ಕನ್ನಡ ಸುದ್ದಿ  /  Karnataka  /  Karnataka Teen Forced To Perform Banned Ritual As Father Fails To Pay Loan

Koppal News: ಅಪ್ಪ ಸಾಲ ತೀರಿಸಿಲ್ಲ ಅಂತ ಮಗನಿಗೆ ನಿಷೇಧಿತ ಬೆತ್ತಲೆ ಸೇವೆ ಮಾಡಿಸಿದ ದುರುಳ..

ಅಪ್ಪ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಕೊಪ್ಪಳದ 15 ವರ್ಷದ ಬಾಲಕನಿಗೆ ದೇವರಿಗೆ ಬೆತ್ತಲೆ ಪೂಜೆ ಸಲ್ಲಿಸುವ ನಿಷೇಧಿತ ಆಚರಣೆಯಾದ ‘ಬೆತ್ತಲೆ ಸೇವೆ’ಯನ್ನು ಮಾಡಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಅಪ್ಪ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಕೊಪ್ಪಳದ 15 ವರ್ಷದ ಬಾಲಕನಿಗೆ ದೇವರಿಗೆ ಬೆತ್ತಲೆ ಪೂಜೆ ಸಲ್ಲಿಸುವ ನಿಷೇಧಿತ ಆಚರಣೆಯಾದ ‘ಬೆತ್ತಲೆ ಸೇವೆ’ಯನ್ನು ಮಾಡಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಮನೆ ನಿರ್ಮಾಣಕ್ಕೆ ತಂದೆ ಮಾಡಿದ ಸಾಲವನ್ನು ಮರುಪಾವತಿಸಲು ತಂದೆ ವಿಫಲರಾದ ಹಿನ್ನೆಲೆಯಲ್ಲಿ ಕಳೆದ ಜೂನ್​ ತಿಂಗಳಲ್ಲಿ ಮಗನ ಬಳಿ ಬೆತ್ತಲೆ ಸೇವೆ ಮಾಡಿಸಿದ್ದರು. ಆದರೆ ಘಟನೆಯ ವಿಡಿಯೋ ಇದೀಗ ವೈರಲ್​ ಆಗಿದ್ದು, ವಿಷಯ ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ಭಾನುವಾರ ಎಫ್‌ಐಆರ್‌ ಕೂಡ ದಾಖಲಾಗಿದೆ. ಸಾಲ ಪಡೆದುಕೊಂಡಿದ್ದ ವ್ಯಕ್ತಿಯ 15 ವರ್ಷದ ಮಗ ಹುಬ್ಬಳ್ಳಿಗೆ ತೆರಳಿ ತಂದೆಗೆ ಸಾಲವನ್ನು ಮರುಪಾವತಿಸಲು ಸಹಾಯ ಮಾಡಲು ದೈನಂದಿನ ಕೂಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದನು. ಆದರೆ ಸಾಲ ನೀಡಿದ ಆರೋಪಿಯು ಬಾಲಕನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದ ವಿವಸ್ತ್ರಗೊಳಿಸಿ ಬೆತ್ತಲೆ ಸೇವೆ ಮಾಡಿಸಿದ್ದಾನೆ.

ಬಳಿಕ ಬಾಲಕ ಮಂಗಳೂರಿಗೆ ತೆರಳಿ ಖಾಸಗಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮುಂದುವರಿಸಿದ್ದ. ಮೂರು ತಿಂಗಳ ನಂತರ ಸಂತ್ರಸ್ತನ ಪೋಷಕರು ವೈರಲ್ ವಿಡಿಯೋ ಮೂಲಕ ಘಟನೆಯ ಬಗ್ಗೆ ತಿಳಿದು ಕೊಪ್ಪಳ (ಗ್ರಾಮೀಣ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

ದೇವರ ಆದೇಶವೆಂದು ಹೇಳಿ ಬಾಲಕನ ಬಲಿ ನೀಡಿದ ದುಷ್ಟರು

ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ದೇವರ ಆದೇಶವೆಂದು ಹೇಳಿ 6 ವರ್ಷದ ಬಾಲಕನ ಬಲಿ ನೀಡಿರುವ ಘೋರ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ದೆಹಲಿ ಪೊಲೀಸರ ಪ್ರಕಾರ ಈ ಘಟನೆಯು ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಶನಿವಾರ ರಾತ್ರಿ ನಡದಿದೆ. ಇಬ್ಬರು ವ್ಯಕ್ತಿಗಳು ಸೇರಿ ಬಾಲಕನ ರುಂಡ ಕತ್ತರಿಸಿದ್ದಾರೆ. ಭಾನುವಾರ ಮುಂಜಾನೆ ಇದನ್ನು ಗಮನಿಸಿದವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಟ್ಟಡ ಕಾರ್ಮಿಕರು ಅಷ್ಟರಲ್ಲೇ ಆರೋಪಿಗಳನ್ನು ಹಿಡಿದಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೊಲೆಗೆ ಕಾರಣ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ದೇವರ ಆದೇಶದ ಮೇರೆಗೆ ಕೃತ್ಯ ಎಸಗಿದ್ದೇವೆ ಎಂದು ಕಾರಣ ನೀಡಿದ್ದಾರೆ. ಕೊಲೆಯಾದ ಬಾಲಕ ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಬರೇಲಿ ಮೂಲದ ಕಾರ್ಮಿಕರೊಬ್ಬರ ಮಗನಾಗಿದ್ದಾನೆ. ಆರೋಪಿಗಳು ಗಾಂಜಾ ಸೇವಿಸಿದ ಅಮಲಿನಲ್ಲಿರುವಾಗ ಕೃತ್ಯ ಎಸಗಿದ್ದಾರೆ.ಬಂಧಿತ ಆರೋಪಿಗಳನ್ನ ವಿಜಯ್​ ಕುಮಾರ್​ ಮತ್ತು ಅಮನ್​ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಗೆ ಬಾಲಕನ ಪರಿಚಯವಿದ್ದು, ಕುಟುಂಬದೊಂದಿಗೆ ಯಾವುದೇ ದ್ವೇಷ ಇರಲಿಲ್ಲ. ದೇವರು ಬಲಿ ಕೇಳಿದ್ದಾನೆ ಎಂದು ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಭಾಗ