ಕರ್ನಾಟಕ ಹವಾಮಾನ; ಇಂದು ಬೀದರ್ ಸೇರಿದಂತೆ 3 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ, ಉಡುಪಿ, ಉ. ಕನ್ನಡದಲ್ಲಿ ಸಾಧಾರಣ ಮಳೆ ಸಾಧ್ಯತೆ
ಇಂದು (ಜೂನ್ 15) ಬೀದರ್, ಕಲಬುರ್ಗಿ, ಬಿಜಾಪುರದಲ್ಲಿ ಭಾರೀ ಮಳೆ ಆಗಲಿದ್ದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ನಿನ್ನೆ(ಶುಕ್ರವಾರ) ಭಾರತೀಯ ಹವಾಮಾನ ಇಲಾಖೆ 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿತ್ತು. ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಿದೆ. ಇಂದು ಎಲ್ಲೆಲ್ಲೆ ಮಳೆ ಆಗಲಿದೆ. ಎಲ್ಲಿಲ್ಲಿ ಹವಾಮಾನ ಹೇಗಿರಲಿದೆ? ಯಾವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ? ಇಲ್ಲಿದೆ ಮಾಹಿತಿ.
ಎಲ್ಲೆಲ್ಲಿ ಎಷ್ಟು ಮಳೆ ಆಯ್ತು?
ಶುಕ್ರವಾರ ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಮಲಾಪುರದಲ್ಲಿ 7 ಸೆಮೀ ಮಳೆ ಆಗಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಆದ ಸ್ಥಳವಾಗಿದೆ. ಇದನ್ನು ಹೊರತುಪಡಿಸಿ ಗೋಕರ್ಣ, ಅಂಕೋಲಾದಲ್ಲಿ ತಲಾ 5 ಸೆಮೀ, ಹುಮಾನಾಬಾದ್, ಕಲಬುರ್ತಿ, ಸುಲೇಪೇಟ, ಶಹಪುರ, ಚಿಕ್ಕಬಳ್ಳಾಪುರಕುಮಟಾ, ಮಂಠಾಳ, ಭಾಲ್ಕಿ, ಪೊನ್ನಂಪೇಟೆ, ಮಾಗಡಿ, ಕೂಡ್ಲಿಗಿಯಲ್ಲಿ ತಲಾ 3 ಸೆಮೀ, ಕಾರವಾರ, ದಾವಣಗೆರೆ ವಿರಾಜಪೇಟೆ, ಹೊಸಪೇಟೆ, ದೊಡ್ಡಬಳ್ಳಪುರದಲ್ಲಿ ತಲಾ 2ಮ ಸೆಮೀ ಹಾಗೂ ಕದ್ರಾ, ಬೆಳ್ತಂಗಡಿ, ಜೊಯಿಡಾ, ಉಪ್ಪಿನಂಗಡಿ, ಮಂಕಿ, ಚಿತ್ತಾಪುರ, ಬೇವೂರು, ರಬಕವಿ, ಇಳಕಲ್, ಮಾನ್ವಿ, ಮುನಿರಾಬಾದ್, ಕುಷ್ಟಗಿ ಹಾಗೂ ಇತರ ಕಡೆ ತಲಾ 1 ಸೆಮೀ ಮಳೆ ಆಗಿದೆ.
ಜೂನ್ 15ರಂದು ಎಲ್ಲೆಲ್ಲಿ ಮಳೆ ಆಗಲಿದೆ?
ಬೀದರ್, ಕಲಬುರ್ಗಿ, ಬಿಜಾಪುರದಲ್ಲಿ ಭಾರೀ ಮಳೆ ಆಗಲಿದ್ದು ಭಾರತೀಯ ಹವಾಮಾನ ಇಲಾಖೆಯು ಈ ಮೂರೂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳಲ್ಲಿ, ಅಂದರೆ ಭಾನುವಾರ ಕೂಡಾ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಕರಾವಳಿ ಸೇರಿ ಕೆಲವೆಡೆ ಸಾಧಾರಣ ಮಳೆ ಆಗುವುದರಿಂದ ಭಾರತೀಯ ಹವಾಮಾನ ಇಲಾಖೆ ಮೀನುಗಾರರಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ.
ಜೂನ್ 16 ಬೆಳಗಿನವರೆಗೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಹಾಗೂ ಭಾನುವಾರ ಮೋಡ ಕವಿದ ವಾತಾವರಣವಿದ್ದು ಸಾಧಾರಣ/ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ 30 ° ಸೆಲ್ಸಿಯಸ್ ಹಾಗೂ 21 ° ಇರಲಿದೆ. ಭಾನುವಾರ ಗರಿಷ್ಠ ಹಾಗೂ ಕನಿಷ್ಠ ತಾಪಮಾನ 31 ° ಹಾಗೂ 21 ° ಇರಲಿದೆ.
ಪ್ರಮುಖ ನಗರಗಳ ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 15 ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ ಹೀಗಿದೆ.
ಬೆಂಗಳೂರು - 21.8° ಸೆ.
ಮಂಗಳೂರು - 25° ಸೆ.
ಚಿತ್ರದುರ್ಗ - 22.4° ಸೆ.
ಗದಗ - 22.6° ಸೆ.
ಹೊನ್ನಾವರ - 26.2° ಸೆ.
ಕಲಬುರ್ಗಿ - 23.9° ಸೆ.
ಬೆಳಗಾವಿ - 23° ಸೆ.
ಕಾರವಾರ - 29.2° ಸೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
