Karnataka Bundh: ಮಾರ್ಚ್‌ 22ರಂದು ಅಖಂಡ ಕರ್ನಾಟಕ ಬಂದ್‌ ಖಚಿತ, ವಾರಾಂತ್ಯಕ್ಕೆ ಏನಿರುತ್ತೆ ಏನಿರಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bundh: ಮಾರ್ಚ್‌ 22ರಂದು ಅಖಂಡ ಕರ್ನಾಟಕ ಬಂದ್‌ ಖಚಿತ, ವಾರಾಂತ್ಯಕ್ಕೆ ಏನಿರುತ್ತೆ ಏನಿರಲ್ಲ

Karnataka Bundh: ಮಾರ್ಚ್‌ 22ರಂದು ಅಖಂಡ ಕರ್ನಾಟಕ ಬಂದ್‌ ಖಚಿತ, ವಾರಾಂತ್ಯಕ್ಕೆ ಏನಿರುತ್ತೆ ಏನಿರಲ್ಲ

Karnataka Bundh: ಕನ್ನಡಪರ ಸಂಘಟನೆಗಳು ಮಾರ್ಚ್‌ 22ರ ಶನಿವಾರದಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಅಂದು ಸಂಚಾರ ವ್ಯತ್ಯಯವಾಗಲಿದೆಯಾ, ಏನೇನು ಸೇವೆಗಳು ಸಿಗಲಿವೆ ಎನ್ನುವುದು ಶುಕ್ರವಾರದ ಹೊತ್ತಿಗೆ ಗೊತ್ತಾಗಲಿದೆ.

ಈ ವಾರಾಂತ್ಯದ ಶನಿವಾರದಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಈ ವಾರಾಂತ್ಯದ ಶನಿವಾರದಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

Karnataka Bundh: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರ ಪುಂಡಾಟ, ಎಂಇಎಸ್‌ ಹಾಗೂ ಶಿವಸೇನೆ ಕಾರ್ಯಕರ್ತರ ದಬ್ಬಾಳಿಕೆ, ಗಡಿ ವಿಚಾರದಲ್ಲಿ ಸರ್ಕಾರದ ನಿಲುವುಗಳನ್ನು ಖಂಡಿಸಿ ಮಾರ್ಚ್ 22ರ ಶನಿವಾರದಂದು ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಹದಿನೈದು ದಿನದ ಹಿಂದೆಯೇ ಬೆಳಗಾವಿಯಲ್ಲಿ ಹಿಂಸಾಚಾರ ನಡೆದಾಗಲೇ ಬಂದ್‌ ಘೋಷಣೆ ಮಾಡಲಾಗಿತ್ತು. ಆದರೆ ಎಸ್‌ಎಸ್‌ಎಲ್‌ಸಿ ಸಹಿತ ವಿವಿಧ ಪರೀಕ್ಷೆಗಳು ಇರುವ ಜತೆಗೆ ಈಗಾಗಲೇ ಬೆಳಗಾವಿ ಭಾಗದಲ್ಲಿ ಶಾಂತಿ ನೆಲೆಸಿರುವುದರಿಂದ ಬಂದ್‌ ನಡೆಸುವ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಿರಲಿಲ್ಲ. ಈಗ ಮಾರ್ಚ್‌ 22ರಂದೇ ಬಂದ್‌ ನಡೆಸುವ ಕುರಿತು ತೀರ್ಮಾನವನ್ನೂ ಪ್ರಕಟಿಸಲಾಗಿದೆ. ಶನಿವಾರ ಮೂರನೇ ಶನಿವಾರದ ರಜೆಯೂ ಇರುವುದರಿಂದ ಬಂದ್‌ ಪರಿಣಾಮ ಅಷ್ಟಾಗಿ ಆಗದೇ ಇದ್ದರೂ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುವುದು ಖಚಿತವಾಗಿದೆ. ಬಂದ್‌ ಹಿನ್ನೆಲೆಯಲ್ಲಿ ಬಸ್‌ ಸೇವೆ ಸೇರಿದಂತೆ ಯಾವ್ಯಾವ ಸೇವೆಗಳ ಮೇಲೆ ವ್ಯತ್ಯಯವಾಗಲಿದೆ ಎನ್ನುವುದು ಶುಕ್ರವಾರದ ಹೊತ್ತಿಗೆ ತಿಳಿಯಬಹುದು.

ಇದೇ ಮಾರ್ಚ್​​ 22ರಂದು ಕರ್ನಾಟಕ ಬಂದ್ ಫಿಕ್ಸ್ ಆಗಿದೆ. ಈ ಸಂಬಂಧ ಇಂದು (ಮಾರ್ಚ್​ 18) ಬೆಂಗಳೂರಿನಲ್ಲಿ ‘ಅಖಂಡ ಕರ್ನಾಟಕ ಬಂದ್‌’ಗೆ ಕುರಿತು ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್​ ಮಾಡಲು ತೀರ್ಮಾನವಾಗಿದೆ.ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಂದ್ ಆಗುವುದು ನಿಶ್ಚಿತ. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ಮಾಡುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮತನಾಡಿದ ವಾಟಾಳ್ ನಾಗರಾಜ್, ಹೀಗಾಗಿ ನಿಮ್ಮ ಸ್ವಾಭಿಮಾನಕ್ಕಾಗಿ ಯಾರು ಸಾರಿಗೆ ವಾಹನ ಹತ್ತಬೇಡಿ ಸಾರ್ವಜನಿಕರಿಗೆ ಮನವಿ ಮಾಡಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮಾತಾನಾಡಿದ್ದೇವೆ. ಅವತ್ತು ಬಸ್ ಓಡಿಸಬಾರದೆಂದು ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ ಅವತ್ತು ಬಸ್ ಓಡಿಸಬಾರದು. ಬೆಳಗಾವಿಯಿಂದ ಎಂಇಎಸ್ ಅನ್ನು ಒದ್ದು ಓಡಿಸಬೇಕೋ ಬೇಡ್ವೋ? ಬೆಳಗಾವಿ ಘಟನೆ ಕಣ್ಣಿಗೆ ಚಿಕ್ಕದಾಗಿರಬಹುದು. ಆದ್ರೆ ನಮ್ ಕಣ್ಣಿಗೆ ಇದು ಬೆಟ್ಟ. ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆ ಇದೆ. ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರ ಪ್ರತಿಮೆ ಇಲ್ಲ ಎಂದರು.

ಬಂದ್​ಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ ಬೆಂಬಲ

ಮಾರ್ಚ್​ 22ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಸಾರಿಗೆ ನೌಕರರ ಕೂಟ ಸಹ ಬೆಂಬಲಿಸಿದೆ. ಈ ಬಗ್ಗೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಪ್ರತಿಕ್ರಿಯಿಸಿ, ಬಂದ್​ಗೆ KSRTC, ಬಿಎಂಟಿಸಿ ನೌಕರರ ಸಂಘದಿಂದ ಬೆಂಬಲ ಇದೆ. ಕಳೆದ ತಿಂಗಳು ಸಾರಿಗೆ ನೌಕರನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಖಂಡಿಸಿದ ಕನ್ನಡಪರ ಹೋರಾಟಗಾರರಿಗೆ ಸದಾ ಚಿರಋಣಿ. ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರು ನಿಮ್ಮ ಜೊತೆ ಇದ್ದೇವೆ. ಕರ್ನಾಟಕ ಬಂದ್​​ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

ಬಂದ್​ಗೆ ಕ.ರ. ವೇ. ಶಿವರಾಮೇಗೌಡ ಬಣ ಬೆಂಬಲ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್​ 22ರಂದು ಕರ್ನಾಟಕ ಬಂದ್​ಗೆ ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸಹ ಬೆಂಬಲಿಸಿದೆ. ಈ ಬಗ್ಗೆ ಸ್ವತಃ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸ್ಪಷ್ಟಪಡಿಸಿದ್ದಾರೆ.

ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ನಾಡಿನ ಹಿತಕ್ಕಾಗಿ ಬಂದ್​ಗೆ ಕರೆ ನೀಡಲಾಗಿದೆ. ಸರ್ವ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿದ್ದೇವೆ. ಮೆಟ್ರೋದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಆಗುತ್ತಿದೆ. ಶಿವಸೇನೆ ನಿಷೇಧ ಸೇರಿ ಅನೇಕ ವಿಚಾರ ಮುಂದಿಟ್ಟು ಬಂದ್​ಗೆ ಕರೆ ನೀಡಲಾಗಿದೆ. ಚಾಲಕರು ಸೇರಿ ಎಲ್ಲರೂ ಈ ಬಂದ್​ ಅನ್ನು ಯಶಸ್ವಿಗೊಳಿಸಬೇಕು. ಆಸ್ಪತ್ರೆ, ಹಾಲು ಸೇರಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಎಂದು ತಿಳಿಸಿದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner