ಕನ್ನಡ ಸುದ್ದಿ  /  Karnataka  /  Karnataka Police Constable Lokesh Hm Deputed To Indian Embassy, Mexico

ಮೆಕ್ಸಿಕೋದ ಭಾರತೀಯ ರಾಯಭಾರ ಕಚೇರಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್‌ ಲೋಕೇಶ್ ನಿಯೋಜನೆ, ಭಾಸ್ಕರ್‌ ರಾವ್‌ ಅಭಿನಂದನೆ

ಉತ್ತರ ಅಮೆರಿಕಾದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋದ ಭಾರತೀಯ ರಾಯಭಾರ ಕಚೇರಿಗೆ ಇತ್ತೀಚೆಗೆ ಕರ್ನಾಟಕ ಪೊಲೀಸ್‌ ಇಲಾಖೆಯ ಕಾನ್ಸ್‌ಟೇಬಲ್‌ ಲೋಕೇಶ್‌ ಎಚ್‌.ಎಂ. ನಿಯೋಜನೆಯಾಗಿದ್ದಾರೆ.

ಮೆಕ್ಸಿಕೋದ ಭಾರತೀಯ ರಾಯಭಾರ ಕಚೇರಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್‌ ಲೋಕೇಶ್ ನಿಯೋಜನೆ, ಭಾಸ್ಕರ್‌ ರಾವ್‌ ಅಭಿನಂದನೆ
ಮೆಕ್ಸಿಕೋದ ಭಾರತೀಯ ರಾಯಭಾರ ಕಚೇರಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್‌ ಲೋಕೇಶ್ ನಿಯೋಜನೆ, ಭಾಸ್ಕರ್‌ ರಾವ್‌ ಅಭಿನಂದನೆ

ಬೆಂಗಳೂರು: ಉತ್ತರ ಅಮೆರಿಕಾದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋದ ಭಾರತೀಯ ರಾಯಭಾರ ಕಚೇರಿಗೆ ಕರ್ನಾಟಕ ಪೊಲೀಸ್‌ ಇಲಾಖೆಯ ಕಾನ್ಸ್‌ಟೇಬಲ್‌ ಲೋಕೇಶ್‌ ಎಚ್‌.ಎಂ. ಇತ್ತೀಚೆಗೆ ನಿಯೋಜನೆಯಾಗಿದ್ದಾರೆ. ಈ ಪ್ರಮುಖ ಹುದ್ದೆಗೆ ಆಯ್ಕೆಯಾಗಿರುವ ಲೋಕೇಶ್‌ ಎಚ್‌ಎಂ ಅವರಿಗೆ ಇತ್ತೀಚೆಗೆ ಬಿಜೆಪಿ ಸೇರಿರುವ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅಭಿನಂದಿಸಿದ್ದಾರೆ.

"ಭಾರತೀಯ ರಾಯಭಾರ ಕಚೇರಿಗೆ ನಿಯೋಜಿಸಲ್ಪಟ್ಟ ಪೊಲೀಸ್‌ ಕಾನ್ಸ್‌ಟೇಬಲ್‌ ಲೋಕೇಶ್‌ ಅವರಿಗೆ ಹೃದಯಪೂರ್ವಕ ಅಭಿನಂದನೆ. ಸಂವಹನ, ಕಂಪ್ಯೂಟರ್‌ ಮತ್ತು ಇಂಗ್ಲಿಷ್‌ನಲ್ಲಿ ಅನನ್ಯ ಕೌಶಲ ಹೊಂದಿರುವ ಪೊಲೀಸ್‌ ಕಾನ್ಸ್‌ಟೇಬಲ್‌ ಲೋಕೇಶ್‌ ಅವರು ಈ ಹುದ್ದೆಗೆ ನಡೆದ ಸಂದರ್ಶನದಲ್ಲಿ ವಿವಿಧ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ಜತೆ ಸ್ಪರ್ಧಿಸಿ ವಿದೇಶದಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ" ಎಂದು ಭಾಸ್ಕರ್‌ ರಾವ್‌ ಟ್ವೀಟ್‌ ಮೂಲಕ ಅಭಿನಂದಿಸಿದ್ದಾರೆ.

"ಶಿಕ್ಷಣ, ಬದ್ದತೆ, ಮಹತ್ವಾಕಾಂಕ್ಷೆ ನಮ್ಮ ಸ್ಥಾನಗಳನ್ನು ಉನ್ನತೀಕರಿಸುತ್ತದೆ. ನಾವು‌ ಎಲ್ಲಿ, ಯಾವ ಹಂತದ ಕೆಲಸ ಮಾಡುತ್ತಿದ್ದೇವೆ ಎನ್ನುವುದು ನಗಣ್ಯ. ಸಾಧನೆ ಮಾಡಬೇಕೆಂದರೆ ಮಾಡುವ ಕೆಲಸದ ಮೇಲಿನ ಶ್ರದ್ದೆ, ನಿಷ್ಠೆ, ಪ್ರತಿಭೆ, ಪ್ರಾಮಾಣಿಕತೆಗಳು ಮುಖ್ಯವೇ ಹೊರತು ಯಾವ ಸ್ಥರದ ಹುದ್ದೆಯಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ ಎನ್ನುವುದನ್ನು ಈ ಘಟನೆ ನಿರೂಪಿಸಿದೆ. ಇದು ಎಲ್ಲರಿಗೂ ಸ್ಪೂರ್ತಿ ತುಂಬುವ ವಿಚಾರ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು ನಗರ ಪೊಲೀಸ್‌ ವಿಭಾಗದ ಸೋಶಿಯಲ್ ಮೀಡಿಯಾ ಲ್ಯಾಬ್ ಅನ್ನು ಬಲಪಡಿಸುವಲ್ಲಿ ಮತ್ತು ಸುವ್ಯವಸ್ಥಿತಗೊಳಿಸುವಲ್ಲಿ ಲೋಕೇಶ್ ಕೊಡುಗೆ ಅಪಾರ. ಸುಳ್ಳು ಸುದ್ದಿಗಳನ್ನು ನಿರ್ಮೂಲನೆ ಮಾಡಲು ಇವರು ಹಲವು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅಪರಾಧ ಪತ್ತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಗುಪ್ತಚರಕ್ಕೆ ಸಂಬಂಧಪಟ್ಟಂತೆ ಲೋಕೇಶ್‌ ನಮಗೆ ಅಪಾರ ಇನ್‌ಪುಟ್‌ ನೀಡಿದ್ದಾರೆ. ದೊಡ್ಡ ಥಿಯೇಟರ್‌ನಲ್ಲಿ ಪ್ರದರ್ಶನ ನೀಡಲಿರುವ ಅವರಿಗೆ ಅಭಿನಂದನೆಗಳು ಎಂದು ಭಾಸ್ಕರ್‌ ರಾವ್‌ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು ನಗರ ಪೊಲೀಸ್‌ನ ಟ್ವಿಟ್ಟರ್‌ ಖಾತೆಯಲ್ಲಿ ಕೊರೊನಾ ಸಂದರ್ಭದಲ್ಲಿ ನಾಗರಿಕರ ಸಂದೇಹಗಳಿಗೆ ಉತ್ತರ ಕೊಡುತ್ತ ಜನರಿಗೆ ಧೈರ್ಯ ತುಂಬುವ ಕೆಲಸವನ್ನೂ ಲೋಕೇಶ್‌ ಮಾಡಿದ್ದಾರೆ.

ಭಾಸ್ಕರ್‌ ರಾವ್‌ ಅವರ ಟ್ವೀಟ್‌ಗೆ ಸಾಕಷ್ಟು ಬಳಕೆದಾರರು ಪ್ರತಿಕ್ರಿಯೆಗಳನ್ನು ನೀಡಿ ಲೋಕೇಶ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. "ಇಷ್ಟೆಲ್ಲ ಸಾಧನೆ ಮಾಡಿರುವ ಲೋಕೇಶ್‌ಗೆ ಬಡ್ತಿ ಯಾಕೆ ನೀಡಲಾಗಿಲ್ಲ?ʼʼ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

"ಮೆಕ್ಸಿಕೊದಲ್ಲಿ ಸಾಕಷ್ಟು ಭಾರತೀಯರಿದ್ದು, ಲೋಕೇಶ್‌ಗೆ ಭಾರತೀಯ ಆಹಾರ ಮತ್ತು ಆತ್ಮೀಯತೆ ದೊರಕಲಿದೆ. ದೇಶಕ್ಕಾಗಿ ದುಡಿಯುವ ಅವರು ಮೆಕ್ಸಿಕೊದಲ್ಲಿ ಯಾವುದೇ ಚಿಂತೆ ಮಾಡಬೇಕಾಗಿಲ್ಲ" ಎಂದು ಇನ್ನೊಬ್ಬ ಬಳಕೆದಾರರು ತಿಳಿಸಿದ್ದಾರೆ. "ಫೇಕ್‌ಸುದ್ದಿ ಪತ್ತೆಹಚ್ಚುತ್ತಿದ್ದರೇ? ಹಾಗಾದರೆ, ನಾವು ಖಂಡಿತಾ ಅವರನ್ನು ಮಿಸ್‌ ಮಾಡಿಕೊಳ್ಳಲಿದ್ದೇವೆ" ಎಂದು ಇನ್ನೊಬ್ಬರು ಟ್ವಿಟ್ಟರ್‌ ಬಳಕೆದಾರರು ಮಾರ್ಮಿಕವಾಗಿ ಮಾರುತ್ತರ ನೀಡಿದ್ದಾರೆ.

IPL_Entry_Point