ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ಇಂದು ಕರಾವಳಿ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ ಸಾಧ್ಯತೆ, ರಾಜ್ಯದ ಪ್ರಮುಖ ನಗರಗಳ ವಾತಾವರಣ ಹೀಗಿದೆ

ಕರ್ನಾಟಕ ಹವಾಮಾನ: ಇಂದು ಕರಾವಳಿ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ ಸಾಧ್ಯತೆ, ರಾಜ್ಯದ ಪ್ರಮುಖ ನಗರಗಳ ವಾತಾವರಣ ಹೀಗಿದೆ

Karnataka Weather: ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಕಳೆದ ಒಂದು ವಾರದಿಂದ ಬಹುತೇಕ ಕಡೆ ಮೋಡ ಕವಿದ ವಾತಾವಣರ ಹೊರತುಪಡಿಸಿ ಮಳೆ ಆಗಿಲ್ಲ. ಇಂದು ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ. ರಾಜ್ಯದ ಇತರೆಡೆ ಇಂದು ವಾತಾವಣ ಹೇಗಿದೆ? ಯಾವ ಯಾವ ಜಿಲ್ಲೆಯಲ್ಲಿ ಹವಾಮಾನ ಹೇಗಿರಲಿದೆ ನೋಡೋಣ.

ಕರ್ನಾಟಕ ಹವಾಮಾನ: ಇಂದು ಕರಾವಳಿ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ ಸಾಧ್ಯತೆ
ಕರ್ನಾಟಕ ಹವಾಮಾನ: ಇಂದು ಕರಾವಳಿ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ ಸಾಧ್ಯತೆ (PC: Canva)

ಕಳೆದ ಕೆಲವು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಈಗ ಕಡಿಮೆ ಆಗಿದೆ. ಮಂಡ್ಯ, ಮೈಸೂರು, ಶಿವಮೊಗ್ಗ ಸೇರಿದಂತೆ ಬಹಳಷ್ಟ ಕಡೆ ಕಳೆದ 4-5 ದಿನಗಳಿಂದ ಮಳೆ ಆಗಿಲ್ಲ. ಆದರೆ ನಿನ್ನೆ ಕೆಲವೆಡೆ ಗುಡುಗು ಸಹಿತ ಭಾರೀ ಮಳೆ ಆಗಿದೆ. ಇಂದು ಎಲ್ಲೆಲ್ಲೆ ಮಳೆ ಆಗಲಿದೆ. ಸೋಮವಾರ ಹಾಗೂ ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ವಾತಾವರಣ ಹೇಗಿರಲಿದೆ? ಇಲ್ಲಿದೆ ಮಾಹಿತಿ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಶನಿವಾರ ರಾಯಚೂರಿನ ಗಬ್ಬೂರಿನಲ್ಲಿ 6 ಸೆಮೀನ ಮಳೆ ಆಗಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಆಗಿರುವ ಸ್ಥಳ ಎಂದು ವರದಿ ಆಗಿದೆ. ಉಳಿದಂತೆ ಉಡುಪಿ, ಯಾದಗಿರಿ, ಸೈದಾಪುರ, ಅಂಕೋಲಾದಲ್ಲಿ 3 ಸೆಮೀ, ಗೋಕರ್ಣ, ಕುಮಟಾ, ಕೆಂಭಾವಿ, ತಾವರಗೇರಾ, ಮುದಗಲ್‌, ಮಂಠಾಳ, ಕೋಟದಲ್ಲಿ ತಲಾ 2 ಸೆಮೀ, ಹೊನ್ನಾವರ, ಕಾರ್ಕಳ , ಸಿದ್ದಾಪುರ, ಮಂಕಿ, ಯಲ್ಲಾಪುರ, ಯಡ್ರಾಮಿ, ದೇವದುರ್ಗ, ಕವಡಿಮಟ್ಟಿ, ಮಸ್ಕಿ, ಕಲಬುರ್ಗಿ, ಕಕ್ಕೇರಿ, ಕಮಲಾಪುರ, ಮಾನ್ವಿ ಸೇರಿದಂತೆ ಇತರ ಕಡೆ ತಲಾ 1 ಸೆಮೀ ಮಳೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಇಂದು ಎಲ್ಲೆಲ್ಲಿ ಮಳೆ ಆಗಲಿದೆ?

ಕರಾವಳಿ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಸಾಧಾರಣ/ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಒಳನಾಡಿನ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿಯಲ್ಲೂ ಸಾಧಾರಣ ಮಳೆ ಇರುವುದರಿಂದ ಹವಾಮಾನ ಇಲಾಖೆಯು ಮೀನುಗಾರರಿಗೆ ಯಾವುದೇ ಮುನ್ನೆಚರಿಕೆ ನೀಡಿಲ್ಲ. ಇಂದು ರಾಜ್ಯದ ಯಾವ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿಲ್ಲ.

ಮುಂದಿನ 24 ಗಂಟೆಗಳ ಕಾಲ ಬೆಂಗಳೂರು, ಸುತ್ತಮುತ್ತಲಿನ ವಾತಾವಣ

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶವಿದ್ದು ಹಗುರ/ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31° ಸೆ ಮತ್ತು 21° ಸೆ ಆಗಿರಬಹುದು. ಮುಂದಿನ 48 ಕಡೆಗಳಲ್ಲಿ ಕೂಡಾ ಇದೇ ವಾತಾವಣ ಮುಂದುವರೆಯುವ ಸಾಧ್ಯತೆ ಇದೆ.

ರಾಜ್ಯದ ಪ್ರಮುಖ ನಗರಗಳ ಹವಾಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 15 ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನದ ವಿವರ ಹೀಗಿದೆ.

ಬೆಂಗಳೂರು - 21.2° ಸೆ.

ಮಂಗಳೂರು - 25° ಸೆ.

ಚಿತ್ರದುರ್ಗ - 22.6° ಸೆ.

ಗದಗ - 22.8° ಸೆ.

ಹೊನ್ನಾವರ - 24.4° ಸೆ.

ಕಲಬುರ್ಗಿ - 24.7° ಸೆ.

ಬೆಳಗಾವಿ - 24° ಸೆ.

ಕಾರವಾರ - 30.2°ಸೆ.