Karnataka UGCET-25: ಸಿಇಟಿ-2025ಕ್ಕೆ ನೊಂದಣಿ ಹಾಗು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
Karnataka UGCET-25: ಕರ್ನಾಟಕ ಸಿಇಟಿ 2025ಕ್ಕೆ ನೋಂದಣಿ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಇದ್ದ ಕೊನೇ ದಿನಾಂಕವನ್ನು ಫೆ 24ರ ತನಕ ವಿಸ್ತರಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿದೆ.

Karnataka UGCET-25: ಕರ್ನಾಟಕ ಸಿಇಟಿ 2025ಕ್ಕೆ ನೋಂದಣಿ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಇದ್ದ ಕೊನೇ ದಿನಾಂಕವನ್ನು ಫೆ 24ರ ತನಕ ವಿಸ್ತರಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಘೋಷಿಸಿದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸುವುದಕ್ಕೆ ಫೆ 2 ಕೊನೇ ದಿನವಾಗಿತ್ತು. ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಈಗಾಗಲೇ ಅರ್ಜಿ ಸಲ್ಲಿಸಿರುವವರು, ತಮ್ಮ ಅರ್ಜಿಗಳಲ್ಲಿ ಏನಾದರು ತಿದ್ದುಪಡಿಗಳು ಇದ್ದರೂ ಈಗ ಸರಿ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಸಿಇಟಿ-2025ಕ್ಕೆ ನೊಂದಣಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 16 ಮತ್ತು 17 ರಂದು ನಡೆಸುವುದಾಗಿ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಅದರಂತೆ, ಅರ್ಜಿ ಸಲ್ಲಿಸುವುದಕ್ಕೆ ಹಾಗೂ ಆನ್‌ಲೈನ್ ಮೂಲಕ ಶುಲ್ಕ ಪಾವತಿಸುವುದಕ್ಕೆ ಫೆ 2 ಕೊನೇ ದಿನಾಂಕ ಎಂದಿತ್ತು. ಈಗ, ಸಿಇಟಿ-2025ಕ್ಕೆ ಇಲ್ಲಿಯವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಹಾಗು ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಆನ್‌ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸುವುದಕ್ಕೆ ಫೆ 24ರ ರಾತ್ರಿ 11.59 ರವರೆಗೆ ಹಾಗೂ ಫೆ 25ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿದೆ.
“ಈಗಾಗಲೇ ಅರ್ಜಿ ಸಲ್ಲಿಸಿರುವವರು ಎಲ್ಲಾ ಮಾಹಿತಿ ಸರಿಯಾಗಿ ತುಂಬಿರುವ ಬಗ್ಗೆ ಪರಿಶೀಲಿಸಿಕೊಳ್ಳಿ, ತಪ್ಪಿದ್ದರೆ ಮತ್ತೊಮ್ಮೆ Login ಆಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಅಂತಿಮವಾಗಿ Submit ಮಾಡುವ ಅರ್ಜಿ ಸರ್ವ‌್ರನಲ್ಲಿ Save ಆಗುತ್ತದೆ” ಎಂದು ವಿಶೇಷ ಸೂಚನೆಯನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೊಟ್ಟಿದೆ.
ಇದರೊಂದಿಗೆ ಕರ್ನಾಟಕದಲ್ಲಿ ವೃತ್ತಿಪರ ಶಿಕ್ಷಣ ಪಡೆಯಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಹೆಚ್ಚಿನ ಸಮಯಾವಕಾಶ ಸಿಕ್ಕಿದಂತಾಗಿದೆ.
ಕರ್ನಾಟಕ ರಾಜ್ಯದ ವೃತ್ತಿಪರ ಕೋರ್ಸುಗಳ 2025-26ನೇ ಸಾಲಿನ ಪ್ರವೇಶಕ್ಕೆ ಸಂಬಂಧಿಸಿದ ಕರ್ನಾಟಕ ಸಿಇಟಿ ನೋಂದಣಿ ಇಂದು (ಜನವರಿ 23) ಬೆಳಗ್ಗೆ 11 ಗಂಟೆಗೆ ಶುರುವಾಗಿದೆ. ಅಂತಿಮ ದಿನಾಂಕ ಫೆಬ್ರವರಿ 21 ಆಗಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಸಲದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025) ಯನ್ನು ಏಪ್ರಿಲ್ 16, 17 ರಂದು ನಡೆಸಲಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳು ಏಪ್ರಿಲ್ 16 ರಂದು, ಗಣಿತ ಮತ್ತು ಜೀವಶಾಸ್ತ್ರವನ್ನು ಏಪ್ರಿಲ್ 17 ರಂದು ಮತ್ತು ಕನ್ನಡ ಏಪ್ರಿಲ್ 18 ರಂದು ನಡೆಯಲಿದೆ.
“CET-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಬಾರಿ AI ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ. ಪ್ರತಿ ಹಂತದಲ್ಲೂ OTP & Facial Recognition ಆಧಾರದ ಮೇಲೆ ಲಾಗಿನ್ ಮಾಡಬೇಕು. ಎಚ್ಚರ ವಹಿಸಿ ಅರ್ಜಿ ಭರ್ತಿ ಮಾಡಿ” ಎಂದು ಅಭ್ಯರ್ಥಿಗಳಿಗೆ ಸೂಚಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಟ್ವೀಟ್ ಮಾಡಿದೆ.
