ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಫೆ 25 ರಿಂದ ಮಾ 4ರ ತನಕ ಪರೀಕ್ಷೆ
Karnataka SSLC Preparatory Exam: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಇದರಂತೆ, ಫೆ 25 ರಿಂದ ಮಾರ್ಚ್ 4ರ ತನಕ ಪರೀಕ್ಷೆಗಳು ನಡೆಯಲಿವೆ.

Karnataka SSLC preparatory Exam: ಕರ್ನಾಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಸಲದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಂತೆ, ಈ ಹಿಂದೆ ಫೆ 26ರಿಂದ ಶುರುವಾಗಬೇಕಾಗಿದ್ದ ಪರೀಕ್ಷೆಗಳು ಫೆ 25ರಿಂದಲೇ ಶುರುವಾಗಲಿವೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಫೆ 25 ರಿಂದ ಮಾರ್ಚ್ 4ರ ತನಕ ನಡೆಯಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಸಲವೂ ಪೂರ್ವ ಸಿದ್ಧತಾ ಪರೀಕ್ಷೆಗೆ ಏಕ ರೂಪದ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ನೀಡಲು ನಿರ್ಧರಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಆನ್‌ಲೈನ್ ಮೂಲಕ ಕಳುಹಿಸಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ 2025ರ ಪರಿಷ್ಕೃತ ವೇಳಾಪಟ್ಟಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿರುವ ಈ ಸಲದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ಫೆ 25 ರಿಂದ ಮಾರ್ಚ್ 4ರ ತನಕ ನಡೆಯಲಿವೆ. ಎರಡು ಪಾಳಿಗಳಲ್ಲಿ ಅಂದರೆ ಕಲವು ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರ ತನಕ ಮತ್ತು ಕೆಲವು ದಿನಗಳಲ್ಲಿ ಮಧ್ಯಾಹ್ನ ನಂತರ 2 ಗಂಟೆಯಿಂದ ಸಂಜೆ 5 ಗಂಟೆ ಅಥವಾ 5.15 ಗಂಟೆ ತನಕ ನಡೆಯಲಿದೆ.
ಫೆ.25- ಪ್ರಥಮ ಭಾಷೆ - ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ ಭಾಷ ಪರೀಕ್ಷೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರ ತನಕ ನಡೆಯಲಿವೆ. ಇದು 100 ಅಂಕಗಳ ಪರೀಕ್ಷೆ.
ಫೆ 26 ರಂದು ಮಹಾ ಶಿವರಾತ್ರಿ ಕಾರಣ ಪರೀಕ್ಷೆಗಳು ಇರುವುದಿಲ್ಲ.
ಫೆ 27 ರಂದು ಕೋರ್ ಸಬ್ಜೆಕ್ಟ್ ಗಣಿತ ಪರೀಕ್ಷೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರ ತನಕ ನಡೆಯಲಿದೆ. ಇದು 8 ಅಂಕಗಳ ಪರೀಕ್ಷೆ
ಫೆ 28 ರಂದು ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರ ತನಕ ನಡೆಯಲಿದೆ. ಇದು 8 ಅಂಕಗಳ ಪರೀಕ್ಷೆಯಾಗಿದೆ
ಮಾರ್ಚ್ 1 ರಂದು ತೃತೀಯ ಭಾಷೆ - ಹಿಂದಿ (ಎನ್‌ಸಿಇಆರ್‌ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಭಾಷಾ ಪರೀಕ್ಷೆಗಳು ಮಧ್ಯಾಹ್ನ ನಂತರ 2 ಗಂಟೆಯಿಂದ ಸಂಜೆ 5 ಗಂಟೆ ತನಕ ನಡೆಯಲಿದೆ. ಇದು 80 ಅಂಕಗಳ ಪರೀಕ್ಷೆ
ಮಾರ್ಚ 2 ಭಾನುವಾರವಾದ ಕಾರಣ ರಜೆ
ಮಾರ್ಚ್ 3 ರಂದು ಕೋರ್ ಸಬ್ಜೆಕ್ಟ್ ವಿಜ್ಞಾನ ಪರೀಕ್ಷೆ ಮಧ್ಯಾಹ್ನ ನಂತರ 2 ಗಂಟೆಯಿಂದ ಸಂಜೆ 5.15 ಗಂಟೆ ತನಕ ನಡೆಯಲಿದೆ. ಇದು 80 ಅಂಕಗಳ ಪರೀಕ್ಷೆ
ಮಾರ್ಚ್ 4 ರಂದು ಕೋರ್ ಸಬ್ಜೆಕ್ಟ್ ಸಮಾಜವ ವಿಜ್ಞಾನ ಪರೀಕ್ಷೆ ಮಧ್ಯಾಹ್ನ ನಂತರ 2 ಗಂಟೆಯಿಂದ ಸಂಜೆ 5.15 ಗಂಟೆ ತನಕ ನಡೆಯಲಿದೆ. ಇದು 80 ಅಂಕಗಳ ಪರೀಕ್ಷೆಯಾಗಿರಲಿದೆ.
ಕರ್ನಾಟಕದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವೆಬ್‌ಕಾಸ್ಟಿಂಗ್ ಇದ್ದರೂ ಅದಕ್ಕಾಗಿ ಹೆಚ್ಚುವರಿ ಗ್ರೇಸ್ ಅಂಕ ಸಿಗುವುದಿಲ್ಲ. ಎಲ್ಲ ವಿದ್ಯಾರ್ಥಿಗಳೂ ಸರಿಯಾಗಿ ಸಿದ್ಧತೆ ನಡೆಸಿಕೊಂಡು ಬಂದೇ ಪರೀಕ್ಷೆ ಬರೆಯಬೇಕು ಎಂದು ಕರ್ನಾಟಕ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.
