ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಜೂನ್‌ 18: ಇಂದು ಉ. ಕನ್ನಡ, ಉಡುಪಿ ಸೇರಿದಂತೆ ಅನೇಕ ಕಡೆ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕ ಹವಾಮಾನ ಜೂನ್‌ 18: ಇಂದು ಉ. ಕನ್ನಡ, ಉಡುಪಿ ಸೇರಿದಂತೆ ಅನೇಕ ಕಡೆ ಗುಡುಗು ಸಹಿತ ಮಳೆ ಸಾಧ್ಯತೆ

Karnataka Weather: ಸೋಮವಾರ ಉತ್ತರ ಕನ್ನಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದ್ದು ಇಂದು ಕೂಡಾ ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಸೇರಿದಂತೆಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ.

ಕರ್ನಾಟಕ ಹವಾಮಾನ ಜೂನ್‌ 18: ಇಂದು ಉ. ಕನ್ನಡ, ಉಡುಪಿ ಸೇರಿದಂತೆ ಅನೇಕ ಕಡೆ ಗುಡುಗು ಸಹಿತ ಮಳೆ ಸಾಧ್ಯತೆ
ಕರ್ನಾಟಕ ಹವಾಮಾನ ಜೂನ್‌ 18: ಇಂದು ಉ. ಕನ್ನಡ, ಉಡುಪಿ ಸೇರಿದಂತೆ ಅನೇಕ ಕಡೆ ಗುಡುಗು ಸಹಿತ ಮಳೆ ಸಾಧ್ಯತೆ (PC: Canva)

ಬೆಂಗಳೂರು: ಮಳೆ ಬಾರದೆ ಕಂಗಾಲಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಜೂನ್‌ 1ರಿಂದ ಕರಾವಳಿಗೆ ಮಾನ್ಸೂನ್‌ ಮಾರುತಗಳು ಪ್ರವೇಶಿಸಿದ ನಂತರ ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಮಳೆ ಆಗುತ್ತಿದೆ. ನಡುವೆ, ಕೆಲವು ಜಿಲ್ಲೆಗಳಲ್ಲಿ ಮಳೆ ಇಲ್ಲದಿದ್ದರೂ ಶೀಘ್ರದಲ್ಲೇ ಮತ್ತೆ ಎಲ್ಲೆಡೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ಎಲ್ಲೆಲ್ಲಿ ಮಳೆ ಆಯ್ತು? ಇಂದು ಹಾಗೂ ನಾಳೆ ಎಲ್ಲಿ ಮಳೆ ಆಗಲಿದೆ? ಬೆಂಗಳೂರು ಹಾಗೂ ಸುತ್ತಮುತ್ತಲಿನ ವಾತಾವರಣ ಹೇಗಿರಲಿದೆ? ಇಲ್ಲಿದೆ ಮಾಹಿತಿ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸೋಮವಾರ ಎಲ್ಲೆಲ್ಲಿ, ಎಷ್ಟೆಷ್ಟು ಮಳೆ ಆಗಿದೆ?

ಸೋಮವಾರ ಉತ್ತರ ಕನ್ನಡದ ಕುಮಟಾದಲ್ಲಿ 9 ಸೆಮೀ ಮಳೆ ಆಗುವ ಮೂಲಕ ಅತಿ ಹೆಚ್ಚು ಮಳೆ ಆದ ಸ್ಥಳ ಎಂದು ವರದಿ ಆಗಿದೆ. ಇದನ್ನು ಹೊರತುಪಡಿಸಿ. ಗೇರ್ಸೊಪ್ಪ, ಗೋಕರ್ಣ, ಅಂಕೋಲಾ, ಗದಗ, ಮಂಕಿಯಲ್ಲಿ ತಲಾ 5 ಸೆಮೀ, ಹಳಿಯಾಳ, ಶಿರಾಲಿ, ಸಂಕೇಶ್ವರ, ಕುಶಾಲನಗರ, ಕಾರವಾರದಲ್ಲಿ ತಲಾ 4ಸೆಮೀ, ಹೊನ್ನಾವರ, ನಿಪ್ಪಾಣಿ, ಯಲ್ಲಾಪುರದಲ್ಲಿ ತಲಾ 3 ಸೆಮೀ, ಮಂಡಗೋಡು, ಚಿಕ್ಕೋಡಿ, ಹಿಡಕಲ್‌ ಅಣೆಕಟ್ಟು, ಬೆಳಗಾವಿ, ಭಾಗಮಂಡಲ, ಬೆಳ್ತಂಗಡಿಯಲ್ಲಿ ತಲಾ 2 ಸೆಮೀ, ಸಿದ್ದಾಪುರ, ಕೋಟ, ಕಿರವತ್ತಿ, ಕದ್ರಾ, ಲೋಂಡಾ, ಹಾವೇರಿ, ಔರಾದ್‌, ಧಾರವಾಡ, ಕುಂದಗೋಳ, ಚಿಂತಾಮಣಿ, ಸೋಮವಾರಪೇಟೆಯಲ್ಲಿ ತಲಾ 1 ಸೆಮೀ ಮಳೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಇಂದು, ನಾಳೆ ಎಲ್ಲೆಲ್ಲಿ ಮಳೆ ಆಗಲಿದೆ?

ಇಂದು ( ಮಂಗಳವಾರ) ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಸೇರಿದಂತೆಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳ ಅನೆೇಕ ಸ್ಥಳಗಳಲ್ಲಿ ಬರುವ ಗಾಳಿಯ ವೆೇಗವು (30-40 kmph) ಇರುವ

ಸಾಧ್ಯತೆಯಿದೆ ಹಾಗೂ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ. ನಾಳೆ ಕೂಡಾ ಕರಾವಳಿ ಜಿಲ್ಲೆಯ ಹಲವೆಡೆ ಮಳೆ ಆಗಲಿದೆ. ಹವಾಮಾನ ಇಲಾಖೆಯು ಮೀನುಗಾರರಿಗೆ ಯಾವುದೇ ಮುನ್ನೆಚರಿಕೆ ನೀಡಿಲ್ಲ. ಹಾಗೇ ಯಾವ ಜಿಲ್ಲೆಯಲ್ಲೂ ಹವಾಮಾನ ಇಲಾಖೆ ಅಲರ್ಟ್‌ ನೀಡಿಲ್ಲ.

ಬೆಂಗಳೂರು, ಸುತ್ತಮುತ್ತಲಿನ ಪ್ರದೇಶಗಳ ವಾತಾವರಣ

ಸಾಮಾನಯವಾಗಿ ಮೋಡ ಕವಿದ ಆಕಾಶ, ಹಗುರ ಮಳೆ/ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಗರಿಷ್ಠ,ಕನಿಷ್ಠ ತಾಪಮಾನವು ಕ್ರಮವಾಗಿ 31° ಸೆ ಮತ್ತು 21°ಸೆ ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.

ರಾಜ್ಯದ ಪ್ರಮುಖ ನಗರಗಳ ಹವಾಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 18) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನದ ವಿವರ ಹೀಗಿದೆ.

ಬೆಂಗಳೂರು - 22° ಸೆ.

ಮಂಗಳೂರು - 24° ಸೆ.

ಚಿತ್ರದುರ್ಗ - 22.4° ಸೆ.

ಗದಗ - 22.8° ಸೆ.

ಹೊನ್ನಾವರ - 24.4° ಸೆ.

ಕಲಬುರ್ಗಿ - 25.2° ಸೆ.

ಬೆಳಗಾವಿ - 24° ಸೆ.

ಕಾರವಾರ - 30.4° ಸೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸಸಿ ರಕ್ಷಣೆ ಬೆಳವಣಿಗೆಗೆ ಜಿಯೋ ಟ್ಯಾಗಿಂಗ್, ಆಡಿಟ್‌ ಕಡ್ಡಾಯ

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ವಿಭಾಗ