Milk Price Hike: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬರೆ; ಹಾಲಿನ ದರ 5 ರೂ ಹೆಚ್ಚಳ ಸಾಧ್ಯತೆ, ಇಂದು ನಿರ್ಧಾರ
Milk Price Hike: ಪದೇ ಪದೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸುತ್ತಿರುವ ರಾಜ್ಯದ ಜನತೆಗೆ ಮತ್ತೊಂದು ಕಹಿಸುದ್ದಿ ಇದೆ. ಹಾಲಿನ ದರ ಲೀಟರ್‌ಗೆ 5 ರೂ ಜಾಸ್ತಿ ಆಗಲಿದೆ. ಹಾಲು ಒಕ್ಕೂಟಗಳ ಜೊತೆ ಇಂದು (ಮಾರ್ಚ್ 24) ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ಹೊರ ಬರಲಿದೆ.

Milk Price Hike: ಪಶು ಆಹಾರ, ಮೇವಿನ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನೂ ಏರಿಕೆ ಮಾಡಬೇಕು ಎಂದು ಹಾಲು ಒಕ್ಕೂಟಗಳು ಕೆಎಂಎಫ್ ಅಧ್ಯಕ್ಷ ಹಾಗೂ ಪಶುಸಂಗೋಪನಾ ಸಚಿವ ವೆಂಕಟೇಶ್ ಅವರಲ್ಲಿ ಮನವಿ ಮಾಡಿದ್ದವು. ಹಾಲಿನ ದರವನ್ನು ಲೀಟರ್ ಮೇಲೆ 5 ರೂ ಹೆಚ್ಚಿಸುವಂತೆ ಒತ್ತಾಯ ಹೇರಲಾಗಿತ್ತು.
2025–26ರ ಬಜೆಟ್ ಅಧಿವೇಶನ ಮುಕ್ತಾಯ ಬೆನ್ನಲ್ಲೇ ಹಾಲಿನ ಬೆಲೆಯೂ ಏರಿಕೆಯು ಕೂಡ ಬಹುತೇಕ ಖಚಿತವಾಗಿದೆ. ಪ್ರತಿ ಲೀಟರ್ ಹಾಲಿನ ಮೇಲೆ 5 ರೂ ಏರಿಕೆ ಮಾಡಬೇಕು ಎಂದು ಹಾಲು ಒಕ್ಕೂಟಗಳು ಸರ್ಕಾರವನ್ನು ಹಾಗೂ ಸಚಿವರನ್ನು ಒತ್ತಾಯಿಸುತ್ತಲೇ ಇದ್ದವು. ಆದರೆ ಸರ್ಕಾರ ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಸದ್ಯ ಹಾಲು ಒಕ್ಕೂಟಗಳು ಹಾಗೂ ರೈತರು ಹಾಲಿನ ದರ ಏರಿಕೆಗೆ ಒತ್ತಾಯ ಮಾಡುತ್ತಿರುವುದು ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸುವ ಸಾಧ್ಯತೆ ಕಾಣುತ್ತಿದೆ.
ಕೆಎಂಎಫ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಸಂಬಂಧಪಟ್ಟ ಕ್ಷೇತ್ರದ ಸಚಿವರ ಜೊತೆ ಇಂದು ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದು, ಹಾಲಿದ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಹಾಲು ಒಕ್ಕೂಟಗಳ ಬೇಡಿಕೆಯಂತೆ ಲೀಟರ್ ಮೇಲೆ 5 ರೂ ಏರಿಕೆಯಾಗುವುದೇ ಎಂಬುದು ಇಂದು (ಮಾರ್ಚ್ 24) ಇಂದು ತಿಳಿಯಲಿದೆ.
ಮೊದಲೇ ಹೇಳಿದಂತೆ ಮೇವು, ಪಶು ಆಹಾರ, ಕೂಲ ಹಾಗೂ ಇತರ ಖರ್ಚುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲೀಟರ್ ಮೇಲೆ 5 ರೂ ಏರಿಕೆ ಮಾಡಬೇಕು ಎಂಬುದು ಹಾಲು ಒಕ್ಕೂಟಗಳ ಆಗ್ರಹ.
ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಿದ್ಧವಾಗಿದ್ದು, ಸರ್ಕಾರದ ಅನುಮತಿಗಾಗಿ ಎದುರು ನೋಡಲಾಗುತ್ತಿದೆ. ಸಹಕಾರ ಸಚಿವ ಕೆಎನ್ ರಾಜಣ್ಣ, ಪಶು ಸಂಗೋಪನೆ ಸಚಿವ ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಹಾಗೂ ಹಿರಿಯ ಅಧಿಕಾರಿಗಳು ಹಾಲು ಒಕ್ಕೂಟದ ಅಧ್ಯಕ್ಷರೊಂದಿಗೆ ಸಿಎಂ ಸಿದ್ದರಾಮಯ್ಯ ಇಂದು ಸಭೆ ನಡೆಸಲಿದ್ದು, ಅಂತಿಮ ನಿರ್ಣಯಕ್ಕೆ ಬರಲಿದ್ದಾರೆ.
