ರಾಜ್ಯದಲ್ಲಿ ಮೈ ಕೊರೆವ ಚಳಿಗೆ ಜೊತೆಯಾಗಲಿದೆ ಮಳೆ, ಚಂಡಮಾರುತ ಪರಿಣಾಮ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯದಲ್ಲಿ ಮೈ ಕೊರೆವ ಚಳಿಗೆ ಜೊತೆಯಾಗಲಿದೆ ಮಳೆ, ಚಂಡಮಾರುತ ಪರಿಣಾಮ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಸಾಧ್ಯತೆ

ರಾಜ್ಯದಲ್ಲಿ ಮೈ ಕೊರೆವ ಚಳಿಗೆ ಜೊತೆಯಾಗಲಿದೆ ಮಳೆ, ಚಂಡಮಾರುತ ಪರಿಣಾಮ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಸಾಧ್ಯತೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡ್ಮೂರು ದಿನ ಮೈ ಕೊರೆವ ಚಳಿ ಇರಲಿದೆ. ಇದರೊಂದಿಗೆ ಚಂಡಮಾರುತ ಪರಿಣಾಮ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯೂ ಸುರಿಯಲಿದೆ. ಮಕರ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಹೆಚ್ಚಲಿದೆ. ಇಂದಿನ (ಜನವರಿ 13) ಕರ್ನಾಟಕ ಹವಾಮಾನ ವರದಿ ಹೇಗಿದೆ ನೋಡೋಣ.

ಕರ್ನಾಟಕ ಹವಾಮಾನ ಜನವರಿ 13
ಕರ್ನಾಟಕ ಹವಾಮಾನ ಜನವರಿ 13

ದೇಶದಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದೆ. ರಾಜ್ಯದಲ್ಲೂ ಜನರು ಮೈ ಕೊರೆವ ಚಳಿಯ ನಡುವೆ ಹಬ್ಬಕ್ಕೆ ತಯಾರಿ ನಡೆಸುತ್ತಿದ್ದಾರೆ. ಹೆಚ್ಚಿದ ಚಳಿಯು ಜನರ ಮೈ ನಡುಗುವಂತೆ ಮಾಡಿದೆ. ಈ ನಡುವೆ ಚಳಿಗೆ ಮಳೆಯು ಸಾಥ್‌ ನೀಡುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ವಿಪರೀತ ಚಳಿಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಮಳೆರಾಯನ ಆಗಮನ ಶಾಪವಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದು (ಜನವರಿ 13) ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬೆಳಗಿನ ಜಾವ ಕೊಂಚ ಚಳಿ ಇರಲಿದ್ದು, ನಂತರ ಎಂದಿನಂತೆ ಬಿಸಿಲಿನ ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿ ಇಂದು ನಾಳೆ ಮಳೆ ಬೀಳುವ ಸಾಧ್ಯತೆ ಕಡಿಮೆ ಇದೆ.

ಉತ್ತರ ಒಳನಾಡಿನಲ್ಲಿ ಈಗಾಗಲೇ ತಾಪಮಾನ ಕುಸಿದಿದ್ದು, ಭಾರಿ ಚಳಿಯಿಂದ ಜನರು ತತ್ತರಿಸಿದ್ದಾರೆ. ಆಗಾಗ ಶೀತಗಾಳಿಯೂ ಬೀಸುತ್ತಿದ್ದು, ಮೈ ಕೊರೆವ ಚಳಿಗೆ ನಡುಗುವಂತಾಗಿದೆ. ಜನವರಿ 15ರವರೆಗೆ ಇದೇ ರೀತಿ ತಾಪಮಾನ ಇರಲಿದೆ. ವಿಜಯಪುರ, ಕಲಬುರಗಿ, ಬೀದರ್‌, ಬಾಗಲಕೋಟೆ, ಧಾರಾವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಿರಲಿದೆ. ಉಳಿದ ಜಿಲ್ಲೆಗಳಲ್ಲೂ ಚಳಿ ಇರಲಿದ್ದು, ಉತ್ತರ ಒಳನಾಡಿನಲ್ಲೂ ಸಂಕ್ರಾಂತಿಗೆ ಮಳೆ ಬರುವ ಸಾಧ್ಯತೆ ಕಡಿಮೆ ಇದೆ.

ದಕ್ಷಿಣ ಒಳನಾಡಿನಲ್ಲಿ ಚಳಿಯ ಜೊತೆ ಮಳೆ

ದಕ್ಷಿಣ ಒಳನಾಡಿನಲ್ಲಿ ಶೀತಗಾಳಿ ಹಾಗೂ ಅತಿಯಾದ ಚಳಿಯ ಪರಿಣಾಮ ಮೈ ನಡುಗತ್ತಿದೆ. ಬೆಳಗಿನ ಹೊತ್ತು ಹೊರಗಡೆ ಹೋಗುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ಬೆಳಗಿನ ಹೊತ್ತು ಸುಮಾರು 10 ಗಂಟೆಯ ತನಕವೂ ಶೀತ ವಾತಾವರಣ ಇರುತ್ತದೆ. ಜನವರಿ 15ರವರೆಗೂ ಈ ಭಾಗದಲ್ಲಿ ಚಳಿ ಹೆಚ್ಚಿರಲಿದ್ದು, ಇಂದಿನಿಂದ ಚಳಿಗೆ ಮಳೆರಾಯನೂ ಜೊತೆಯಾಗಲಿ‌ದ್ದಾನೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ,ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗಲಿದೆ. ನಾಳೆ (ಜನವರಿ 14) ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಬೆಂಗಳೂರಲ್ಲೂ ಮಳೆ

ಬೆಂಗಳೂರಿನಲ್ಲಿ ಬೆಳಗಿನ ಜಾವವೇ ಕಾಶ್ಮೀರದಂತಹ ವಾತಾವರಣವಿದೆ. ಎಲೆಲ್ಲೂ ಹಿಮ ಹಾಸಿದಂತಿದ್ದು, ಹೊರಗಡೆ ಶೀತಗಾಳಿ ಜನರನ್ನು ಹೆದರಿಸುತ್ತಿದೆ. ಮೈ ಕೊರೆವ ಚಳಿಯು ಹಬ್ಬಕ್ಕೆ ಅಡ್ಡಿಪಡಿಸಬಹುದು ಎಂದುಕೊಂಡಿದ್ದರೆ, ಇದೀಗ ಚಳಿಯ ಜೊತೆ ಮಳೆರಾಯನೂ ಸೇರಿಕೊಳ್ಳಲಿದ್ದಾನೆ. ನಗರದ ಕೆಲವೆಡೆ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಸಂಕ್ರಾಂತಿಯ ಹಬ್ಬಕ್ಕೆ ಜೋರಾಗಿ ಶಾಪಿಂಗ್ ನಡೆಯುತ್ತಿದ್ದು ಮಳೆರಾಯನ ಆಗಮನದಿಂದ ಹಬ್ಬಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

Whats_app_banner