ಕನ್ನಡ ಸುದ್ದಿ  /  ಕರ್ನಾಟಕ  /  Sslc Result 2024: ಎಸ್‌ಎಸ್‌ಎಲ್‌ಸಿಯಲ್ಲಿ ರೈತನ ಮಗಳು ಅಂಕಿತಾ ಬಸಪ್ಪ ಕೊಣ್ಣೂರು ರಾಜ್ಯಕ್ಕೆ ಪ್ರಥಮ; ಬಡತನದಲ್ಲಿ ಅರಳಿದ ಪ್ರತಿಭೆ

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ರೈತನ ಮಗಳು ಅಂಕಿತಾ ಬಸಪ್ಪ ಕೊಣ್ಣೂರು ರಾಜ್ಯಕ್ಕೆ ಪ್ರಥಮ; ಬಡತನದಲ್ಲಿ ಅರಳಿದ ಪ್ರತಿಭೆ

ಎಸ್‌ಎಸ್‌ಎಲ್‌ಸಿಯಲ್ಲಿ ರೈತನ ಮಗಳು ಅಂಕಿತಾ ಬಸಪ್ಪ ಕನ್ನೂರ್ ಕರ್ನಾಟಕಕ್ಕೆ ಪಥಮ ಸ್ಥಾನ ಪಡೆದಿದ್ದಾರೆ. 2024ರಲ್ಲಿ ಈ ಸಾಧನೆ ಮಾಡಿದ ಏಕೈಕ ವಿದ್ಯಾರ್ಥಿ ಎನಿಸಿದ್ದಾರೆ. ಬಡತನದಲ್ಲಿ ಅರಳಿದ ಬಾಗಲಕೋಟೆಯ ಈ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ಬಾಗಲಕೋಟೆಯ ಅಂಕಿತಾ ಬಸಪ್ಪ ಕನ್ನೂರ್ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ಬಾಗಲಕೋಟೆಯ ಅಂಕಿತಾ ಬಸಪ್ಪ ಕನ್ನೂರ್ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (Karnataka SSLC Result 2024) ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಮುಧೋಳದ ಮಲ್ಲಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕನ್ನೂರ್ 625ಕ್ಕೆ 625 ಅಂಕಗಳನ್ನ ಪಡೆಯುವ ಮೂಲಕ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 2024ರ ಎಸ್‌ಎಸ್‌ಎಲ್‌ಸಿಯ ಫಲಿತಾಂಶದಲ್ಲಿ ಇವರು ಎಲ್ಲಾ ವಿಷಯಗಳಲ್ಲಿ 100ಕ್ಕೆ 100ರಷ್ಟು ಅಂಕಗಳನ್ನು ಪಡೆದಿರುವ ಏಕೈಕ ವಿದ್ಯಾರ್ಥಿಯಾಗಿದ್ದಾರೆ. ಅಂಕಿತಾ ಬಸಪ್ಪ ಕನ್ನೂರ್ ಅವರ ಸಾಧನೆ, ಮನೆಯ ಪರಿಸ್ಥಿತಿ, ಓದಿಗೆ ಅವರ ಶ್ರಮದ ಬಗ್ಗೆ ಪತ್ರಕರ್ತ ರಿಷಿಕೇಶ್ ಬಹುದ್ದೂರ್ ದೇಸಾಯಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಿಂದಿನ ವರ್ಷಗಳಲ್ಲಿ ಟಾಪ್ ಸ್ಲಾಟ್‌ ಪೂರ್ಣ ಅಂಕಗಳನ್ನ ಹಲವು ವಿದ್ಯಾರ್ಥಿಗಳು ಪಡೆಯುತ್ತಿದ್ದರು. ಆದರೆ ಈ ಬಾರಿ ಅಂಕಿತಾ ಬಸಪ್ಪ ಅವರು ಮಾತ್ರ ಇಡೀ ರಾಜ್ಯಕ್ಕೆ 625ಕ್ಕೆ 625 ಅಂಕಗಳನ್ನು ಗಳಿಸಿದ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂಕಿತಾ ಅವರ ತಂದೆ ಬಸಪ್ಪ ಕೊನ್ನೂರ್ ವಜ್ರಮಟ್ಟಿ ಗ್ರಾಮದ ರೈತ. ಆರು ಎಕರೆ ಜಮೀನು ಹೊಂದಿದ್ದಾರೆ. ಇವರ ತಾಯಿ ಗೃಹಣಿಯಾಗಿದ್ದು, ಕೆಲ ಸಂದರ್ಭದಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಮೂಲಕ ಕೃಷ್ಟಿ ಚಟುವಟಿಕೆಗಳಲ್ಲಿ ಪತಿಗೆ ನೆರವಾಗುತ್ತಾರೆ. ಅಂಕಿತಾಗೆ ಇಬ್ಬರು ಸಹೋದರರಿದ್ದಾರೆ.

ಪುತ್ರಿಯ ಸಾಧನೆ ಬಗ್ಗೆ ಮಾತನಾಡಿರುವ ಬಸಪ್ಪ ಕನ್ನೂರ್ ಮಾತನಾಡಿ, ಅಂಕಿತಾ ರಜೆಗೆಂದು ಮನೆಗೆ ಬಂದಿದ್ದಾಳೆ ಎಂದು ಹೇಳಿದ್ದಾರೆ. ಅಂಕಿತಾ ಅವರ ಯಶಸ್ಸಿನ ಬಗ್ಗೆ ಅವರ ಶಿಕ್ಷಕರು ಸಂತಸ ಪಟ್ಟಿದ್ದಾರೆ. ಫಲಿತಾಂಶ ಬಂದ ಒಂದು ಗಂಟೆಯೊಳಗೆ ಇಡೀ ಗ್ರಾಮವೇ ಅವರ ಮನೆ ಬಾಗಿಲಿಗೆ ಬಂದು ಸಂಭ್ರಮಿಸಿ ಸಿಹಿ ಹಂಚಿದ್ದಾರೆ. ಅಂಕಿತಾ ಬ್ರಿಲಿಯಂಟ್ ವಿದ್ಯಾರ್ಥಿನಿ ಎಂದು ನಮಗೆ ತಿಳಿದಿತ್ತು. ಆದರೆ ನಾವು ಈ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ತುಂಬಾ ಖುಷಿಯಾಗಿದೆ ಎನ್ನುವ ಅಂಕಿತಾ, ತಮ್ಮ ಮನೆಯಲ್ಲಿ ಎಷ್ಟೇ ಹಣಕಾಸಿನ ಸಮಸ್ಯೆಗಳು ಇದ್ದರೂ ಓದು ಮುಂದುವರಿಸುವುದಾಗಿ ಹೇಳಿದ್ದಾರೆ.

ಪಿಯುಸಿ ವಿಜ್ಞಾನ ಓದಿದ ನಂತರ ಇಂಜಿನಿಯರಿಂಗ್ ಆ ಬಳಿಕ ಐಎಎಸ್ ಅಧಿಕಾರಿಯಾಗಿ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಲು ಆಸೆ ಇದೆ. ತನ್ನ ಕೋರ್ಸ್‌ಗಳ ಆಯ್ಕೆ ಅಥವಾ ಗ್ರೇಡ್‌ಗಳ ಬಗ್ಗೆ ಪೋಷಕರಿಂದ ಯಾವುದೇ ಒತ್ತಡವಿಲ್ಲ ಎಂದು ಹೇಳಿದ್ದಾರೆ. ಇನ್ನೂ ಈಕೆಗೆ ಹಾಸ್ಟೆಲ್‌ನಲ್ಲಿ ಮೊಬೈಲ್ ಸಂಪರ್ಕವೇ ಇರಿಲ್ಲ. ಆದರೆ ಶಾಲೆಯಲ್ಲಿ ಡಿಜಿಟಲ್ ಲೈಬ್ರರಿಯನ್ನು ಬಳಸಿಕೊಂಡಿದ್ದಾಳೆ. ಪ್ರತಿದಿನ ತಾನು ಓದಿರುವುದಕ್ಕೆ ಫಲಿತಾಂಶದ ಕ್ರೆಡಿಟ್ ಕೊಟ್ಟುಕೊಂಡಿದ್ದಾಳೆ. ಚುನಾವಣೆಗಳ ಮೊದಲು ಮಾತ್ರ ಅಧ್ಯಯನ ಮಾಡಲು ಒಲವು ತೋರಿದ ತನ್ನ ಸ್ನೇಹಿತರಿಗೆ ಹೋಲಿಸಿಕೊಂಡರೆ ಈಕೆ ದೈನಂದಿನ ಅಧ್ಯಯನದಿಂದ ಈ ಯಶಸ್ಸು ಸಾಧ್ಯವಾಗಿದೆ.

ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದ ಅಂಕಿತಾ ಬಸಪ್ಪ ಕನ್ನೂರ್

ಅಂಕಿತಾ ಬೆಳಗ್ಗೆ 5 ಗಂಟೆಗೆ ಎದ್ದು ತರಗತಿಗಳಿಗೆ ಹಾಜರಾಗುವ ಮೊದಲು ಕನಿಷ್ಠ ಎರಡು ಗಂಟೆಗಳ ಕಾಲ ಓದುತ್ತಿದ್ದಳು. ಸಂಜೆ ಶಾಲೆಯ ಮೈದಾನದಲ್ಲಿ ಆಟವಾಡುವ ಮೊದಲು ಆ ದಿನ ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಅಂದೇ ಮತ್ತೊಮ್ಮೆ ಓದಿಕೊಂಡು ಶಾಲೆಯಿಂದ ಹಾಸ್ಟೆಲ್‌ಗೆ ವಾಪಸ್ ಆಗುತ್ತಿದ್ದಳು. ಈಕೆ ಶೈಕ್ಷಣಿಕ ಶಿಸ್ತಿಗೆ ಹೆಚ್ಚಿನ ಮನ್ನಣೆ ನೀಡಿದ್ದಾಳೆ. ನನ್ನ ಶಿಕ್ಷಕರು ನನ್ನ ಮೇಲೆ ಅಪಾರ ವಿಶ್ವಾಸ ಹೊಂದಿದ್ದರು ಮತ್ತು ನನಗೆ ಅಗತ್ಯವಿರುವ ಎಲ್ಲಾ ಪುಸ್ತಕಗಳು ಮತ್ತು ಸಾಮಗ್ರಿಗಳನ್ನು ಪಡೆದುಕೊಂಡಿದ್ದೇನೆ. ನಾನು ಕಷ್ಟಪಟ್ಟು ಶ್ರಮ ಹಾಕಿದ್ದಾನೆ. ಎಲ್ಲ ಶಿಕ್ಷಕರು ನನ್ನ ಪ್ರಶ್ನೆಗಳಿಗೆ ಲಭ್ಯ ಇರುತ್ತಿದ್ದರು. ಇದೀಗ ಫಲಿತಾಂಶದಿಂದ ಅವರು ನಿರಾಳರಾಗಿದ್ದಾರೆ. ಇದರಿಂದ ನನಗೂ ಸಂತೋಷವಾಗಿದೆ ಎಂದು ಅಂಕಿತಾ ಹೇಳಿದ್ದಾರೆ.

ನೀವು ನಿಮ್ಮ ಮನೆಯಲ್ಲಿರುವಾಗ, ಮನೆಕೆಲಸಗಳನ್ನು ಮಾಡುವುದು ಮಾತ್ರವಲ್ಲದೆ, ನಿಮ್ಮ ಕುಟುಂಬ ಮತ್ತು ನಿಮ್ಮ ಹಳ್ಳಿಯಲ್ಲಿನ ಆಚರಣೆಗಳಲ್ಲಿ ಪಾಲ್ಗೊಳ್ಳಲು ಸಹ ನಿರೀಕ್ಷಿಸಲಾಗಿದೆ. ಆದರೆ ಹಾಸ್ಟೆಲ್‌ನಲ್ಲಿರುವಾಗ ಓದುವುದೊಂದೇ ನಿಮ್ಮ ಮುಂದಿರುವ ಕೆಲಸ ಎಂದಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಕೆಎಂ ಜಾನಕಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಅಂಕಿತಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅಭಿನಂದಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಶೀಘ್ರದಲ್ಲೇ ಅಂಕಿತಾ ಅವರ ಕುಟುಂಬವನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.

IPL_Entry_Point