Security Breach: ಲೋಕಸಭೆ ಭದ್ರತಾ ಲೋಪ ಕೇಸ್‌ನಲ್ಲಿ ಬಂಧಿತ ಮನೋರಂಜನ್ ಯಾರು, ತಂದೆ ದೇವರಾಜ್ ಹೇಳಿಕೆಯ 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  Security Breach: ಲೋಕಸಭೆ ಭದ್ರತಾ ಲೋಪ ಕೇಸ್‌ನಲ್ಲಿ ಬಂಧಿತ ಮನೋರಂಜನ್ ಯಾರು, ತಂದೆ ದೇವರಾಜ್ ಹೇಳಿಕೆಯ 5 ಮುಖ್ಯ ಅಂಶಗಳು

Security Breach: ಲೋಕಸಭೆ ಭದ್ರತಾ ಲೋಪ ಕೇಸ್‌ನಲ್ಲಿ ಬಂಧಿತ ಮನೋರಂಜನ್ ಯಾರು, ತಂದೆ ದೇವರಾಜ್ ಹೇಳಿಕೆಯ 5 ಮುಖ್ಯ ಅಂಶಗಳು

ಲೋಕಸಭೆ ಭದ್ರತಾ ವೈಫಲ್ಯ ಕೇಸ್‌ನಲ್ಲಿ ಬಂಧಿತರ ಪೈಕಿ ಕರ್ನಾಟಕದ ಇಬ್ಬರು ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಮನೋರಂಜನ್‌ ಎಂಬ ಮೈಸೂರಿನ ವ್ಯಕ್ತಿಯೂ ಇದ್ದು, ಆತನ ತಂದೆ ದೇವರಾಜ್‌ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿ ಹೇಳಿದ ವಿಚಾರ ಇಷ್ಟು-

ಲೋಕಸಭೆ ಕಲಾಪದ ವೇಳೆ ಒಳನುಗ್ಗಿ ದಾಂಧಲೆ ನಡೆಸಿದ ಯುವಕ
ಲೋಕಸಭೆ ಕಲಾಪದ ವೇಳೆ ಒಳನುಗ್ಗಿ ದಾಂಧಲೆ ನಡೆಸಿದ ಯುವಕ (PTI)

ಬೆಂಗಳೂರು: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಎಸಗಿದ ಪ್ರಕರಣದಲ್ಲಿ ಕರ್ನಾಟಕದವರು ಇಬ್ಬರು ಭಾಗಿಯಾಗಿದ್ದಾರೆ. ಅವರನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದು ಗುರುತಿಸಿರುವುದಾಗಿ ವರದಿಯಾಗಿದೆ. ಪೊಲೀಸರು ಈ ಕುರಿತು ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಈ ನಡುವೆ, ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳು ಮನೋರಂಜನ್ ತಂದೆ ದೇವರಾಜ್ ಗೌಡ ಅವರನ್ನು ಮಾತನಾಡಿಸಿದ್ದಾರೆ. ಅವರು ಹೇಳಿರುವುದು ಇಷ್ಟು -

ಮನೋರಂಜನ್ ತಂದೆ ದೇವರಾಜ್ ಗೌಡ ಅವರ ಹೇಳಿಕೆಯ 5 ಅಂಶಗಳು

1. ನನ್ನ ಮಗ ಒಳ್ಳೆಯವನು, ಪ್ರಾಮಾಣಿಕ. ಅವನು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದುತ್ತಿದ್ದ. ಸಮಾಜಸೇವೆ ಮಾಡಬೇಕು ಎನ್ನುವ ಆಸೆ ಹೊತ್ತಿದ್ದ. ಅವನಿಗೆ ಏನಾಯಿತೋ, ಯಾಕೆ ಹೀಗೆ ಮಾಡಿದನೋ ಗೊತ್ತಿಲ್ಲ. ನನ್ನ ಮಗ ವಿವೇಕಾನಂದರ ಪುಸ್ತಕಗಳನ್ನು ಓದುತ್ತಿದ್ದ. ಅವನು ತುಂಬಾ ಒಳ್ಳೆಯವನು. ಅವನು ಹೀಗೇಕೆ ಮಾಡಿದನೋ ಗೊತ್ತಿಲ್ಲ

2.ಸಮಾಜ ಸೇವೆ ಮಾಡಬೇಕು ಅಂತ ಆಸೆಯಿತ್ತು. ಎಂಜಿನಿಯರಿಂಗ್ ಓದಿದ್ಯಾ, ಚೆನ್ನಾಗಿ ಓದಿ ಒಳ್ಳೇ ಕೆಲಸಕ್ಕೆ ಸೇರು ಅಂತ ಹೇಳಿದ್ದೆ. ನಮ್ಮ ಮಕ್ಕಳು ಓದಲೆಂದು ಬೇರೆ ಊರುಗಳಿಗೆ ಕಳುಹಿಸುತ್ತೇವೆ.

3. ದೆಹಲಿ, ಬೆಂಗಳೂರು, ಮೈಸೂರಿಗೆ ಓಡಾಡ್ತಿದ್ದ. ರಸ್ತೆಯಲ್ಲಿ ಎಲ್ಲಿ ಬೇಕಾದರೂ ವಿಚಾರಿಸಿ, ಮನೆಗೆ, ಸಮಾಜಕ್ಕೆ, ಸ್ನೇಹಿತರಿಗೆ ಒಳ್ಳೆಯ ಹುಡುಗನಾಗಿದ್ದ. ಬಿಇ ಎಂಜಿನಿಯರಿಂಗ್ 2014ರಲ್ಲಿ ಮುಗಿಸಿದ್ದ. ತೋಟ ನೋಡಿಕೊಳ್ತಿದ್ದ. ಆಗಾಗ ದೆಹಲಿಗೆ ಹೋಗ್ತಿದ್ದ, ಅದರ ಬಗ್ಗೆ ಏನೂ ವಿವರ ಹೇಳಿರಲಿಲ್ಲ.

4. ಸಂಸದ ಪ್ರತಾಪ್ ಸಿಂಹ ಪರಿಚಿತನ ಅಲ್ವಾ ಅಂತ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಟಿವಿಯಲ್ಲಿ ನೋಡ್ತಿದ್ದವರು ಹೇಳಿದಾಗಲೇ ನನಗೆ ಗೊತ್ತಾಗಿದ್ದು. ನಾನು ರಾಜಕಾರಣದಲ್ಲಿ ಇಲ್ಲ. ರೈತ ನಾನು, ಗದ್ದೆ-ತೋಟ ಇದೆ. ಮಕ್ಕಳ ತಲೆಯಲ್ಲಿ ಏನಿದೆ ಅಂತ ನನಗೆ ಏನು ಗೊತ್ತಾಗಲು ಸಾಧ್ಯ. ಮಕ್ಕಳು ಆಚೆ ಹೋದ ಮೇಲೆ ನಮಗೆ ಏನು ಗೊತ್ತಾಗುತ್ತೆ? ಹಿಂದೆಂದೂ ಹೀಗೆ ಆಗಿರಲಿಲ್ಲ.

5. ನಾನು ಯಾರ ಕೈಕೆಳಗೂ ಇರಲ್ಲ. ಸ್ವಯಾರ್ಜಿತವಾಗಿ ಬದುಕಬೇಕು ಅನ್ನುವ ಆಸೆಯಿತ್ತು. ಅವನು ದೆಹಲಿಗೆ ಹೋಗಿರುವುದೇ ನನಗೆ ಗೊತ್ತಿಲ್ಲ. ಅವನ ಸ್ನೇಹಿತರ ಬಗ್ಗೆಯೂ ನನಗೆ ಮಾಹಿತಿಯಿಲ್ಲ.

Whats_app_banner