ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರ ಪ್ರಕಟ, ಪ್ರತಿ ವಿಷಯದ ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ- ಇಲ್ಲಿದೆ ಮಾರ್ಗಸೂಚಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರ ಪ್ರಕಟ, ಪ್ರತಿ ವಿಷಯದ ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ- ಇಲ್ಲಿದೆ ಮಾರ್ಗಸೂಚಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರ ಪ್ರಕಟ, ಪ್ರತಿ ವಿಷಯದ ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ- ಇಲ್ಲಿದೆ ಮಾರ್ಗಸೂಚಿ

Karnataka SSLC Answer Key 2025: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರಗಳು ಪ್ರಕಟವಾಗಿವೆ. ನಾಳೆ ಸಂಜೆ ತನಕ ಆಕ್ಷೇಪಣೆ ಸಲ್ಲಿಸವುದಕ್ಕೆ ಅವಕಾಶವಿದೆ. ಪ್ರತಿ ವಿಷಯದ ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಮಾರ್ಗಸೂಚಿ ಇಲ್ಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರ ಪ್ರಕಟವಾಗಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರ ಪ್ರಕಟವಾಗಿದೆ.

Karnataka SSLC Answer Key 2025 Released: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರಗಳನ್ನು ಪ್ರಕಟಿಸಿದೆ. ಇದಕ್ಕೆ ಆಕ್ಷೇಪಣೆಗಳಿದ್ದರೆ ನಾಳೆ (ಏಪ್ರಿಲ್ 6) ಸಂಜೆ 5.30ರ ಒಳಗೆ ಸಲ್ಲಿಸುವುದಕ್ಕೆ ಲಿಂಕ್‌ ಅನ್ನು ಕೂಡ ನೀಡಿದೆ. ಈ ವರ್ಷ ಕರ್ನಾಟಕ ಎಸ್‌ಎಸ್‌ಎಲ್‌ಸಿ (10ನೇ ತರಗತಿ ಬೋರ್ಡ್ ಪರೀಕ್ಷೆ) ವಾರ್ಷಿಕ ಪರೀಕ್ಷೆ ಬರೆದವರು ತಾತ್ಕಾಲಿಕ ಕೀ ಉತ್ತರಗಳನ್ನು ಮಂಡಲಿಯ ಅಧಿಕೃತ ವೆಬ್‌ಸೈಟ್‌ kseab.karnataka.gov.in ನಲ್ಲಿ ಗಮನಿಸಬಹುದು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರ ಪ್ರಕಟ

ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರ ವಿಷಯದ ಬುದ್ಧಿವಂತ ತಾತ್ಕಾಲಿಕ ಉತ್ತರ ಕೀಲಿಯನ್ನು ಏಪ್ರಿಲ್ 4 ರಂದು ಬಿಡುಗಡೆ ಮಾಡಲಾಯಿತು ಮತ್ತು ಆಗ ಆಕ್ಷೇಪಣೆ ವಿಂಡೋವನ್ನು ಸಹ ತೆರೆಯಲಾಯಿತು. ಚಾಲೆಂಜ್ ವಿಂಡೋ ಏಪ್ರಿಲ್ 6, 2025 ರಂದು ಸಂಜೆ 5.30 ರವರೆಗೆ ತೆರೆದಿರುತ್ತದೆ. ಕೆಎಸ್‌ಇಎಬಿ ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ಉತ್ತರ ಕೀಲಿಯ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇದನ್ನು ಕೆಎಸ್‌ಇಎಬಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾಡಬಹುದು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಕೀ ಉತ್ತರ ಪ್ರಕಟವಾಗಿದ್ದು, ಅದನ್ನು ಡೌನ್‌ಲೋಡ್ ಮಾಡುವುದಕ್ಕೆ ಅನುಸರಿಸಬೇಕಾದ ಸರಳ ಹಂತಗಳಿವು

1) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿಯ ಅಧಿಕೃತ ವೆಬ್‌ಸೈಟ್‌ kseab.karnataka.gov.in ಹೋಗಿ

2) ಲೇಟೆಸ್ಟ್ ನ್ಯೂಸ್ ಎಂಬ ನೋಟಿಫಿಕೇಶನ್ ಬಾರ್‌ನ ಕೊನೆಯಲ್ಲಿರುವ ರೀಡ್ ಮೋರ್ ಎಂಬುದನ್ನು ಕ್ಲಿಕ್ ಮಾಡಿದರೂ ಆಗುತ್ತದೆ. ಅಥವಾ ಅಲ್ಲಿ ಚಲಿಸುತ್ತಿರುವ “Click here for 2025 S.S.L.C. Examination-1 Key Answers & to file objections for key answers” ಎಂಬುದನ್ನು ಕ್ಲಿಕ್ ಮಾಡಿದರೂ ಆಗಬಹುದು.

3) ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ “CLICK HERE FOR SSLC 2025 EXAM -1 KEY ANSWERS” ಮತ್ತು “Online Objection Entry” ಎಂಬ ಸಂದೇಶ ಕಾಣಬಹುದು.

4) ಕೀ ಉತ್ತರ ನೋಡಬೇಕಾದರೆ “CLICK HERE FOR SSLC 2025 EXAM -1 KEY ANSWERS” ಎಂಬುದನ್ನು ಕ್ಲಿಕ್ ಮಾಡಬೇಕು

5) ಆಗ ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ 65 ವಿಷಯಗಳ ಕೀ ಉತ್ತರ ಪ್ರಕಟವಾಗಿದೆ. ಒಂದೊಂದೇ ವಿಷಯವನ್ನು ಕ್ಲಿಕ್ ಮಾಡಿದರೆ ಕೀ ಉತ್ತರ ಇರುವ ಪಿಡಿಎಫ್ ತೆರೆದುಕೊಳ್ಳುತ್ತದೆ. ನೇರ ಲಿಂಕ್‌ - https://kseeb.karnataka.gov.in/objectionentry2025/2025EXAM1KEYANSWERS

6) ಕೀ ಉತ್ತರ ನೋಡಿದ ಬಳಿಕ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿಮಗನಿಸಿದರೆ, ಮೂರನೇ ಹಂತದಲ್ಲಿ ನೀವು ನೋಡಿದ ಪುಟದಲ್ಲಿ “Online Objection Entry” ಎಂಬುದರ ಕೆಳಗೆ Enter the Register Number ಎಂದು ನಮೂಸಿದೆ. ಅದರ ಎದುರು ಖಾಲಿ ಜಾಗ ಇದೆ. ಅಲ್ಲಿ ರಿಜಿಸ್ಟರ್ ನಂಬರ್ ನಮೂದಿಸಿ ಆಕ್ಷೇಪಣೆ ಸಲ್ಲಿಸಬಹುದು. ಇದರ ನೇರ ಲಿಂಕ್ - https://kseeb.karnataka.gov.in/objectionentry2025/registration

7) ಕೀ ಉತ್ತರಗಳ ಪಿಡಿಎಫ್‌ ಮತ್ತು ಆಕ್ಷೇಪಣೆಯ ಹಾರ್ಡ್ ಕಾಪಿಯನ್ನು ಡೌನ್‌ಲೋಡ್ ಮಾಡಿ ಭವಿಷ್ಯದ ಅಗತ್ಯಗಳಿಗೆ ಇಟ್ಟುಕೊಳ್ಳಬಹುದು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 21 ರಂದು ಪ್ರಾರಂಭವಾಯಿತು. ಏಪ್ರಿಲ್ 4 ರಂದು ಕೊನೆಗೊಂಡಿತು. ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ಕ್ಕೆ ನಡೆಸಲಾಯಿತು. ಪರೀಕ್ಷೆಯು ಮೊದಲ ಭಾಷಾ ಪತ್ರಿಕೆಗಳೊಂದಿಗೆ ಪ್ರಾರಂಭವಾಯಿತು ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳೊಂದಿಗೆ ಮುಕ್ತಾಯವಾಯಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರೀಕ್ಷೆ -1, ಪರೀಕ್ಷೆ -2 ಮತ್ತು ಪರೀಕ್ಷೆ -3 ಎಂಬ ಮೂರು ಹಂತಗಳಲ್ಲಿ ನಡೆಸುತ್ತಿದೆ.. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಕೆಎಸ್‌ಇಎಬಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.