಾಯಿ ರುದಬಾಯಿವಾಲಾ ಅವರು 18 ಬಾರಿ ಬಜೆಟ್ ಮಂಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಹಣಕಾಸು ಖಾತೆಯನ್ನೂ ಹೊಂದಿದ್ದಾರೆ. ಇವರು 2013 ರಿಂದ 2018 ರವರೆಗೆ ಸತತವಾಗಿ ಆರು ಬಾರಿ ಬಜೆಟ್ ಮಂಡಿಸಿದ್ದರು. ಇವರು 2018-19 ನೇ ಸಾಲಿನ ಫೆಬ್ರವರಿ 16, 2018 ರಂದು ಮಂಡಿಸಿದ ಬಜೆಟ್ ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಆದರೆ, ಇದು ಕೂಡ ಅವರ ಲೆಕ್ಕಕ್ಕೆ ಬರುತ್ತದೆ. ಅದು 2018ರ ಅಸೆಂಬ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ್ದ ಬಜೆಟ್ ಆಗಿತ್ತು. ಈ ಬಾರಿ ಮತ್ತೆ ಸಿಎಂ ಆಗಿರುವುದರಿಂದ ಈ ಅವಧಿಯಲ್ಲಿ ಐದಾರು ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ಡೆಕ್ಕನ್ ಹೆರಾಲ್ಡ್ ವರದಿಯೊಂದು ತಿಳಿಸಿದೆ.
ಸಿದ್ದರಾಮಯ್ಯ ಬಜೆಟ್ ದಾಖಲೆಗೆ ಸರಿಸಾಟಿಯುಂಟೆ?
ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಹೊಂದಿರುವ ಸಿದ್ದರಾಮಯ್ಯ ಅವರು ಬಜೆಟ್ ವಿಷಯದಲ್ಲಿಯೂ ಹಲವು ದಾಖಲೆ ಮಾಡಿದ್ದಾರೆ. ದೇವರಾಜ ಅರಸ್ ಕೂಡ ಪೂರ್ಣ ಪ್ರಮಾಣದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
- ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗಳು: 2013 ರಿಂದ 2018 ಸತತವಾಗಿ ಬಜೆಟ್ ಮಂಡನೆ, ಮಂಡಿಸಿದ ಬಜೆಟ್ ಸಂಖ್ಯೆ: 5
- ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗಳ ಸಂಖ್ಯೆ: 7
- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ 2005-07ರವರೆಗೆ ಸಿಎಂ ಬಜೆಟ್ ಮಂಡನೆ
- ಜೆಡಿ ಸರಕಾರದಲ್ಲಿ 1995-2000ರವರೆಗೆ ಬಜೆಟ್ ಮಂಡನೆ
- ಎಚ್‌ಡಿ ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಬಜೆಟ್ ಮಂಡನೆ- ಎರಡು ಬಾರಿ (1995 ಮತ್ತು 1996)
- ಜೆಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಮೂರು ಬಾರಿ ಬಜೆಟ್ ಮಂಡನೆ- 1997, 1998 ಮತ್ತು 1999
- ಎನ್ ಧರಂಸಿಂಗ್ ಸರಕಾರದಲ್ಲಿ ಎರಡು ಬಾರಿ ಬಜೆಟ್ ಮಂಡನೆ: 2005 ಮತ್ತು 2006
ಕರ್ನಾಟಕ ಕಾಂಗ್ರೆಸ್ ಬಜೆಟ್ ಮಂಡನೆ ಯಾವಾಗ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರಕಾರದ ನೂತನ ಬಜೆಟ್ ಅನ್ನು ಇದೇ ಜುಲೈ 7ರಂದು ಮಂಡನೆ ಮಾಡಲಿದ್ದಾರೆ.
ಈ ಬಾರಿಯ ಕರ್ನಾಟಕ ಬಜೆಟ್ ಗಾತ್ರ ಎಷ್ಟಿರಲಿದೆ?
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅಂದಾಜಿಸಿದ ಪ್ರಕಾರ ಈ ಬಾರಿ ಬಜೆಟ್ ಗಾತ್ರ ಸುಮಾರು 3.35 ಲಕ್ಷ ಕೋಟಿ ರೂಪಾಯಿ ಇರಲಿದೆ. ಈ ವರ್ಷ ಬೊಮ್ಮಾಯಿ ಸರಕಾರ ಮಂಡಿಸಿದ ಬಜೆಟ್ ಗಾತ್ರ 2,51,541 ಕೋಟಿ ರೂ. ಇತ್ತು. 2021-22ರಲ್ಲಿ 2,38,600 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು.
ಕರ್ನಾಟಕ ರಾಜ್ಯ ಅಧಿವೇಶನ ಯಾವಾಗ ನಡೆಯಲಿದೆ?
16ನೇ ವಿಧಾನಸಭೆಯ ಅಧಿವೇಶನ ಸೋಮವಾರ, 3ನೇ ಜುಲೈ 2023ರಂದು ಅಪರಾಹ್ನ 12.00 ಗಂಟೆಗೆ (Assembly Session July 2023) ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಆರಂಭವಾಗಲಿದೆ. ಈ ಕುರಿತ ವರದಿ ಇಲ್ಲಿದೆ ಓದಿ