ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹೊಸದುರ್ಗ,ಚನ್ನಗಿರಿಯಲ್ಲಿ ಭಾರೀ ಮಳೆ, ನಿಮ್ಮೂರಲ್ಲಿ ಎಷ್ಟು ಮಳೆಯಾಗಿದೆ ?

Karnataka Rains: ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹೊಸದುರ್ಗ,ಚನ್ನಗಿರಿಯಲ್ಲಿ ಭಾರೀ ಮಳೆ, ನಿಮ್ಮೂರಲ್ಲಿ ಎಷ್ಟು ಮಳೆಯಾಗಿದೆ ?

ಪೂರ್ವ ಮುಂಗಾರು ಕರ್ನಾಟಕದಲ್ಲಿ (Karnataka Rains) ಚುರುಕುಗೊಂಡಿದ್ದು ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.

ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಚಿತ್ರಣ,
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಚಿತ್ರಣ,

ಬೆಂಗಳೂರು: ಕರ್ನಾಟಕದಲ್ಲಿ ಎರಡು ದಿನದಿಂದ ಭಾರೀ ಮಳೆ ಸುರಿಯುತ್ತದೆ. ಶನಿವಾರ ಸಂಜೆ, ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆಯೂ ಭಾರೀ ಮಳೆಯಾಗಿದೆ. ಭಾನುವಾರ ರಾತ್ರಿಯೂ ಭಾರೀ ಮಳೆ ಸುರಿಯುವ ಮುನ್ಸೂಚನೆ ದೊರೆತಿದೆ. ಕರ್ನಾಟಕದ ಹಲವು ಕಡೆಗಳಲ್ಲಿ ಭಾರೀ ಮಳೆ ಸುರಿದಿದ್ದು ಅಲ್ಲಲ್ಲಿ ತೊಂದರೆಗಳು ಆಗಿವೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಅತಿ ಹೆಚ್ಚು ಅಂದರೆ 12 ಸೆ,ಮೀ ಮಳೆ ಸುರಿದಿದೆ. ಬೆಂಗಳೂರಿನ ಹೆಸರಘಟ್ಟ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ತಲಾ 9 ಮಳೆಯಾದ ವರದಿಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನ ಜಿಕೆವಿಕೆಯಲ್ಲಿ 8 ಸೆ.ಮೀ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು ಹಾಗೂ ಯಗಟಿ, ಕೊಡಗಿನ ನಾಪೊಕ್ಲು, ಚಿಕ್ಕಬಳ್ಳಾಪುರದಲ್ಲಿ ತಲಾ 7 ಸೆ.ಮೀ ಮಳೆ ಸುರಿದ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವೂ ನೀಡಿದೆ. ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ಮಳೆ ಕರ್ನಾಟಕದ ಎಲ್ಲ ಭಾಗಗಳಲ್ಲೂ ಆಗಲಿದೆ ಎಂದು ತಿಳಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬನವಾಸಿ. ಕಿರವತ್ತಿ, ಉಡುಪಿ, ಹುಬ್ಬಳ್ಳಿ, ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ತಲಾ 6 ಸೆ.ಮೀ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಮಂಕಿ, ಧರ್ಮಸ್ಥಳ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಗದಗ ಜಿಲ್ಲೆ ರೋಣ, ಹಾವೇರಿ ಜಿಲ್ಲೆ ಶಿಗ್ಗಾಂವ್, ಭದ್ರಾವತಿಯಲ್ಲಿ ತಲಾ 5 ಸೆ.ಮೀ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರ, ಶಿರಾಲಿ, ವಿಜಯಪುರದ ಆಲಮಟ್ಟಿ, ಧಾರವಾಡದ ಅಣ್ಣೀಗೇರಿ, ಚಿಕ್ಕಮಗಳೂರಿನ ಅಜ್ಜಂಪುರ, ಹಾಸನದಲ್ಲಿ ತಲಾ 4 ಸೆ.ಮೀ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹಳಿಯಾಳ, ಮಂಗಳೂರು ನಗರ, ರಾಯಚೂರಿನ ಸಿಂಧನೂರು, ಗದಗದ ನರಗುಂದ, ಬಾಗಲಕೋಟೆಯ ಬೀಳಗಿ, ಬಾದಾಮಿ, ಧಾರವಾಡ, ಹಾವೇರಿಯ ಸವಣೂರು, ವಿಜಯಪುರ ಜಿಲ್ಲೆ ತಿಕೋಟಾ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಸಮೀಪದ ಉಚ್ಚಂಗಿದುರ್ಗ, ಬೆಂಗಳೂರು ನಗರ, ಚಿಕ್ಕಮಗಳೂರಿನ ಬಾಳೆಹೊನ್ನೂರು, ದಾವಣಗೆರೆ ನಗರ, ಹೊನ್ನಾಳಿ, ಚಿತ್ರದುರ್ಗ ಜಿಲ್ಲೆ ಬಿ.ದುರ್ಗದಲ್ಲಿ 3 ಸೆ.ಮೀ ಮಳೆಯಾದ ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಮಾಣಿ, ಧಾರವಾಡದ ಕಲಘಟಗಿ. ಬೆಳಗಾವಿಯ ಯಾದವಾಡ,ಬಾಗಲಕೋಟೆಯ ಇಳಕಲ್‌,ಮಹಾಲಿಂಗಪುರ, ಧಾರವಾಡ ಪಿಟಿಒ, ಗದಗದ ಶಿರಹಟ್ಟಿ, ಗದಗ ನಗರ, ದಾವಣಗೆರೆಯ ಸಂತೇಬೆನ್ನೂರು, ಮಂಡ್ಯದ ಕೆಆರ್‌ಪೇಟೆ, ಚಿಕ್ಕಮಗಳೂರಿನ ಎನ್‌ಆರ್‌ ಪುರ, ಚಿತ್ರದುರ್ಗದ ಹಿರಿಯೂರು, ದೊಡ್ಡಬಳ್ಳಾಪುರ, ಚಿಕ್ಕಮಗಳೂರಿನ ಕೊಟ್ಟಿಗೆ ಹಾರ ದಲ್ಲಿ ತಲಾ 2 ಸೆ.ಮೀ ಮಳೆ ಸುರಿದಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಅಂಕೋಲಾ, ಮಂಗಳೂರು, ಬಾಗಲಕೋಟೆಯ ಲೋಕಾಪುರ, ಕಲಬುರಗಿಯ ಚಿಂಚೋಳಿ, ಬೆಳಗಾವಿಯ ಬೈಲಹೊಂಗಲ, ತುಮಕೂರಿನ ಮಿಡಿಗೇಶಿ. ಚಿಕ್ಕಬಳ್ಳಾಪುರದ ತೊಂಡೇಬಾವಿ, ಹಾಸನದ ಬೇಲೂರು, ಚಿಕ್ಕಮಗಳೂರು, ತರೀಕೆರೆ, ಜಯಪುರ, ಕಳಸ, ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಮಲೈ ಮಹದೇಶ್ವರ ಬೆಟ್ಟ, ಬಂಡೀಪುರ, ಹಾಸನದ ಶ್ರವಣ ಬೆಳಗೊಳ, ಕೋಲಾರದ ರಾಯಲ್ಪಾಡು,. ಕೊಡಗಿನ ಸೋಮವಾರಪೇಟೆಯಲ್ಲಿ ತಲಾ 1ಸೆ.ಮೀ ಮಳೆಯಾಗಿದೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024