ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಮೇ 26ರಿಂದ ಜೂನ್ 2ರ ತನಕ, ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕ ಸುಧಾರಣೆಗೆ ಅವಕಾಶ ಒದಗಿಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಮೇ 26 ರಿಂದ ಜೂನ್ 2 ರ ತನಕ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ ಮತ್ತು ಪೂರಕ ವಿವರ ಇಲ್ಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ 2: ಕರ್ನಾಟಕ ಎಸ್‌ಎಸ್‌ಎಲ್‌ಸಿಯ 2025ನೇ ಸಾಲಿನ ಎರಡನೇ ಪರೀಕ್ಷೆಯ ದಿನಾಂಕಗಳು ಪ್ರಕಟವಾಗಿದೆ. ಈ ತಿಂಗಳ ಅಂದರೆ ಮೇ 26 ರಿಂದ ಜೂನ್ 2 ರ ತನಕ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2; ಮೇ 26 ರಿಂದ ಜೂನ್ 2
ಮೇ 26- ಪ್ರಥಮ ಭಾಷೆ - ಕನ್ನಡ, ಇಂಗ್ಲಿಷ್, ಹಿಂದಿ, ಇತರೆ.
ಮೇ 27 - ಗಣಿತ
ಮೇ 28 - ದ್ವಿತೀಯ ಭಾಷೆ - ಇಂಗ್ಲಿಷ್, ಕನ್ನಡ.
ಮೇ 29 - ಸಮಾಜ ವಿಜ್ಞಾನ
ಮೇ 30 - ತೃತೀಯ ಭಾಷೆ - ಹಿಂದಿ / ಕನ್ನಡ / ಇಂಗ್ಲಿಷ್ ಮತ್ತು ಇತರೆ ಭಾಷೆಗಳು
ಮೇ 31 - ವಿಜ್ಞಾನ
ಜೂನ್ 2 - ಜೆಟಿಎಸ್ ವಿಷಯಗಳು
ಈ ಎಲ್ಲ ವಿಷಯಗಳ ಪರೀಕ್ಷೆಗಳು ನಿಗದಿತ ದಿನಾಂಕಗಳಂದು ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 1.15 ರವರೆಗೆ ನಡೆಯಲಿವೆ. ಜೂನ್ 3 ರಂದು ಜಿಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿಯೇ ನಡೆಸಲಾಗುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಹಿಂದುಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಯನ್ನು ಅಪರಾಹ್ನ 02-00 ಗಂಟೆಯಿಂದ ಸಂಜೆ 05.15 ರವರೆಗೆ ನಿಗದಿಪಡಿಸಿದೆ. ಸದರಿ ವಿಷಯಗಳ ತಾತ್ತ್ವಿಕ ಪರೀಕ್ಷೆಯನ್ನು ಅಪರಾಹ್ನ 02-00 ಗಂಟೆಯಿಂದ 3.45 ರವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಅಪರಾಹ್ನ 3.45 ರಿಂದ ಸಂಜೆ 5.15 ಗಂಟೆಯವರೆಗೆ ನಡೆಸಲಾಗುವುದು ಎಂದು ಮಂಡಳಿ ತಿಳಿಸಿದೆ.
ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು 3 ಗಂಟೆಯ ಪ್ರಶ್ನೆ ಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 30 ನಿಮಿಷಗಳನ್ನು ನೀಡುವುದಾಗಿ ಪರೀಕ್ಷಾ ಮಂಡಳಿ ತಿಳಿಸಿದೆ.
ಪ್ರಥಮ ಭಾಷಾ ವಿಷಯಗಳು, ಕೋರ್ ವಿಷಯಗಳು ಮತ್ತು ಜೆಟಿಎಸ್ ವಿಷಯಗಳಿಗೆ ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 1.15 ರವರೆಗೆ ಮತ್ತು ದ್ವಿತೀಯ ಭಾಷಾ ವಿಷಯಗಳು ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10.00 ರಿಂದ ಮಧ್ನಾಹ್ನ 1.00 ವರೆಗೆ ನಡೆಯಲಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 3 ಜೂನ್ 23 ರಿಂದ 30
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 3ರ ದಿನಾಂಕವನ್ನೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಕಟಿಸಿದೆ. ಇದರಂತೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ 3 ಜೂನ್ 23 ರಿಂದ ಜೂನ್ 30ರ ತನಕ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರಲ್ಲಿ ಅನುತ್ತೀರ್ಣರಾದವರು ಪರೀಕ್ಷೆ 2, 3 ತೆಗೆದುಕೊಳ್ಳಲು ಅವಕಾಶ ನೀಡಿದ್ದು, ಅದಕ್ಕೆ ವೇಳಾಪಟ್ಟಿ ನಿಗದಿ ಮಾಡಿದೆ. ಅದರ ಪ್ರಕಾರ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.