Kannada News  /  Karnataka  /  Karnataka Polls: Congress Forms Screening Committee For Karnataka Polls
ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ರಚನೆ (ಸಾಂಕೇತಿಕ ಚಿತ್ರ)
ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ರಚನೆ (ಸಾಂಕೇತಿಕ ಚಿತ್ರ) (HT_PRINT)

Karnataka polls: ಕರ್ನಾಟಕ ವಿಧಾನಸಭಾ ಚುನಾವಣೆ- ಸ್ಕ್ರೀನಿಂಗ್‌ ಕಮಿಟಿ ರಚಿಸಿ ಕಾಂಗ್ರೆಸ್‌

07 February 2023, 10:12 ISTHT Kannada Desk
07 February 2023, 10:12 IST

Karnataka polls: ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಗಳ ಆಯ್ಕೆಗಾಗಿ ಸ್ಕ್ರೀನಿಂಗ್‌ ಕಮಿಟಿಯನ್ನು ಸೋಮವಾರ ರಚಿಸಿದೆ. ಮೋಹನ್‌ ಪ್ರಕಾಶ್‌ ಅವರು ಈ ಕಮಿಟಿಗೆ ಚೇರ್‌ಮನ್‌. ಮುಂಬರುವ ಕರ್ನಾಟಕ ಚುನಾವಣೆಗೆ ಸ್ಕ್ರೀನಿಂಗ್‌ ಕಮಿಟಿ ರಚನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದಾರೆ.

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲೇ ಇದೆ. ಮತದಾರರನ್ನು ಓಲೈಸುವ ಕೆಲಸ ಒಂದೆಡೆ ನಡೆದರೆ, ಇನ್ನೊಂದೆ ಪಕ್ಷಗಳು ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಿವೆ. ಈ ನಡುವೆ, ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಗಳ ಆಯ್ಕೆಗಾಗಿ ಸ್ಕ್ರೀನಿಂಗ್‌ ಕಮಿಟಿಯನ್ನು ಸೋಮವಾರ ರಚಿಸಿದೆ. ಮೋಹನ್‌ ಪ್ರಕಾಶ್‌ ಅವರು ಈ ಕಮಿಟಿಗೆ ಚೇರ್‌ಮನ್‌.

ಟ್ರೆಂಡಿಂಗ್​ ಸುದ್ದಿ

ಮುಂಬರುವ ಕರ್ನಾಟಕ ಚುನಾವಣೆಗೆ ಸ್ಕ್ರೀನಿಂಗ್‌ ಕಮಿಟಿ ರಚನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದಾರೆ.

ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಯಾರು ಏನು?

ಚೇರ್‌ಮನ್‌ - ಮೋಹನ್‌ ಪ್ರಕಾಶ್‌

ಸದಸ್ಯರು - ನೀರಜ್ ಡಾಂಗಿ, ಮೊಹಮ್ಮದ್ ಜಾವೇದ್ ಮತ್ತು ಸಪ್ತಗಿರಿ ಉಲಕ

ಪದನಿಮಿತ್ಯ ಸದಸ್ಯರು - ಕರ್ನಾಟಕದಲ್ಲಿ ಎಐಸಿಸಿ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ, ಡಾ. ಜಿ ಪರಮೇಶ್ವರ್ ಮತ್ತು ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು.

ಸ್ಕ್ರೀನಿಂಗ್‌ ಕಮಿಟಿ ಚೇರ್‌ಮನ್‌ ಮತ್ತು ಸದಸ್ಯರ ಕಿರು ಪರಿಚಯ

ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ರಾಜಸ್ಥಾನದ ಹಿರಿಯ ಕಾಂಗ್ರೆಸ್ ಮುಖಂಡ. ಒಂದು ಸಲ ಶಾಸಕರಾಗಿದ್ದವರು. ಪ್ರಸ್ತುತ ಇವರು ಎಐಸಿಸಿಯ ಪ್ರಧಾನ ಕಾರ್ಯದರ್ಶಿಯ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದಾರೆ.

ಕಮಿಟಿ ಸದಸ್ಯರ ಪೈಕಿ ನೀರಜ್ ಡಾಂಗಿ ರಾಜಸ್ಥಾನದವರು. ರಾಜ್ಯಸಭಾ ಸದಸ್ಯರು. ಇವರಿಗೆ ಕರ್ನಾಟಕದ ನಂಟೂ ಇದೆ. ಇವರು ಸುರತ್ಕಲ್​ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದವರು.

ಮೊಹಮ್ಮದ್ ಜಾವೇದ್ ಬಿಹಾರದರವಾಗಿದ್ದು ಲೋಕಸಭಾ ಸದಸ್ಯರು. ಸಪ್ತಗಿರಿ ಶಂಕರ್ ಉಲಕ ಲೋಕಸಭಾ ಸದಸ್ಯರು ಮತ್ತು ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದವರು.

ಕರ್ನಾಟಕದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ಈ ತಿಂಗಳ ಆರಂಭದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸುವುದಕ್ಕೆ ಸಭೆ ನಡೆಸಿತ್ತು.

ಇದಕ್ಕೂ ಮುನ್ನ, ಕಾಂಗ್ರೆಸ್‌ ಪಕ್ಷ ಈ ಸಲದ ಚುನಾವಣೆಗೂ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. 1250 ಆಕಾಂಕ್ಷಿಗಳು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಅರ್ಹರನ್ನು ಮೊದಲ ಸುತ್ತಿನಲ್ಲಿ ಆಯ್ಕೆ ಮಾಡಿ, ನಂತರ ಸ್ಕ್ರೀನಿಂಗ್‌ ಕಮಿಟಿ ಕೂಲಂಕಷ ಪರಿಶೀಲನೆ ನಡೆಸಿ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಿದೆ. ಈ ಕೆಲಸ ಶೀಘ್ರವೇ ನಡೆಯುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ನಡುವೆ, ಯಾವುದೇ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸವಾಲಾಗಿಲ್ಲ. ನಮಗೆ ಗೆಲುವಿನ ಗುರಿ ಇದೆ. ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮತದಾರರು ವಿಶ್ವಾಸ ನೀಡಿರುವುದರಿಂದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ 10, 12, 20 ಅರ್ಜಿಗಳು ಬಂದಿವೆ. ಇಂತಹ ಕಡೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಕೆಲವರು ತ್ಯಾಗ ಮಾಡಲೇಬೇಕು ಎಂದು ಡಿಕೆಶಿ ಹೇಳಿದ್ದಾರೆ.