Karnataka Reservoirs: ಉತ್ತರ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಉತ್ತಮ, ಎಷ್ಟಿದೆ 5 ಜಲಾಶಯಗಳ ಸಂಗ್ರಹ ಪ್ರಮಾಣ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಉತ್ತರ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಉತ್ತಮ, ಎಷ್ಟಿದೆ 5 ಜಲಾಶಯಗಳ ಸಂಗ್ರಹ ಪ್ರಮಾಣ

Karnataka Reservoirs: ಉತ್ತರ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಉತ್ತಮ, ಎಷ್ಟಿದೆ 5 ಜಲಾಶಯಗಳ ಸಂಗ್ರಹ ಪ್ರಮಾಣ

North Karnataka Reseroir Levels: ಉತ್ತರ ಕರ್ನಾಟಕ ಭಾಗದ ಐದು ಪ್ರಮುಖ ಜಲಾಶಯಗಳಲ್ಲಿ ಡಿಸೆಂಬರ್‌ ಎರಡನೇ ವಾರದ ಹೊತ್ತಿಗೆ ಹೆಚ್ಚಿನ ನೀರು ಸಂಗ್ರಹವಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಂಗ್ರಹ ಪ್ರಮಾಣ ಚೆನ್ನಾಗಿಯೇ ಇದೆ.

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಈಗಲೂ ಚೆನ್ನಾಗಿದೆ.
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಈಗಲೂ ಚೆನ್ನಾಗಿದೆ.

North Karnataka Reseroir Levels: ಉತ್ತರ ಕರ್ನಾಟಕದ 5 ಜಲಾಶಯಗಳಲ್ಲಿ ಡಿಸೆಂಬರ್‌ ಎರಡನೇ ವಾರದಲ್ಲೂ ನೀರಿನ ಮಟ್ಟ ಉತ್ತಮವಾಗಿದೆ. ಈ ಬಾರಿ ಜೂನ್‌ಗಿಂತಲೂ ಮೊದಲು ಮಳೆ ಆರಂಭಗೊಂಡು ಅಕ್ಟೋಬರ್‌ವರೆಗೂ ಮಲೆನಾಡು ಭಾಗ, ಮಹಾರಾಷ್ಟ್ರದ ಪಶ್ಚಿಮಘಟ್ಟದ ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳು ತುಂಬಿದ್ದವು. ಅಷ್ಟೇ ಅಲ್ಲದೇ ಸತತ ನಾಲ್ಕು ತಿಂಗಳ ಕಾಲವೂ ತುಂಬಿದ್ದವು. ನವೆಂಬರ್‌ ಕೊನೆ ವಾರದಿಂದ ಮಳೆ ಕಡಿಮೆಯಾಗಿದ್ದರಿಂದ ನೀರಿನ ಮಟ್ಟದಲ್ಲಿ ನಿಧಾನವಾಗಿ ಇಳಿಕೆಯಾಗುತ್ತಿದ್ದರೂ ಆತಂಕದ ಸನ್ನಿವೇಶ ಎಲ್ಲೂ ಇಲ್ಲ. ಅದರಲ್ಲೂ ವಿಜಯಪುರ ಜಿಲ್ಲೆಯ ಆಲಮಟ್ಟಿ. ವಿಜಯನಗರ ಜಿಲ್ಲೆಯ ತುಂಗಭದ್ರಾ, ಯಾದಗಿರಿ ಜಿಲ್ಲೆಯ ನಾರಾಯಣಪುರ ಬಸವಸಾಗರ ಹಾಗೂ ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಹಾಗೂ ಹಿಡಕಲ್‌ ಜಲಾಶಯಗಳಲ್ಲಿ ನೀರಿನ ಮಟ್ಟ ಚೆನ್ನಾಗಿದೆ. ಒಟ್ಟು 314 ಟಿಎಂಸಿ ನೀರು ಐದೂ ಜಲಾಶಯಗಳಲ್ಲಿ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಐದೂ ಜಲಾಶಯಗಳಲ್ಲಿ 184 ಟಿಎಂಸಿ ನೀರು ಸಂಗ್ರಹವಿತ್ತು. ಅಂದರೆ ಬಹುತೇಕ ಶೇ. 60ರಷ್ಟು ಹೆಚ್ಚಿನ ನೀರು ಈ ಬಾರಿ ಸಂಗ್ರಹವಾಗಿರುವುದು ವಿಶೇಷ.

ಆಲಮಟ್ಟಿಯಲ್ಲಿ ಎಷ್ಟು

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 518.95 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟ 519.60. ಸದ್ಯ 112.61 ಟಿಎಂಸಿ ನೀರು ಇಲ್ಲಿ ಸಂಗ್ರಹವಾಗಿದೆ. ಗರಿಷ್ಠ ಟಿಎಂಸಿ123.08. ಜಲಾಶಯಕ್ಕೆ ಒಳ ಹರಿವು 92 ಕ್ಯೂಸೆಕ್‌ ಇದ್ದು. ಹೊರಹರಿವಿನ ಪ್ರಮಾಣ 0 ಕ್ಯೂಸೆಕ್‌ ಇದೆ.

ಜಲಾಶಯದಲ್ಲಿ ಇಟ್ಟು ಶೇ92 ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆಲಮಟ್ಟಿ ನೀರಿನ ಮಟ್ಟ 514.65 ಅಡಿಯಷ್ಟಿತ್ತು. 60.25 ಟಿಎಂಸಿ ಸಂಗ್ರಹವಾಗಿತ್ತು.

ತುಂಗಭದ್ರಾ ಜಲಾಶಯ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 1629.51 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟ1633. ಸದ್ಯ92.24 ಟಿಎಂಸಿ ನೀರು ಇಲ್ಲಿ ಸಂಗ್ರಹವಾಗಿದೆ. ಗರಿಷ್ಠ ಟಿಎಂಸಿ 105.79. ಜಲಾಶಯಕ್ಕೆ ಒಳ ಹರಿವು 4531ಕ್ಯೂಸೆಕ್‌ ಇದ್ದು. ಹೊರಹರಿವಿನ ಪ್ರಮಾಣ5390 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಇಟ್ಟು ಶೇ 87 ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತುಂಗಭದ್ರಾ ನೀರಿನ ಮಟ್ಟ 1592.04 ಅಡಿಯಷ್ಟಿತ್ತು. 12.82 ಟಿಎಂಸಿ ಸಂಗ್ರಹವಾಗಿತ್ತು.

ಈ ಬಾರಿ ಜಲಾಶಯದ ಗೇಟ್‌ ಕುಸಿದು ಸಾಕಷ್ಟು ನೀರು ಹರಿದು ಹೋದ ನಡುವೆಯೂ ತುಂಗಭದ್ರಾ ಜಲಾಶಯ ನೀರು ಉಳಿಸಿಕೊಂಡಿದೆ.

ನಾರಾಯಣಪುರ ಜಲಾಶಯ

ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ1611.17 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟ1615, ಸದ್ಯ 28.21ಟಿಎಂಸಿ ನೀರು ಇಲ್ಲಿ ಸಂಗ್ರಹವಾಗಿದೆ. ಗರಿಷ್ಠ ಟಿಎಂಸಿ 33.31 . ಜಲಾಶಯಕ್ಕೆ ಒಳ ಹರಿವು 247 ಕ್ಯೂಸೆಕ್‌ ಇದ್ದು. ಹೊರಹರಿವಿನ ಪ್ರಮಾಣ 247 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಇಟ್ಟು ಶೇ85 ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಸವಸಾಗರ ಜಲಾಶಯ ನೀರಿನ ಮಟ್ಟ 1612.12 ಅಡಿಯಷ್ಟಿತ್ತು.29.40 ಟಿಎಂಸಿ ಸಂಗ್ರಹವಾಗಿತ್ತು.

ಬೆಳಗಾವಿ ಜಲಾಶಯಗಳು

ಬೆಳಗಾವಿ ಜಿಲ್ಲೆಯ ಘಟ್ರಪ್ರಭಾ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 2169.75 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟ 2175, ಸದ್ಯ46.89 ಟಿಎಂಸಿ ನೀರು ಇಲ್ಲಿ ಸಂಗ್ರಹವಾಗಿದೆ. ಗರಿಷ್ಠ ಟಿಎಂಸಿ 51 . ಜಲಾಶಯಕ್ಕೆ ಒಳ ಹರಿವು 0 ಕ್ಯೂಸೆಕ್‌ ಇದ್ದು. ಹೊರಹರಿವಿನ ಪ್ರಮಾಣ5369 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಇಟ್ಟು ಶೇ92 ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಘಟಪ್ರಭಾ ಜಲಾಶಯ ನೀರಿನ ಮಟ್ಟ2161 ಅಡಿಯಷ್ಟಿತ್ತು. 40.30 ಟಿಎಂಸಿ ಸಂಗ್ರಹವಾಗಿತ್ತು

ಬೆಳಗಾವಿ ಜಿಲ್ಲೆಯ ಮಲಪ್ರಭಾ ನವಿಲುತೀರ್ಥ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 2076.44 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟ 2079.50. ಸದ್ಯ 33.57 ಟಿಎಂಸಿ ನೀರು ಇಲ್ಲಿ ಸಂಗ್ರಹವಾಗಿದೆ. ಗರಿಷ್ಠ ಟಿಎಂಸಿ 37.73. ಜಲಾಶಯಕ್ಕೆ ಒಳ ಹರಿವು 0 ಕ್ಯೂಸೆಕ್‌ ಇದ್ದು. ಹೊರಹರಿವಿನ ಪ್ರಮಾಣ 2391 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಇಟ್ಟು ಶೇ89 ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಲಪ್ರಭಾ ನವಿಲು ತೀರ್ಥ ನೀರಿನ ಮಟ್ಟ2060.11 ಅಡಿಯಷ್ಟಿತ್ತು. 16.66 ಟಿಎಂಸಿ ಸಂಗ್ರಹವಾಗಿತ್ತು.