ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪ್ರಥಮ ಭಾಷೆ ಸಂಸ್ಕೃತ ಸುಲಭ ಇತ್ತು, ಮಾದರಿ ಪ್ರಶ್ನೆ ಪತ್ರಿಕೆ ರೆಫರ್‌ ಮಾಡಿದ್ದು ಒಳ್ಳೆಯದಾಯಿತು
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪ್ರಥಮ ಭಾಷೆ ಸಂಸ್ಕೃತ ಸುಲಭ ಇತ್ತು, ಮಾದರಿ ಪ್ರಶ್ನೆ ಪತ್ರಿಕೆ ರೆಫರ್‌ ಮಾಡಿದ್ದು ಒಳ್ಳೆಯದಾಯಿತು

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪ್ರಥಮ ಭಾಷೆ ಸಂಸ್ಕೃತ ಸುಲಭ ಇತ್ತು, ಮಾದರಿ ಪ್ರಶ್ನೆ ಪತ್ರಿಕೆ ರೆಫರ್‌ ಮಾಡಿದ್ದು ಒಳ್ಳೆಯದಾಯಿತು

Karnataka SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರುವಾಗಿದ್ದು, ಮೊದಲ ದಿನ (ಮಾರ್ಚ್ 21) ಪ್ರಥಮ ಭಾಷೆ ಪರೀಕ್ಷೆ ನಡೆಯಿತು. ಈ ಪೈಕಿ ಸಂಸ್ಕೃತ ಭಾಷೆಯ ಪ್ರಶ್ನೆಪತ್ರಿಕೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಕ್ರಿಯಿಸಿದ್ದು, ಸುಲಭ ಇತ್ತು ಎಂದು ಹೇಳಿದ್ದಾರೆ. ಹಳೆಯ ಪ್ರಶ್ನೆಪತ್ರಿಕೆ, ಮಾದರಿ ಪ್ರಶ್ನೆ ಪತ್ರಿಕೆ ರೆಫರ್ ಮಾಡಿದ್ದನ್ನು ಉಲ್ಲೇಖಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪ್ರಥಮ ಭಾಷೆ ಸಂಸ್ಕೃತ ಸುಲಭ ಇತ್ತು, ಮಾದರಿ ಪ್ರಶ್ನೆ ಪತ್ರಿಕೆ ರೆಫರ್‌ ಮಾಡಿದ್ದು ಒಳ್ಳೆಯದಾಯಿತು ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಪಾಲಕರು ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪ್ರಥಮ ಭಾಷೆ ಸಂಸ್ಕೃತ ಸುಲಭ ಇತ್ತು, ಮಾದರಿ ಪ್ರಶ್ನೆ ಪತ್ರಿಕೆ ರೆಫರ್‌ ಮಾಡಿದ್ದು ಒಳ್ಳೆಯದಾಯಿತು ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಪಾಲಕರು ತಿಳಿಸಿದ್ದಾರೆ.

Karnataka SSLC Exam: ಕರ್ನಾಟಕದಲ್ಲಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ (10ನೇ ತರಗತಿ ಬೋರ್ಡ್ ಎಕ್ಸಾಂ) ಶುರುವಾಗಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಿತು. ಪ್ರಥಮ ಭಾಷೆ ಎಂದರೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (NCERT), ಸಂಸ್ಕೃತ. ಒಟ್ಟು 9 ಭಾಷೆಗಳ ಪರೀಕ್ಷೆ ನಡೆಯಿತು. ಈ ಪೈಕಿ ಪ್ರಥಮ ಭಾಷೆ ಸಂಸ್ಕೃತ ತೆಗೆದುಕೊಂಡವರು ಕೂಡ ಪರೀಕ್ಷೆ ಬರೆದಿದ್ದು, ಪರೀಕ್ಷೆ ಸುಲಭವಾಗಿತ್ತು ಎಂದು ಹೇಳಿದ್ದಾರೆ. ಕರ್ನಾಟಕ ಉದ್ದಗಲಕ್ಕೂ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 1.15ರ ತನಕ ನಡೆಯಿತು.

ಸಂಸ್ಕೃತ ಸುಲಭ ಇತ್ತು, ಮಾದರಿ ಪ್ರಶ್ನೆ ಪತ್ರಿಕೆ ರೆಫರ್‌ ಮಾಡಿದ್ದು ಒಳ್ಳೆಯದಾಯಿತು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂದು ನಡೆದ ಸಂಸ್ಕೃತ ಭಾಷೆ ಪರೀಕ್ಷೆ ನಿರೀಕ್ಷೆಯಂತೆಯೆ ಸುಲಭ ಇತ್ತು. ಬಹಳ ಮುಂಚಿತವಾಗಿಯೆ ಪರೀಕ್ಷಾ ಸಿದ್ಧತೆ ನಡೆಸಿದ ಕಾರಣ ಸಮಸ್ಯೆ ಆಗಲಿಲ್ಲ. ಕಳೆದ ನಾಲ್ಕು ವರ್ಷಗಳ ಸಂಸ್ಕೃತ ಭಾಷೆ ಪ್ರಶ್ನೆ ಪತ್ರಿಕೆಗಳನ್ನು ರೆಫರ್ ಮಾಡಿದ್ದೆ. ಸರ್ಕಾರ ನೀಡಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳನ್ನೂ ಅಭ್ಯಾಸ ಮಾಡಿದ್ದೆ. ಬಹುತೇಕ ಎಲ್ಲ ಪ್ರಶ್ನೆಗಳೂ ಇಷ್ಟು ಪ್ರಶ್ನೆ ಪತ್ರಿಕೆಗಳಿಂದಲೇ ಬಂದಿತ್ತು. ಹೀಗಾಗಿ, ಕಷ್ಟ ಅಂತ ಅನಿಸಲಿಲ್ಲ ಎಂದು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸೃಜನಾ ನೀರ್ಕಜೆ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದರು.

ಹಳೆಯ ಪ್ರಶ್ನೆ ಪತ್ರಿಕೆ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸರಿಯಾಗಿ ಅಭ್ಯಾಸ ಮಾಡಿದ್ದರೆ ಸಂಸ್ಕೃತ ಪ್ರಶ್ನೆಪತ್ರಿಕೆ ಕಷ್ಟವೆನಿಸಲ್ಲ. ಮಗಳು ಅದನ್ನು ಮಾಡಿದ್ದ ಕಾರಣ ಆಕೆಗೆ ಕಷ್ಟವಾಗಲಿಲ್ಲ. ಶಾಲೆಯಲ್ಲಿ ನಿತ್ಯ ಪಾಠವನ್ನು ಮನೆಗೆ ಬಂದು ಅಭ್ಯಾಸ ಮಾಡಿದ್ದು, ಪರೀಕ್ಷೆ ಹತ್ತಿರದಲ್ಲಿದ್ದಾಗ ಹಳೆಯ ಪ್ರಶ್ನೆ ಪತ್ರಿಕೆಗಳು ನೆರವಿಗೆ ಬರುತ್ತವೆ. ಸರ್ಕಾರ ಬಿಡುಗಡೆ ಮಾಡಿದ ಮಾದರಿ ಪ್ರಶ್ನೆ ಪತ್ರಿಕೆಗಳಿಂದಲೂ ಕೆಲವು ಪ್ರಶ್ನೆಗಳು ಬಂದಿವೆ. ದೊಡ್ಡ ದೊಡ್ಡ ವಿವರಣೆ ಕೊಟ್ಟು ಬರೆಯುವ ಪ್ರಶ್ನೆಗಳನ್ನು ಬರೆದು ಕಲಿಯುವುದು ಉತ್ತಮ. ಅದನ್ನು ಮಗಳು ಅನುಸರಿಸುತ್ತಿದ್ದಾಳೆ. ಅದು ಪರೀಕ್ಷೆಯಲ್ಲಿ ಆಕೆಯ ನೆರವಿಗೆ ಬರುತ್ತಿದೆ. ಇನ್ನುಳಿತದಂತೆ ಒಂದು ಮಾರ್ಕ್, ಎರಡು ಮಾರ್ಕಿನ ಪ್ರಶ್ನೆಗಳು ಕೂಡ ಇದೇ ಕ್ವಶ್ಚನ್ ಬ್ಯಾಂಕ್‌ನಿಂದಲೇ ಪ್ರಶ್ನೆ ಪತ್ರಿಕೆ ರಚಿಸುವವರು ಆಯ್ಕೆ ಮಾಡುವ ಕಾರಣ ಕೆಲವೊಮ್ಮೆ ಸುಲಭವಾಗುತ್ತದೆ ಎಂದು ಸೃಜನಾ ಅವರ ತಾಯಿ ಸುಮನಾ ನೀರ್ಕಜೆ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಪ್ರಥಮ ಭಾಷೆ ಸಂಸ್ಕೃತ ಪ್ರಶ್ನೆ ಪತ್ರಿಕೆ ಪಿಡಿಎಫ್‌

ಶನಿವಾರ, ಭಾನುವಾರ ಪರೀಕ್ಷೆ ಇಲ್ಲ, ಸೋಮವಾರ ಗಣಿತ ಮತ್ತು ಸಮಾಜಶಾಸ್ತ್ರ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ (10ನೇ ತರಗತಿ ಬೋರ್ಡ್ ಪರೀಕ್ಷೆ) ಇಂದು ಶುರುವಾಗಿದ್ದು, ಏಪ್ರಿಲ್‌ 4ರ ವರೆಗೂ ನಡೆಯಲಿದೆ. ಶನಿವಾರ ಮತ್ತು ಭಾನುವಾರ ಪರೀಕ್ಷೆ ಇರಲ್ಲ. ಸೋಮವಾರ (ಮಾರ್ಚ್ 24) ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ 2018 ಕೇಂದ್ರಗಳಲ್ಲಿ 3,35,468 ಬಾಲಕರು, 3,78,389 ಬಾಲಕಿಯರು ಸೇರಿ 8,96,447 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವೆಬ್‌ಕಾಸ್ಟಿಂಗ್ ಇರಲಿದ್ದು, ಹೆಚ್ಚಿನ ಸುಧಾರಣೆಯನ್ನು ಪರಿಚಯಿಸಲಾಗಿದೆ ಎಂದು ಪರೀಕ್ಷೆ ಕರ್ತವ್ಯಕ್ಕೆ ಹೋಗುತ್ತಿರುವ ಬೆಂಗಳೂರಿನ ಶಿಕ್ಷಕ ಕೆ. ತಿಮ್ಮೇಗೌಡ ತಿಳಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner