Water Levels in Reservoiors: ಮಳೆ ಕೊರತೆಯಿಂದ ನೀರಿನ ಪ್ರಮಾಣ ಇಳಿಕೆ; ಕರ್ನಾಟಕ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ
ಕನ್ನಡ ಸುದ್ದಿ  /  ಕರ್ನಾಟಕ  /  Water Levels In Reservoiors: ಮಳೆ ಕೊರತೆಯಿಂದ ನೀರಿನ ಪ್ರಮಾಣ ಇಳಿಕೆ; ಕರ್ನಾಟಕ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

Water Levels in Reservoiors: ಮಳೆ ಕೊರತೆಯಿಂದ ನೀರಿನ ಪ್ರಮಾಣ ಇಳಿಕೆ; ಕರ್ನಾಟಕ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಆಲಮಟ್ಟಿ, ನಾರಾಯಪುರ ಜಲಾಶಯಗಳ ಇಂದಿನಿ ನೀರಿನ ಮಟ್ಟ ಹಾಗೂ ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ನೀರಿ ಮಟ್ಟದ ಮಾಹಿತಿ ಇಲ್ಲಿದೆ.

ತುಂಗಾ ಜಲಾಶಯ (File)
ತುಂಗಾ ಜಲಾಶಯ (File)

ಬೆಂಗಳೂರು: ಕರ್ನಾಟಕದಲ್ಲಿ (Karnataka) ನೈಋತ್ಯ ಮುಂಗಾರು (Monsoon) ತಡವಾಗುತ್ತಿರುವುದು, ಬಿಸಿಲು ಹಾಗೂ ಹಿನ್ನೀರಿನ ಬಳಕೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ (Reservoiors Water Level) ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ.

ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 519 ಮೀಟರ್ ಆಗಿದ್ದು, ಇಂದಿನ ನೀರಿನ ಮಟ್ಟ 507.84 ಮೀಟರ್ ಇದೆ. ಒಳ ಹರಿವು ಶೂನ್ಯವಾಗಿದ್ದು, ಹೊರ ಹರಿವು 821 ಕ್ಯೂಸೆಕ್ಸ್ ಇದೆ. ಆಲಮಟ್ಟಿ ಜಲಾಶಯದ ನೀರಿನ ಮಟ್ಟ 506.87 ಮೀಟರ್‌ಗಿಂತ ಕೆಳ ಮಟ್ಟದ ನೀರನ್ನು ಡೆಡ್‌ ಸ್ಟೋರೇಜ್ ಎಂದು ಕರೆಯಲಾಗುತ್ತದೆ.

ನಾರಾಯಣಪುರ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 492.25 ಮೀಟರ್ ಇದ್ದು, ಇಂದಿನ ನೀರಿನ ಮಟ್ಟ 487.36 ಮೀಟರ್ ಇದೆ. ಇಲ್ಲಿ ಒಳ ಹರಿವು 145.29 ಕ್ಯೂಸೆಕ್ಸ್ ಇದ್ದು, ಹೊರ ಹರಿವು 275.46 ಕ್ಯೂಸೆಕ್ಸ್ ಇದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 554.44 ಮೀಟರ್ ಇದ್ದು, ಇಂದಿನ ಮಟ್ಟ 67.91 ಟಿಎಂಸಿ ನೀರಿನ ಸಂಗ್ರಹವಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಪ್ರಸ್ತುತ 4.17 ಟಿಎಂಸಿ ನೀರು ಸಂಗ್ರಹ ಇದೆ. ಒಳ ಹರಿವು 70 ಕ್ಯೂಸೆಕ್ಸ್ ಇದ್ದು, ಹೊರ ಹರಿವು 500 ಕ್ಯೂಸೆಕ್ಸ್ ಇದೆ.

ಇತರೆ ಜಲಾಶಯಗಳ ಗರಿಷ್ಠ ನೀರಿನ ಮಟ್ಟ

ಸೂಪಾ ಜಲಾಶಯದ ಗರಿಷ್ಠ 564 ಮೀಟರ್

ಹಾರಂಗಿ ಜಲಾಶಯ 871.42 ಮೀಟರ್

ಹೇಮಾವತಿ ಜಲಾಶಯ 890.63 ಮೀಟರ್

ಕೆಆರ್‌ಎಸ್ ಜಲಾಶಯ 38.04 ಮೀಟರ್

ಕಬಿನಿ ಜಲಾಶಯ 696.16 ಮೀಟರ್

ಭದ್ರಾ ಜಲಾಶಯ 567.76 ಮೀಟರ್

ತುಂಗಭದ್ರಾ ಜಲಾಶಯ 497.74 ಮೀಟರ್

ಘಟಪ್ರಭಾ ಜಲಾಶಯ 662.94 ಮೀಟರ್

ಮಲಪ್ರಭಾ ಜಲಾಶಯ 633.83 ಮೀಟರ್

Whats_app_banner