SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ, 14ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿದ ಉಡುಪಿ; ಈ ಬಾರಿ ದಕ್ಷಿಣ ಕನ್ನಡ ದ್ವಿತೀಯ
ಕನ್ನಡ ಸುದ್ದಿ  /  ಕರ್ನಾಟಕ  /  Sslc Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ, 14ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿದ ಉಡುಪಿ; ಈ ಬಾರಿ ದಕ್ಷಿಣ ಕನ್ನಡ ದ್ವಿತೀಯ

SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ, 14ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿದ ಉಡುಪಿ; ಈ ಬಾರಿ ದಕ್ಷಿಣ ಕನ್ನಡ ದ್ವಿತೀಯ

2023-2024ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕರಾವಳಿ ಜಿಲ್ಲೆಗಳು ಮತ್ತೆ ಮೇಲುಗೈ ಸಾಧಿಸಿವೆ. ಕಳೆದ ವರ್ಷ 18ನೇ ಸ್ಥಾನದಲ್ಲಿದ್ದ ಉಡುಪಿ ಈ ವರ್ಷ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ದ್ವಿತೀಯ ಸ್ಥಾನ ಗಳಿಸಿದೆ. ಜಿಲ್ಲಾವಾರು ಫಲಿತಾಂಶಗಳ ವಿವರ ಇಲ್ಲಿದೆ. (ವರದಿ: ಹರೀಶ್‌ ಮಾಂಬಾಡಿ)

ಎಸ್ಸೆಸ್ಸೆಲ್ಸಿ ಫಲಿತಾಂಶ, 14ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿದ ಉಡುಪಿ; ದಕ್ಷಿಣ ಕನ್ನಡ ದ್ವಿತೀಯ (ಸಾಂಕೇತಿಕ ಚಿತ್ರ)
ಎಸ್ಸೆಸ್ಸೆಲ್ಸಿ ಫಲಿತಾಂಶ, 14ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿದ ಉಡುಪಿ; ದಕ್ಷಿಣ ಕನ್ನಡ ದ್ವಿತೀಯ (ಸಾಂಕೇತಿಕ ಚಿತ್ರ)

ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡಿದೆ. ಉಡುಪಿ ಜಿಲ್ಲೆ ಶೇ 94 ಫಲಿತಾಂಶ ದಾಖಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆ ಶೇ 92.12 ಫಲಿತಾಂಶ ದಾಖಲಿಸಿ ಎರಡನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 86.54 ಫಲಿತಾಂಶ ದಾಖಲಿಸಿ ನಾಲ್ಕನೇ ಸ್ಥಾನ ಪಡೆದಿದ್ದು, ಈ ಬಾರಿ ಭಾರೀ ಜಿಗಿತ ಕಂಡಿದೆ.

ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಭಾರೀ ಪ್ರಗತಿಯನ್ನು ಕಂಡಿವೆ. ಕಳೆದ ಬಾರಿ ಅಂದರೆ, 2023ರಲ್ಲಿ ಎಸ್ಸೆಸ್ಸೆಲ್ಸಿಯ ಪರೀಕ್ಷೆಯ ಫಲಿತಾಂಶ ನೋಡಿದಾಗ, ಶೈಕ್ಷಣಿಕ ಹಬ್ ಎನಿಸಿಕೊಳ್ಳುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದಲ್ಲಿ 14 ಮತ್ತು 17ನೇ ಸ್ಥಾನಿಯಾಗಿದ್ದವು. 2022ರಲ್ಲಿ ದಕ್ಷಿಣ ಕನ್ನಡ 20ನೇ ಸ್ಥಾನಿಯಾಗಿದ್ದರೆ, ಉಡುಪಿ 12ನೇ ಸ್ಥಾನ ಪಡೆದಿತ್ತು. ಕಳೆದ ಮೂರು ವರ್ಷಗಳೂ ಶೇ 88ರಿಂದ 89ರ ಫಲಿತಾಂಶಗಳು ಉಭಯ ಜಿಲ್ಲೆಗಳಿಗೆ ದೊರಕಿದ್ದವು.

ವಿದ್ಯಾರ್ಥಿಗಳ ಪಾಲಿನ ಬಹು ಮಹತ್ವದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27,663 ಶಾಲಾ ವಿದ್ಯಾರ್ಥಿಗಳು, 1,053 ಖಾಸಗಿ ಅಭ್ಯರ್ಥಿಗಳು, 1,632 ಪುನರಾವರ್ತಿತ ಅಭ್ಯರ್ಥಿಗಳು ಸೇರಿ ಒಟ್ಟು 30,348 ಮಂದಿಗೆ ಪರೀಕ್ಷೆಗೆ ಅವಕಾಶವಿತ್ತು. ಬಂಟ್ವಾಳ ವಲಯ ವ್ಯಾಪ್ತಿಯಲ್ಲಿ 6123, ಬೆಳ್ತಂಗಡಿಯಲ್ಲಿ 4035, ಮಂಗಳೂರು ಉತ್ತರದಲ್ಲಿ 5810, ಮಂಗಳೂರು ದಕ್ಷಿಣ 5452, ಮೂಡುಬಿದಿರೆ 1948, ಪುತ್ತೂರು 4995 ಹಾಗೂ ಸುಳ್ಯದಲ್ಲಿ 1985 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅವಕಾಶವಿತ್ತು.

ಬಂಟ್ವಾಳದಲ್ಲಿ 17, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರದಲ್ಲಿ 18, ಮಂಗಳೂರು ದಕ್ಷಿಣ ಭಾಗದಲ್ಲಿ 16, ಮೂಡುಬಿದಿರೆಯಲ್ಲಿ 5, ಪುತ್ತೂರಿನಲ್ಲಿ 13, ಸುಳ್ಯ ವಲಯದಲ್ಲಿ 6 ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 88 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಕಳೆದ ಬಾರಿ ಅಂದರೆ 2022-23ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಹಾಜರಾದವರು 27,170. ಉತ್ತೀರ್ಣರಾದವರು 24,322. ಶೇ.100 ಫಲಿತಾಂಶವನ್ನು 125 ಶಾಲೆಗಳು ಪಡೆದುಕೊಂಡಿವೆ. ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ, 2022-23ರಲ್ಲಿ ಹಾಜರಾದವರು 27,170, ಉತ್ತೀರ್ಣ 24,322. ಶೇಕಡಾವಾರು ಫಲಿತಾಂಶ 89.52. ಆಗಿತ್ತು.

2021-22ರಲ್ಲಿ ಹಾಜರಾದವರು 28443, ಉತ್ತೀರ್ಣರಾದವರು 25052, ಶೇಕಡಾವಾರು 88.08 ಫಲಿತಾಂಶ ದಾಖಲಾಗಿತ್ತು.

2020-21ರಲ್ಲಿ 29336 ಹಾಜರು, 29315 ಉತ್ತೀರ್ಣ, ಶೇಕಡಾವಾರು 99.93 ಫಲಿತಾಂಶ ದಾಖಲಾಗಿದ್ದು, ಇದು ಕೊರೊನಾ ಬ್ಯಾಚ್ ಆಗಿತ್ತು. 2019-20ರಲ್ಲಿ 27,416 ಹಾಜರು, 21,669 ಉತ್ತೀರ್ಣ, ಶೇಕಡಾವಾರು 79.04. ಫಲಿತಾಂಶ ದಕ್ಷಿಣ ಕನ್ನಡ ಜಿಲ್ಲೆಗೆ ದೊರಕಿತ್ತು.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ 2140, ಕುಂದಾಪುರದಲ್ಲಿ 2778, ಕಾರ್ಕಳದಲ್ಲಿ 2783, ಉಡುಪಿ ದಕ್ಷಿಣದಲ್ಲಿ 3743 ಸೇರಿ ಒಟ್ಟು 14,331 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಉಡುಪಿಯಲ್ಲಿ 15, ಬ್ರಹ್ಮಾವರದಲ್ಲಿ 11, ಕುಂದಾಪುರದಲ್ಲಿ ಹಾಗೂ ಬೈಂದೂರು ವಲಯದಲ್ಲಿ ತಲಾ 8, ಕಾರ್ಕಳದಲ್ಲಿ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

Whats_app_banner