KSP App: ಟ್ರಾಫಿಕ್ ದಂಡದಲ್ಲಿ 50% ರಿಯಾಯಿತಿ ಪಡೆಯುವ ಭರದಲ್ಲಿ ಸೈಬರ್ ವಂಚಕರ ಗಾಳಕ್ಕೆ ಬೀಳದಿರಿ!; App ಅಪ್ಡೇಟ್ ಮಾಡಿಕೊಳ್ಳಿ..
Karnataka Stata Police App: ಕರ್ನಾಟಕ ಸ್ಟೇಟ್ ಪೊಲೀಸ್ (Karnataka State Police) ಆಪ್ ಅಪ್ಡೇಟ್ ಮಾಡಿಕೊಂಡರೆ ದಂಡ ಪಾವತಿ ಮಾತ್ರವಲ್ಲದೆ, ಹಲವು ಅಪ್ಡೇಟೆಡ್ ಫೀಚರ್ಸ್ ಅನ್ನು ಬಳಸಬಹುದು. ಕೆಎಸ್‌ಪಿ ಆಪ್ ಅನ್ನು ಈಗಾಗಲೇ ಬಳಸುತ್ತಿರುವವರು ಅದನ್ನು ಅಪ್ಡೇಟ್ ಅಥವಾ ರೀ ಇನ್‌ಸ್ಟಾಲ್ ಮಾಡಿದರೆ ಈ ಹೊಸ ಫೀಚರ್ಸ್ ಬಳಸಬಹುದು ಎಂದು ಟ್ವೀಟ್ ತಿಳಿಸಿದೆ.
ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಪಾವತಿಸುವುದು ಬಾಕಿ ಇದೆಯಾ? ಈಗ 50% ರಿಯಾಯಿತಿ ಇದೆ ಎಂದು ಅನೇಕರು ಈಗಾಗಲೇ ದಂಡ ಬಾಕಿಯನ್ನು ಕಟ್ಟಿದ್ದಾರೆ. ಇನ್ನೂ ಹಲವರು ದಂಡ ಪಾವತಿಸಲು ಹಳೇ ಆಪ್ ಬಳಸುತ್ತಿರಬಹುದು. ಆದರೆ ಆಪ್ ಅಪ್ಡೇಟ್ ಮಾಡಿದರೆ ಈ ಕೆಲಸ ಇನ್ನೂ ಸುಲಭವಾದೀತು.
ಟ್ರೆಂಡಿಂಗ್ ಸುದ್ದಿ
ಹೌದು, ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಕುರಿತು ಟ್ವೀಟ್ ಮಾಡಿದ್ದು, ಆಪ್ ಅಪ್ಡೇಟ್ ಮಾಡುವುದಕ್ಕೆ ಅಗತ್ಯವಾದ ಲಿಂಕ್ ಅನ್ನೂ ಶೇರ್ ಮಾಡಿದ್ದಾರೆ.
ಕರ್ನಾಟಕ ಸ್ಟೇಟ್ ಪೊಲೀಸ್ (Karnataka State Police) ಆಪ್ ಅಪ್ಡೇಟ್ ಮಾಡಿಕೊಂಡರೆ ದಂಡ ಪಾವತಿ ಮಾತ್ರವಲ್ಲದೆ, ಹಲವು ಅಪ್ಡೇಟೆಡ್ ಫೀಚರ್ಸ್ ಅನ್ನು ಬಳಸಬಹುದು. ಕೆಎಸ್‌ಪಿ ಆಪ್ ಅನ್ನು ಈಗಾಗಲೇ ಬಳಸುತ್ತಿರುವವರು ಅದನ್ನು ಅಪ್ಡೇಟ್ ಅಥವಾ ರೀ ಇನ್‌ಸ್ಟಾಲ್ ಮಾಡಿದರೆ ಈ ಹೊಸ ಫೀಚರ್ಸ್ ಬಳಸಬಹುದು ಎಂದು ಟ್ವೀಟ್ ತಿಳಿಸಿದೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ವಿಧಿಸಿರುವ ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರೆ ಫೆ.11ರ ತನಕ ಶೇಕಡ 50 ರಿಯಾಯಿತಿ ದೊರಕಲಿದೆ. ಫೆ.11ರ ನಂತರ ಈ ರಿಯಾಯಿತಿ ದೊರಕದು. ಪೂರ್ಣ ದಂಡವನ್ನು ಪಾವತಿಸಬೇಕಾಗುತ್ತದೆ.
ದಂಡ ಪಾವತಿಸುವುದಕ್ಕೆ ಪೊಲೀಸ್ ಆಪ್, ಪೇಟಿಎಂ ಮತ್ತು ಇತರೆ ಆನ್‌ಲೈನ್ ವಿಧಾನದ ಮೂಲಕ ಅನುಕೂಲವನ್ನು ಇಲಾಖೆ ಒದಗಿಸಿದೆ. ಇದಲ್ಲದೆ, ಪೊಲೀಸ್ ಠಾಣೆಗಳಲ್ಲೂ ದಂಡ ಪಾವತಿಸುವುದಕ್ಕೆ ಅವಕಾಶ ನೀಡಿದೆ.
ಹೆಚ್ಚುತ್ತಿರುವ ಸೈಬರ್ ವಂಚನೆ ಕಾರಣ ಬಹುತೇಕರು ಪೊಲೀಸ್ ಇಲಾಖೆಯ ಅಧಿಕೃತ ಆಪ್‌ನಲ್ಲೇ ದಂಡ ಪಾವತಿಸಲು ಸಲಹೆ ನೀಡುತ್ತಿದ್ದಾರೆ. ಸೈಬರ್ ವಂಚಕರು ಈ ಅವಕಾಶವನ್ನು ದುರ್ಬಳಕೆ ಮಾಡಲು ಪ್ರಯತ್ನಿಸಬಹುದು ಎಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಆಪ್ ಡೌನ್‌ಲೋಡ್ ಮಾಡುವುದಕ್ಕೆ ನೇರ ಲಿಂಕ್
ಆಂಡ್ರಾಯ್ಡ್ ಫೋನ್‌ಗಳಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್ (Karnataka State Police)ನ ಅಧಿಕೃತ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ನೇರ ಲಿಂಕ್ ಇಲ್ಲಿದೆ - Karnataka State Police Official App
ಆಪಲ್ ಐಫೋನ್‌ಗಳಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್ (Karnataka State Police)ನ ಅಧಿಕೃತ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ನೇರ ಲಿಂಕ್ ಇಲ್ಲಿದೆ - Karnataka State Police Official App
ಮೊದಲ ಎರಡು ದಿನ 14 ಕೋಟಿ ರೂಪಾಯಿ ಹತ್ತಿರ ದಂಡ ಸಂಗ್ರಹ
ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡ ಪಾವತಿಗೆ ರಾಜ್ಯ ಸರಕಾರವು ಶೇಕಡ 50ರಷ್ಟು ವಿನಾಯಿತಿ ಪ್ರಕಟಿಸಿದ್ದರಿಂದ ಕಳೆದ ಎರಡು ದಿನಗಳಲ್ಲಿ ಭರ್ಜರಿ ದಂಡ ಸಂಗ್ರಹವಾಗಿದೆ. ಎರಡನೇ ದಿನ 2.52 ಲಕ್ಷ ವಾಹನಗಳಿಂದ 6.80 ಕೋಟಿ ರೂ. ದಂಡ ಸಂಗ್ರಹವಾಗಿದೆ. ಎರಡು ದಿನಗಳಲ್ಲಿ ಒಟ್ಟು 13.81 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.