ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ

Karnataka Weather: ಶ್ರೀ ವಿಶ್ವಾವಸು ಸಂವತ್ಸರದ ಮೊದಲ ದಿನ ಯುಗಾದಿ ಸಂಭ್ರಮ ಇಂದು. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಹಾಸನ ಜಿಲ್ಲೆಗಳ ಕೆಲವು ಕಡೆ ಮಳೆಯ ಸಿಂಚನ ಸಾಧ್ಯತೆ ಇದೆ. ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು ಹಾಗೂ ಉಳಿದೆಡೆ ಒಣಹವೆ ಕಾಡಲಿದೆ. ಕರ್ನಾಟಕದ ಹವಾಮಾನ ಇಂದು ಹೀಗಿದೆ.

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು ಕಾಡಬಹುದು. ಇನ್ನೊಂದೆಡೆ, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆಯಾಗಬಹುದು, ಉಳಿದೆಡೆ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು ಕಾಡಬಹುದು. ಇನ್ನೊಂದೆಡೆ, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆಯಾಗಬಹುದು, ಉಳಿದೆಡೆ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ) (Pexels)

Karnataka Weather: ಯುಗಾದಿ ದಿನವಾದ ಇಂದು (ಮಾರ್ಚ್‌ 30) ಕರ್ನಾಟಕದ ಬಹುತೇಕ ಕಡೆ ಒಣ ಹವೆ, ಸುಡು ಬಿಸಿಲು ಅನುಭವಕ್ಕೆ ಬರಲಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ, ಉಷ್ಣದ ಅಲೆಗಳು ಅನುಭವಕ್ಕೆ ಬಂದರೆ, ದಕ್ಷಿಣ ಕನ್ನಡ, ಮೈಸೂರು ಸೇರಿ 4 ಜಿಲ್ಲೆಗಳಲ್ಲಿ ಕೆಲವೆಡೆ ಗುಡುಗು ಮಿಂಚು ಹಾಗೂ ಬೀಸುಗಾಳಿ ಸಹಿತ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.

ಬೆಂಗಳೂರು ಹವಾಮಾನ ಇಂದು; ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್‌

ಬೆಂಗಳೂರು ನಗರ ವ್ಯಾಪ್ತಿಯ ಹವಾಮಾನ ಇಂದು ಬಹುತೇಕ ಒಣಹವೆ ಇರಲಿದೆ. ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ಆಸುಪಾಸು ಇರುವ ಕಾರಣ ಹಗಲು ಹೊತ್ತಿನಲ್ಲಿ ಸುಡುಬಿಸಿಲು ಕಾಡಬಹುದು. ಇನ್ನು, ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು. ನಿನ್ನೆ (ಮಾರ್ಚ್ 29) ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 34.1 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 22.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 21.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಮಳೆ ಇರಲಿಲ್ಲ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.

ಕರ್ನಾಟಕದ ಪ್ರಮುಖ ನಗರಗಳ ತಾಪಮಾನ ಮತ್ತು ತೇವಾಂಶ ವಿವರ (ಬೆಳಿಗ್ಗೆ 6.30ಕ್ಕೆ)

ಬೆಂಗಳೂರು ನಗರ - ತಾಪಮಾನ 23.6 ಡಿಗ್ರಿ ಸೆಲ್ಶಿಯಸ್‌, ತೇವಾಂಶ ಶೇ 53

ಮಂಗಳೂರು - ತಾಪಮಾನ 26 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 89

ಚಿತ್ರದುರ್ಗ - ತಾಪಮಾನ 35.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 26

ಗದಗ - ತಾಪಮಾನ 26 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 80

ಹೊನ್ನಾವರ - ತಾಪಮಾನ 28.4 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 82

ಕಲಬುರಗಿ - ತಾಪಮಾನ 29.6 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 49

ಬೆಳಗಾವಿ - ತಾಪಮಾನ 27 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 84

ಕಾರವಾರ - ತಾಪಮಾನ 33.2 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇ 63

ಕರ್ನಾಟಕ ಹವಾಮಾನ ಇಂದು; 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಇಂದು ಗುಡುಗು ಮಿಂಚು ಸಹಿತ ಅಥವಾ ಸಾಧಾರಣ ಮಳೆಯಾಗಬಹುದು. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ತಾಪಮಾನಗಳಲ್ಲಿ ಹೆಚ್ಚಿನ ವ್ಯತ್ಯಾಸ ಇರಲ್ಲ. ಏಪ್ರಿಲ್ 2 ರ ಬಳಿಕ ಮೂರು ದಿನ ಮೂರೂ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳಲ್ಲಿ ಇಂದು ಮಳೆ ಇಲ್ಲ. ತಾಪಮಾನ ಹೆಚ್ಚಳ ಸಾಧ್ಯತೆ ಇದೆ. ಈಗಾಗಲೇ ರಾಯಚೂರು, ಬೀದರ್‌, ಕಲಬುರಗಿ, ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ದಾಟಿದ್ದು, ಇದರಲ್ಲಿ ಕೊಂಚ ಏರಿಕೆಯಾಗಬಹುದು. ಎರಡು ದಿನಗಳ ಬಳಿಕ ಮಳೆ ಸುರಿಯಲಿದ್ದು, ತಾಪಮಾನದಲ್ಲಿ ಕೊಂಚ ಇಳಿಕೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ವಿಶೇಷವಾಗಿ ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ತಾಪಮಾನದಲ್ಲಿ ಕೊಂಚ ಏರಿಕೆಯಾದರೂ, ನಾಳೆಯಿಂದ ಮಳೆ ಸುರಿಯಲಿರುವ ಕಾರಣ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.