Karnataka UGCET-25: ಏ.18ರ ಬದಲಾಗಿ ಏ.15ರಂದೇ ನಡೆಯಲಿದೆ ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ
Karnataka UGCET-25: ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ಏ.18ರ ಬದಲಾಗಿ ಏ.15ರಂದೇ ನಡೆಯಲಿದೆ. ಈ ಹಿಂದಿನ ಪರೀಕ್ಷಾ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಷ್ಕರಿಸಿದ್ದು, ಅದರ ವಿವರ ಇಲ್ಲಿದೆ.

Karnataka UGCET-25: ಕರ್ನಾಟಕ ಯುಜಿ ಸಿಇಟಿ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೆ ಪರಿಷ್ಕರಿಸಿದ್ದು, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷಾ ದಿನಾಂಕವನ್ನು ಬದಲಾಯಿಸಿದೆ. ಉಳಿದಂತೆ ಸಿಇಟಿ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದೇ ನಡೆಯಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಹೊರನಾಡು, ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ
“UGCET-25 ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆಯನ್ನು ಏ.18ರ ಬದಲಾಗಿ ಏ.15ರಂದೇ ನಡೆಸಲಾಗುವುದು. ಉಳಿದಂತೆ ಸಿಇಟಿ ಪರೀಕ್ಷೆ ಏ.16 & 17ರಂದು ನಡೆಯಲಿದೆ. ಇದರಲ್ಲಿ ಯಾವ ಬದಲಾವಣೆ ಇರುವುದಿಲ್ಲ. ಸದ್ಯದಲ್ಲೇ ಪ್ರವೇಶ ಪತ್ರ ಡೌನ್‌ಲೋಡ್‌ಗೂ ಅವಕಾಶ ನೀಡಲಾಗುವುದು.” ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು (ಮಾರ್ಚ್ 17) ಪ್ರಕಟಣೆ ಹೊರಡಿಸಿದೆ.
ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಏಪ್ರಿಲ್ 15 ರಂದು ಬೆಳಿಗ್ಗೆ 10.30ರಿಂದ ಪೂರ್ವಾಹ್ನ 11.30ರ ತನಕ 4ನೇ ತರಗತಿ ಮಟ್ಟದ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಇದು 50 ಅಂಕಗಳಿಗೆ ಇರಲಿದೆ.
ಇನ್ನು, ಸಿಇಟಿ -2025ಕ್ಕೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಸದ್ಯದಲ್ಲಿಯೇ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
