ರಾಜ್ಯದಲ್ಲಿ ಮುಂದುವರೆದ ಮಳೆ; ಇಂದು ಉ.ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು ಇಂದು ಕೂಡಾ ಅನೇಕ ಕಡೆ ಗುಡುಗು ಸಹಿತ ಮಳೆ ಆಗಲಿದೆ. ಇಂದು ಹವಾಮಾನ ಇಲಾಖೆ ಬೆಳಗಾವಿ, ಶಿವಮೊಗ್ಗ, ಕೊಡಗಿನಲ್ಲಿ ಯೆಲ್ಲೋ ಅಲರ್ಟ್ ಹಾಗೂ ಉತ್ತರ ಕನ್ನಡ , ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಕರ್ನಾಟಕ ಹವಾಮಾನ ಜೂನ್ 22: ಇಂದು ಬೆಳಗ್ಗೆ 05:55ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:48 ಕ್ಕೆ ಸೂರ್ಯಾಸ್ತವಾಗಲಿದೆ. 7:22 ಕ್ಕೆ ಚಂದ್ರೋಯವಾಗಲಿದ್ದು 05:51ಕ್ಕೆ ಚಂದ್ರ ಮುಳುಗಲಿದ್ದಾನೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ವಾತಾವರಣ 21ಡಿಗ್ರಿ ಸೆಲ್ಸಿಯಸ್ ಇರಲಿದೆ. ಇಂದಿನ ಮಳೆಯ ವಿವರ ಹೀಗಿದೆ.
ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?
ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿ 11 ಸೆಮೀ, ಬೆಳಗಾವಿಯ ಲೋಂಡಾದಲ್ಲಿ 10 ಸೆಮೀ, ಉತ್ತರ ಕನ್ನಡದ ಯಲ್ಲಾಪುರ ಜಿಲ್ಲೆಯಲ್ಲಿ 8 ಸೆಮೀ ಮಳೆ ಆಗಿದೆ. ಉಳಿದಂತೆ ಶಿರಾಲಿಯಲ್ಲಿ 5 ಸೆಮೀ, ಕೋಟ, ಕಿರವತ್ತಿ, ಕುಂದಾಪುರ, ಹಳಿಯಾಳ, ಬನವಾಸಿಯಲ್ಲಿ ತಲಾ 3 ಸೆಮೀ, ಮಂಗಳೂರು, ಬೆಳಗಾವಿ, ಕೊಟ್ಟಿಗೆಹಾರ, ಮಣಿಯಲ್ಲಿ 3 ಸೆಮೀ, ಉಪ್ಪಿನಂಗಡಿ, ಉಡುಪಿ, ಗೋಕರ್ಣ, ಧಾರವಾಡ, ಆಗುಂಬೆ, ಪುತ್ತೂರಿನಲ್ಲಿ ತಲಾ 2 ಸೆಮೀ, ಜೋಯಿಡಾ, ಪಣಂಬೂರು, ಬೆಳ್ತಂಗಡಿ, ಮೂಲ್ಕಿ, ಧರ್ಮಸ್ಥಳ, ಸವಣೂರು, ಶಿಗ್ಗಾಂವ್, ಬಾದಾಮಿ, ಬೈಲ ಹೊಂಗಲ, ಬೆಳಗಾವಿ ವಿಮಾನ ನಿಲ್ಧಾಣ, ನಲ್ವತ್ವಾಡ, ನಿಪ್ಪಾಣಿ, ನಾರಾಯಣಪುರ, ಭಾಗಮಂಡಲ, ಸಕಲೇಶಪುರ, ಜಯಪುರ, ಭದ್ರಾವತಿಯಲ್ಲಿ ತಲಾ 1 ಸೆಮೀನಷ್ಟು ಮಳೆ ಆಗಿದೆ.
ಇಂದು ಎಲ್ಲಿ ಮಳೆ ಆಗಲಿದೆ, ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?
ಇಂದು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗಾ, ಹಾಸನ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ, ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗುಸಹಿತ ಭಾರೀ ಗಾಳಿಯೊಂದಿಗೆ ಮಳೆ ಆಗುವ ಸಾಧ್ಯತೆ ಇದೆ.
ಎಲ್ಲೆಲ್ಲೆ ಅಲರ್ಟ್
ಬೆಳಗಾವಿ, ಶಿವಮೊಗ್ಗ, ಕೊಡಗಿನಲ್ಲಿ ಯೆಲ್ಲೋ ಅಲರ್ಟ್ ಹಾಗೂ ಉತ್ತರ ಕನ್ನಡ , ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ 4 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಸಮುದ್ರ ತೀರದಲ್ಲಿ ತೀವ್ರ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಗಂಟೆಗೆ 35 ರಿಂದ 45 ಕಿಮೀ ವೇಗದಲ್ಲಿ ಬೀಸುವ ಗಾಳಿ ಕರ್ನಾಟಕದ ಕರಾವಳಿ ಉದ್ದಕ್ಕೂ ಮತ್ತು ಹೊರಗೆ ಮೇಲ್ಮೈ ಸಾಧಿಸುವ ಸಾಧ್ಯತೆ ಇದೆ. ಆದ್ದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನ ವಾತಾವರಣ
ಸಾಮಾನ್ಯವಾಗಿ ಮೋಡ ಕವಿದ ಆಕಾಶ, ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಮೇಲ್ಮೈ ಗಾಳಿ ಪ್ರಬಲವಾಗಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಕ್ರಮವಾಗಿ 31 ° ಸೆ ಹಾಗೂ 21 ° ಇದೆ. ಮುಂದಿನ 48 ಗಂಟೆಗಳು ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.
ಇಂದು ಪ್ರಮುಖ ನಗರಗಳ ವಾತಾವರಣ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 22) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.
ಬೆಂಗಳೂರು - 21°ಸೆ.
ಮಂಗಳೂರು- 23°ಸೆ.
ಚಿತ್ರದುರ್ಗ- 22.4°ಸೆ.
ಗದಗ- 23.4°ಸೆ.
ಹೊನ್ನಾವರ- 26.4°ಸೆ.
ಕಲಬುರ್ಗಿ- 26.2°ಸೆ.
ಬೆಳಗಾವಿ- 23°ಸೆ.
ಕಾರವಾರ- 28.4°ಸೆ.
