Ration Card Update: ಆನ್‌ಲೈನ್‌ ಮೂಲಕ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಹೇಗೆ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಉಪಯುಕ್ತ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  Ration Card Update: ಆನ್‌ಲೈನ್‌ ಮೂಲಕ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಹೇಗೆ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಉಪಯುಕ್ತ ಮಾಹಿತಿ

Ration Card Update: ಆನ್‌ಲೈನ್‌ ಮೂಲಕ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಹೇಗೆ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಉಪಯುಕ್ತ ಮಾಹಿತಿ

Ration Card Name Change: ಕರ್ನಾಟಕದಲ್ಲಿ ಮನೆಯೊಡತಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವ ಈಗ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರಕಿದೆ. ಆದರೆ, ಸಾಕಷ್ಟು ಫಲಾನುಭವಿಗಳು ತಮ್ಮ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಇತ್ಯಾದಿಗಳಿಗೆ ಪರದಾಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಪಡಿತರ ಚೀಟಿ ಅಪ್‌ಡೇಟ್‌ ಮಾಡಲು ಸಾಧ್ಯವೇ ಎಂಬ ಮಾಹಿತಿ ಇಲ್ಲಿದೆ.

Ration Card Update: ಆನ್‌ಲೈನ್‌ ಮೂಲಕ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಹೇಗೆ
Ration Card Update: ಆನ್‌ಲೈನ್‌ ಮೂಲಕ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಹೇಗೆ

ಕರ್ನಾಟಕ ಸರಕಾರದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme in Karnataka) ಅರ್ಜಿ ಸಲ್ಲಿಸಲು ಬಯಸುವ ಸಾಕಷ್ಟು ಫಲಾನುಭವಿಗಳಿಗೆ ಅನೇಕ ತೊಂದರೆಗಳು ಎದುರಾಗುತ್ತಿವೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪಡಿತರ ಚೀಟಿ (ration card update karnataka) ಪ್ರಮುಖವಾಗಿ ಬೇಕಿರುತ್ತದೆ. ಪಡಿತರ ಚೀಟಿಯಲ್ಲಿ ಮನೆಯೊಡತಿಯ ಹೆಸರು ಇರಬೇಕಾಗುತ್ತದೆ. ಆದರೆ, ರೇಷನ್‌ ಕಾರ್ಡ್‌ನಲ್ಲಿ ಒಂದು ಹೆಸರು, ಆಧಾರ್‌ ಕಾರ್ಡ್‌ನಲ್ಲಿ ಇನ್ನೊಂದು ಹೆಸರು ಇರುತ್ತದೆ. ಅನೇಕ ಕಾರಣಗಳಿಂದ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಮಾಡುವಂತಹ ಅವಶ್ಯಕತೆ ಇರುತ್ತದೆ. ಆನ್‌ಲೈನ್‌ನಲ್ಲಿ ಪಡಿತರ ಚೀಟಿ ಅಪ್‌ಡೇಟ್‌ ಸಾಧ್ಯವೇ ಎಂದು ಸಾಕಷ್ಟು ಜನರು ಹುಡುಕಾಟ ನಡೆಸುತ್ತಿದ್ದಾರೆ.

ಆಹಾರ ವೆಬ್‌ಸೈಟ್‌ ಮೂಲಕ ಅಪ್‌ಡೇಟ್‌

ಕರ್ನಾಟಕ ಸರಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ahara.kar.nic.in ಎಂಬ ವೆಬ್‌ಸೈಟ್‌ ಮೂಲಕ ಪಡಿತರ ಚೀಟಿ ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ಇರೇಷನ್‌ ಕಾರ್ಡ್‌ ವಿಭಾಗದಲ್ಲಿ ಹಲವು ಕಾರ್ಯಗಳನ್ನು ಮಾಡಬಹುದು. ಇಲ್ಲಿ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನ್ಯೂ ರೇಷನ್‌ ಕಾರ್ಡ್‌ ಎಂಬ ವಿಭಾಗಕ್ಕೆ ಹೋಗಬೇಕು. ಅಪ್‌ಡೇಟ್‌ ಆಧಾರ್‌, ವಿಲೇಜ್‌ ಲಿಸ್ಟ್‌, ಲಿಂಕಿಂಗ್‌ ಯುಐಡಿ ಇತ್ಯಾದಿ ಹಲವು ಆಯ್ಕೆಗಳನ್ನು ಪಡಿತರ ಚೀಟಿಗಾಗಿ ಈ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಇಲ್ಲಿ ರೇಷನ್‌ ಕಾರ್ಡ್‌ ಅಪ್‌ಡೇಟ್‌ ಮಾಡುವ ಆಯ್ಕೆಯೂ ದೊರಕಲಿದೆ. ಆದರೆ, ಕಳೆದ ಕೆಲವು ತಿಂಗಳಿನಿಂದ ಸಾಫ್ಟ್‌ವೇರ್‌ ಸಮಸ್ಯೆಯಿಂದ ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಲಾಗುತ್ತಿಲ್ಲ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಸದ್ಯ ಹೊಸ ಪಡಿತರ ಚೀಟಿ ವಿತರಣೆ, ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ, ಹೊಸ ಸೇರ್ಪಡೆ ಮುಂತಾದ ಪ್ರಕ್ರಿಯೆ ಕೆಲವು ತಿಂಗಳಿನಿಂದ ಸ್ಥಗಿತವಾಗಿದೆ. ಇದರಿಂದ ಸರಕಾರದ ಹಲವು ಯೋಜನೆಗಳನ್ನು ಪಡೆಯಲಾಗದೆ ಸಾಕಷ್ಟು ಫಲಾನುಭವಿಗಳು ತೊಂದರೆಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪಡಿತರ ಚೀಟಿ ಮಾಹಿತಿಗೆ ಆನ್‌ಲೈನ್‌ ವೆಬ್‌ಸೈಟ್‌: ahara.kar.nic.in

ಆಫ್‌ಲೈನ್‌ ಮೂಲಕ ಹೆಸರು ಬದಲಾವಣೆ ಹೇಗೆ?

  1. ಹಾಲಿ ಇರುವ ಪಡಿತರ ಚೀಟಿಯಲ್ಲಿ ಯಾವುದೇ ಬದಲಾವಣೆಗಾಗಿ ಹತ್ತಿರದ ಯಾವುದೇ ಬಯೋ ಫೋಟೋ ಸೇವಾ ಕೇಂದ್ರಕ್ಕೆ ಹೋಗಿ ನಿಮ್ಮ ಪಡಿತರ ಚೀಟಿಯನ್ನು ಪರಿಶೀಲಿಸಬಹುದು. ಗ್ರಾಮಾಂತರ ಪ್ರದೇಶದವರು ಅವರ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಬಹುದು.
  2. ನಿಮ್ಮ ಪಡಿತರ ಚೀಟಿ ರದ್ದಾಗಿದ್ದಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ. ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು.
  3. ಪಡಿತರ ಚೀಟಿ ಚಾಲ್ತಿಯಲ್ಲಿದ್ದರೆ ವಿಳಾಸ ಬದಲಾವಣೆ, ಸದಸ್ಯರ ಹೆಸರು ಸೇರ್ಪಡೆ, ಬೇರ್ಪಡೆ, ಫೋಟೊ ಮತ್ತು ಬಯೋಮೆಟ್ರಿಕ್‌ ಸೇರಿಸುವುದು, ಸದಸ್ಯರ ವಿವರದಲ್ಲಿ ಯಾವುದೇ ತಿದ್ದುಪಡಿಯನ್ನು ಮಾಡಬಹುದು.
  4. ಈಗ ವಾಸಿಸುವ ಮನೆಯ ಇತ್ತೀಚಿನ ವಿದ್ಯುತ್‌ ಬಿಲ್‌ ಮತ್ತು ಅಗತ್ಯ ಬದಲಾವಣೆಗೆ ಅಗತ್ಯ ವಿರುವ ಇತರೆ ದಾಖಲೆಗಳ ಜತೆಗೆ ಸೇವಾ ಕೇಂದ್ರದಲ್ಲಿಯೇ ಬದಲಾವಣೆಗಳನ್ನು ಮಾಡಿಕೊಂಡು ಕಂಪ್ಯೂಟರ್‌ ಮುದ್ರಿತ ಸ್ವೀಕೃತಿ ಪಡೆಯಬಹುದು.

ಸದ್ಯದ ಪರಿಸ್ಥಿತಿ ಹೇಗಿದೆ?

ಆನ್‌ಲೈನ್‌ನಲ್ಲಿ ಸದ್ಯ ಪಡಿತರ ಚೀಟಿ ಅಪ್‌ಡೇಟ್‌ ಮಾಡಲು ಸಮಸ್ಯೆ ಇರುವುದರಿಂದ ಆಫ್‌ಲೈನ್‌ ಮೂಲಕ ಹೆಸರು ಬದಲಾವಣೆ ಅಥವಾ ಇತರೆ ಬದಲಾವಣೆಗಳನ್ನು ಮಾಡಬಹುದು. ಆದರೆ, ಸದ್ಯ ಆಹಾರ ಇಲಾಖೆ, ಗ್ರಾಮ ಒನ್‌ನಂತಹ ಸೇವಾ ಕೇಂದ್ರಗಳಲ್ಲಿಯೂ ಸಾಫ್ಟ್‌ವೇರ್‌ ತೆರೆದಿಲ್ಲ ಎಂದು ಜನರನ್ನು ವಾಪಸ್‌ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ನೀವು ಹತ್ತಿರದ ಸೇವಾ ಕೇಂದ್ರಕ್ಕೆ ವಿಚಾರಿಸಬಹುದು. ಮುಂದಿನ ದಿನಗಳಲ್ಲಿ ಆಹಾರ ವೆಬ್‌ಸೈಟ್‌ನಲ್ಲಿಯೂ ತಿದ್ದುಪಡಿಗೆ ಅವಕಾಶ ದೊರಕಲಿದೆ. ಹೀಗಾಗಿ, ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡಬಹುದು.

ರೇಷನ್‌ ಕಾರ್ಡ್‌ ಅಪ್‌ಡೇಟ್‌ ಪಿಡಿಎಫ್‌ ಮಾಹಿತಿ

Whats_app_banner