ಪಿತೃ ಪಕ್ಷ 2024; ಗಾಂಧಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲು ಮನವಿ, ಸಿಎಂಗೆ ಪತ್ರ
ಕನ್ನಡ ಸುದ್ದಿ  /  ಕರ್ನಾಟಕ  /  ಪಿತೃ ಪಕ್ಷ 2024; ಗಾಂಧಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲು ಮನವಿ, ಸಿಎಂಗೆ ಪತ್ರ

ಪಿತೃ ಪಕ್ಷ 2024; ಗಾಂಧಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲು ಮನವಿ, ಸಿಎಂಗೆ ಪತ್ರ

Pitru Paksha 2024: ಪಿತೃ ಪಕ್ಷ ದಿನದಂದೇ ಗಾಂಧಿ ಜಯಂತಿ ದಿನವಿದ್ದು, ಪೂಜ್ಯರಿಗೆ ಎಡೆ ಇಡಲು ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿವಿಧ ಸಂಘಟನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿವೆ.

ಗಾಂಧಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲು ಮನವಿ
ಗಾಂಧಿ ಜಯಂತಿ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲು ಮನವಿ

ಬೆಂಗಳೂರು: ಇದೇ ಸೆಪ್ಟೆಂಬರ್ 17 ರಿಂದ ಅಕ್ಟೋಬರ್​ 2ರ ತನಕ ಪಿತೃ ಪಕ್ಷ ಹಬ್ಬ ನಡೆಯಲಿದೆ. ಆದರೆ, ಪೂರ್ವಜರಿಗೆ ಎಡೆ ಇಡುವುದಕ್ಕೆ ಸಂಬಂಧಿಸಿ ಸಂಕಷ್ಟವೊಂದು ಎದುರಾಗಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇರುವ ಕಾರಣ ಅಂದು ಮಾಂಸ ಮಾರಾಟಕ್ಕೆ ನಿಷೇಧ ಇರಲಿದೆ. ಮಹಾಲಯ ಅಮವಾಸ್ಯೆ ಅಂದೇ ಇದೆ. ಹೀಗಾಗಿ ಪಿತೃ ಪಕ್ಷ ಮಾಡುವವರಿಗೆ ಎಡೆ ಇಡಲು ಮಾಂಸದ ಕೊರತೆ ಕಾರಣ ಸರ್ಕಾರಕ್ಕೆ ವಿವಿಧ ಸಂಘಟನೆಗಳು ಮನವಿಯೊಂದನ್ನು ಇಟ್ಟಿವೆ.

ಗಾಂಧಿ ಜಯಂತಿಯಂದು ಮಾಂಸ ಮಾರಾಟ ನಿಷೇಧ ಇದೆ. ಹಾಗಾಗಿ ಮಾಂಸ ಸಿಗುವುದಿಲ್ಲ. ಅದಕ್ಕಾಗಿ ಅಂದು ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು. ಇದು ತಮ್ಮ ಪೂರ್ವಜರಿಗೆ ಎಡೆ ಇಡಲು ಅವಕಾಶ ಸಿಕ್ಕಂತಾಗುತ್ತದೆ ಎಂದು ವಿವಿಧ ಸಂಘಟನೆಗಳು ಹಾಗೂ ಸಮಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿವೆ. ಮಹಾಲಯ ಅಮವಾಸ್ಯೆ, ಗಾಂಧಿ ಜಯಂತಿ ಒಂದೇ ದಿನ ಬಂದಿರುವ ಕಾರಣ ಜನರಿಗೆ ಸಮಸ್ಯೆ ಆಗದಂತೆ ಸಹಕರಿಸುವಂತೆ ಕೋರಿವೆ.

ಈ ಕುರಿತು ಬಿಬಿಎಂಪಿ ಮಾಜಿ ಸದಸ್ಯ ವಿವಿ ಸತ್ಯನಾರಾಯಣ, ಜಯಪ್ರಕಾಶ್ ನಾರಾಯಣ ಮತ್ತು ವಿಚಾರ ವೇದಿಕೆ ಅಧ್ಯಕ್ಷ ಬಿಎಂ ಶಿವಕುಮಾರ್ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಪಿತೃಪಕ್ಷ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪಿತೃ ಪಕ್ಷ
ಪಿತೃ ಪಕ್ಷ

ನಗರದ ಕಡೆ ಮಾಂಸ ಇಲ್ಲದಿದ್ದರೆ ಕಷ್ಟ

ಹಳ್ಳಿ/ಗ್ರಾಮಗಳ ಕಡೆ ಯಾವ ರೀತಿ ಇದೆ ಎಂಬುದು ಗೊತ್ತಿಲ್ಲ. ಕೆಲವರು ನಾಟಿ ಕೋಳಿ, ಸಾಕು ಪ್ರಾಣಿಗಳ ಮಾಂಸಾಹಾರವನ್ನು ತಮ್ಮ ಪೂಜ್ಯರಿಗೆ ಎಡೆ ಇಟ್ಟು ಪೂಜೆ ಸಲ್ಲಿಕೆ ಮಾಡುತ್ತಾರೆ. ಆದರೆ, ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ ಇದ್ದರೆ ಎಲ್ಲಿಂದ ಮಾಂಸ ತಂದು ಎಡೆ ಇಡಲು ಸಾಧ್ಯವಾಗುತ್ತದೆ. ತಲತಲಾಂತರದಿಂದ ಪೂಜ್ಯರಿಗೆ ಪಿತೃಪಕ್ಷದ ದಿನವು ಎಡೆ ಇಟ್ಟು ಆಚರಿಸುತ್ತಿದ್ದೇವೆ.

ಆದರೆ, ಈ ಬಾರಿಯೂ ಆ ಸಂಪ್ರದಾಯಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಿ. ಸಂಪ್ರದಾಯವನ್ನು ಅಚ್ಚಕಟ್ಟಾಗಿ ಪಾಲಿಸಿಕೊಂಡು ಹೋಗಲು ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ. ಆದರೆ ಈ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಪ್ರತಿಕ್ರಿಯೆ ನೀಡಿದರೂ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡೋಣ.

ಪಿತೃ ಪಕ್ಷ
ಪಿತೃ ಪಕ್ಷ
Whats_app_banner