ವಿಕಲಚೇತನರು, ಹಿರಿಯ ನಾಗರೀಕರ ಆರೈಕೆದಾರರಿಗೆ ಮಾಸಿಕ ಸಿಗಲಿದೆ 1 ಸಾವಿರ ರೂ. ಪ್ರೋತ್ಸಾಹಧನ, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30 ಕಡೆ ದಿನ
ವಿಕಲಚೇತನರು, ಹಿರಿಯ ನಾಗರೀಕರ ಸೇರಿದಂತೆ ಸೆರೆಬ್ರಲ್ ಪಾಲ್ಸಿ ಸಹಿತ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಆರೈಕೆದಾರರಿಗೆ ಕರ್ನಾಟಕ ಸರ್ಕಾರ ಒಂದು ಸಾವಿರ ರೂ. ಮಾಸಿಕ ಆರ್ಥಿಕ ನೆರವು ನೀಡಲಿದೆ.
ಬೆಂಗಳೂರು: ಕರ್ನಾಟಕದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಸೆರೆಬ್ರಲ್ ಪಾಲ್ಸಿ( Cerebral Palsy), ಮಸ್ಕುಲಾರ್ ಡಿಸ್ಟೋಪಿ (Muscular Dystrophy), ಪಾರ್ಕಿನ್ಸನ್( Parkinson’s and Multiple Sclerosis) ಕಾಯಿಲೆಯಿಂದ ಬಳಲುತ್ತಿರುವ ವಿಕಲಚೇತನ ವ್ಯಕ್ತಿಗಳ ಆರೈಕೆ ಮಾಡುತ್ತಿರುವ ಆರೈಕೆದಾರಿಗೆ ಮಾಹೆಯಾನ ರೂ.1 ಸಾವಿರಗಳ ಪ್ರೋತ್ಸಾಹಧನವನ್ನು ನೀಡುವ ಯೋಜನೆಯನ್ನು 2024-25ನೇ ಸಾಲಿನಲ್ಲಿ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ವಿಕಲತೆ ಇರುವವರನ್ನು ಆರೈಕೆ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕದ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಅಕ್ಟೋಬರ್ 30 ರೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ನಮೂನೆಗಳನ್ನು ಆಯಾಯ ತಾಲ್ಲೂಕಿನ ಕರ್ನಾಟಕದ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಇಲಾಖೆಗಳ ಕಚೇರಿಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಆಯಾಯ ತಾಲ್ಲೂಕಿನ ಇಲಾಖೆ ಅಧಿಕಾರಿಗಳಿಗೆ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್, 30 ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಇದರ ಪ್ರಯೋಜನವನ್ನುಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ Cerebral Palsy, Muscular Dystrophy, Parkinson’s and Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರು ಪಡೆದುಕೊಳ್ಳಬೇಕಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ತಾಲ್ಲೂಕು ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗವಿಲಕ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಸಲ್ಲಿಸಬಹುದು.
ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಆರೈಕೆ ಮಾಡುತ್ತಿರುವವರ ವಿಳಾಸ, ಆಧಾರ್, ಬ್ಯಾಂಕ್ ವಿವರ, ಚಿಕಿತ್ಸೆ ಪಡೆಯುತ್ತಿರುವವರೊಂದಿಗಿನ ಸಂಬಂಧದ ವಿವರಗಳನ್ನು ಒದಗಿಸಬೇಕು ಎಂದು ತಿಳಿಸಲಾಗಿದೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವಾಲಯ, ಗೇಟ್ -3, ನೆಲ ಮಹಡಿ, ಬಹುಮಹಡಿಗಳ ಕಟ್ಟಡ, ಡಾ:ಅಂಬೇಡ್ಕರ್ ವೀಧಿ, ಬೆಂಗಳೂರು -560 001. ವೆಬ್ ಸೈಟ್ www.karnataka.gov.in/wcddsce ಮಾಹಿತಿ ಪಡೆಯಬಹುದು. 080-22353991, 080-22866066 ಸಂಖ್ಯೆಗೆ ಕರೆ ಮಾಡಬಹುದು.\
ಇತರೆ ಯೋಜನೆಗಳು
ನಿರಾಮಯ ಯೋಜನೆ: ಬುದ್ದಿಮಾಂದ್ಯ/ಸೆರೆಬ್ರಲ್ ಪಾಲ್ಸಿ/ಆಟಿಸಂ/ಬಹುವಿಧ ವಿಕಲಚೇತನತೆ ಇರುವ ಬಿಪಿಲ್ ಕುಟಂಬದ ವ್ಯಕ್ತಿಗಳಿಗೆ ಪ್ರಥಮ ಬಾರಿಗೆ ರೂ.250/-ಗಳನ್ನು ಸರ್ಕಾರದ ವತಿಯಿಂದ ವಿಮಾ ಕಂತಾಗಿ ಪಾವತಿಸಿ ಪ್ರತಿ ವರ್ಷ 1.00 ಲಕ್ಷದವರಗೆ ವ್ಯೆದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ
ಬುದ್ದಿಮಾಂದ್ಯ ವ್ಯಕ್ತಿಗಳ ತಂದೆ-ತಾಯಿ/ಪೋಷಕರಿಗೆ ವಿಮಾ ಯೋಜನೆ:ಬುದ್ದಿ ಮಾಂದ್ಯ ವ್ಯಕ್ತಿಗಳ ತಂದೆ/ತಾಯಿ/ಪೋಷಕರು ಮರಣ ಹೊಂದಿದ ಪಕ್ಷದಲ್ಲಿ ಬುಧ್ದಿಮಾಂದ್ಯ ವ್ಯಕ್ತಿಗಳ ಪೋಷಣೆಗಾಗಿ ಜೀವ ವಿಮಾ ನಿಗಮದಿಂದ ನಾಮ ನಿರ್ದೇಶಿತರಿಗೆ ತಲಾ 20,000/- ರಂತೆ ವಿಮಾ ಹಣ ದೊರೆಯಲಿದೆ.
ಸ್ಪರ್ಧಾ ಚೇತನ ಯೋಜನೆ:ವಿಶೇಷ ಸಾಮರ್ಥದ ವಿದ್ಯಾವಂತ ನಿರುದ್ಯೋಗಿ ವ್ಯಕ್ತಿಗಳಿಗೆ ಐ.ಎ.ಎಸ್/ಕೆ.ಎ.ಎಸ್/ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಯೋಜನೆಯಾಗಿದೆ.(ವಿದ್ಯಾವಂತ ನಿರುದ್ಯೋಗಿ ಅಂಗವಿಕಲರಿಗೆ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ಸಂಸ್ಥೆಗಳಿಗೆ ಹಣ ನೀಡಲಾಗುವುದು)
ವೈದ್ಯಕೀಯ ಪರಿಹಾರ ನಿಧಿ: ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿಯಲ್ಲಿ ವಿಕಲಚೇತನತೆಯನ್ನು ಸರಿಪಡಿಸಿಕೊಳ್ಳಲು ಗರಿಷ್ಠ ರೂ.1.00 ಲಕ್ಷದವರೆಗೆ ವೈದ್ಯಕೀಯ ಶಸ್ತ್ರ ಚಿಕಿತ್ಸೆಯ ಖರ್ಚು ವೆಚ್ಚಗಳನ್ನು ವೈದ್ಯಾಧಿಕಾರಿಗಳಿಂದ ದೃಢೀಕರಿಸಿ ನಿಯಮಾನುಸಾರ ನೀಡಲಾಗುತ್ತದೆ.
ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ:ಈ ಯೋಜನೆಯಡಿ 60ರಿಂದ 64 ವರ್ಷದೊಳಗಿನ ಫಲಾನುಭವಿಗಳಿಗೆ ಮಾಹೆಯಾನ ರೂ.600/ಗಳ ಪಿಂಚಣಿ ಹಾಗೂ 65 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರೂ.1000/-ಗಳ ಆರ್ಥಿಕ ಪಿಂಚಣೆಯನ್ನು ನೀಡಲಾಗುತ್ತಿದೆ,
ಸಂಧ್ಯಾ ಸುರಕ್ಷಾ ಯೋಜನೆ:ಕಂದಾಯ ಇಲಾಖೆಯಿಂದ ಈ ಯೋಜನೆ ಜಾರಿಯಲ್ಲಿದ್ದು, ಸಾಮಾಜಿಕ ಭದ್ರತಾ ರೂಪದಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ.1000/-ಗಳ ಆರ್ಥಿಕ ಸಹಾಯಧನವನ್ನು ಮಾಸಿಕವಾಗಿ ನೀಡಲಾಗುತ್ತಿದೆ.
ವಿಭಾಗ