ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಅಲೆಗಳ ಮುನ್ಸೂಚನೆ, ಮೀನುಗಾರರಿಗೆ ಎಚ್ಚರಿಕೆ-karnataka weather for 13th july 2024 heavy rain fall in uttara kannada shimoga no fishing in coastal area rsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಅಲೆಗಳ ಮುನ್ಸೂಚನೆ, ಮೀನುಗಾರರಿಗೆ ಎಚ್ಚರಿಕೆ

ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಅಲೆಗಳ ಮುನ್ಸೂಚನೆ, ಮೀನುಗಾರರಿಗೆ ಎಚ್ಚರಿಕೆ

ಇಂದು ಇಂದು ಕಲಬುರಗಿ, ಯಾದಗಿರಿ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಅನೇಕ ಕಡೆ ಭಾರೀ ಮಳೆ ಆಗಲಿದೆ. ಸಮುದ್ರ ತೀರದಲ್ಲಿ ಭಾರೀ ಅಲೆಗಳ ಮುನ್ಸೂಚನೆ ನೀಡಲಾಗಿದ್ದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಅಲೆಗಳ ಮುನ್ಸೂಚನೆ, ಮೀನುಗಾರರಿಗೆ ಎಚ್ಚರಿಕೆ (ಸಾಂದರ್ಭಿಕ ಚಿತ್ರ)
ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಅಲೆಗಳ ಮುನ್ಸೂಚನೆ, ಮೀನುಗಾರರಿಗೆ ಎಚ್ಚರಿಕೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಇಂದು ಬೆಳಗ್ಗೆ 06:00ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:50ಕ್ಕೆ ಸೂರ್ಯಾಸ್ತವಾಗಲಿದೆ. 11:05 ಕ್ಕೆ ಚಂದ್ರೋಯವಾಗಲಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್‌ ಸಿಟಿ ಬೆಂಗಳೂರಿನ ವಾತಾವರಣ 30.2 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್‌ ಘೋಷಿಸಿದೆ? ಇಲ್ಲಿದೆ ವಿವರ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?

ಶುಕ್ರವಾರ ಉಡುಪಿಯ ಕುಂದಾಪುರದಲ್ಲಿ 8 ಸೆಮೀ ಮಳೆ ಆಗಿದೆ. ಕೋಟ, ಸಿದ್ದಾಪುರ, ಮಂಗಳೂರು ವಿಮಾನ ನಿಲ್ದಾಣದಲ್ಲಿ ತಲಾ 5 ಸೆಮೀ, ಮಂಕಿ, ಹೊನ್ನಾವರ, ಆಗುಂಬೆ, ಕಮ್ಮರಡಿಯಲ್ಲಿ ತಲಾ 3 ಸೆಮೀ, ಗೇರ್ಸೊಪ್ಪ, ಕಾರವಾರ, ಪಣಂಬೂರು, ನಿಪ್ಪಾಣಿಯಲ್ಲಿ ತಲಾ 2 , ಶಿರಾಲಿ, ಮಂಗಳೂರು, ಕಾರ್ಕಳ, ಕದ್ರಾ, ಉಡುಪಿ, ಲೋಂಡಾ, ನಾರಾಯಣಪುರ, ಸಂಕೇಶ್ವರ, ಹುಕ್ಕೇರಿ, ಸೇಡಬಾಳ, ಅರಕಲಗೂಡು, ಕೊಪ್ಪ, ಕೊಟ್ಟಿಗೆಹಾರ, ಶೃಂಗೇರಿಯಲ್ಲಿ ತಲಾ 1 ಸೆಮೀನಷ್ಟು ಮಳೆ ಆಗಿದೆ.

ಇಂದು ಎಲ್ಲಿ ಮಳೆ ಆಗಲಿದೆ?

ಇಂದು ಉತ್ತರ ಒಳನಾಡಿನ ಬಾಗಲೋಕಟೆ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹಲವೆಡೆ ಗಾಳಿಯ ವೇಗವು ಗಂಟೆಗೆ 30-40 ಕಿಮೀ ತಲುಪುವ ಸಾಧ್ಯತೆ ಇದ್ದು ಸಾಧಾರಣ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.

ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?

ಇಂದು ಕಲಬುರಗಿ, ಯಾದಗಿರಿ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ದ. ಕನ್ನಡ ಕರಾವಳಿಯ ಮುಲ್ಕಿಯಿಂದ ಮಂಗಳೂರು, ಬೈಂದೂರಿನಿಂದ ಕಾಪುವರೆಗೆ, ಮಾಜಾಳಿಯಿಂದ ಭಟ್ಕಳದವರೆಗೆ ಎತ್ತರದ ಅಲೆಗಳು ಉಂಟಾಗಲಿದ್ದು ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನ ವಾತಾವರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 30-40 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ 30°ಹಾಗೂ ಕನಿಷ್ಠ ತಾಪಮಾನ 21° C ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.

ಇಂದು ಪ್ರಮುಖ ನಗರಗಳ ವಾತಾವರಣ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜುಲೈ 13) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.

ಬೆಂಗಳೂರು - 30.2°ಸೆ.

ಮಂಗಳೂರು- 26°ಸೆ.

ಚಿತ್ರದುರ್ಗ- 26°ಸೆ.

ಗದಗ- 29.6°ಸೆ.

ಹೊನ್ನಾವರ- 26°ಸೆ.

ಕಲಬುರ್ಗಿ- 24.5 ಸೆ.

ಬೆಳಗಾವಿ- 23°ಸೆ.

ಕಾರವಾರ- 28.6°ಸೆ.