ಇಂದು ಶಿವಮೊಗ್ಗ, ಕೊಡಗಿನಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ತೀವ್ರ ಅಲೆಗಳ ಮುನ್ನೆಚರಿಕೆ ನೀಡಿದ ಹವಾಮಾನ ಇಲಾಖೆ
Karnataka Weather: ಕೊಡಗು, ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುರುವಾರ ಭಾರೀ ಮಳೆ ಆಗಿದೆ. ಶಾಲಾ ಕಾಲೇಜುಗಳಿಗೆ ರಜೆ ಕೂಡಾ ಘೋಷಿಸಲಾಗಿದೆ. ಇಂದು ಶಿವಮೊಗ್ಗ ದಕ್ಷಿಣ ಕನ್ನಡ, ಚಿಕ್ಕಮಗಳೂರಿನದಲ್ಲಿ ಮಳೆ ಬರಲಿದೆ. ಹವಾಮಾನ ಇಲಾಖೆಯು ಸಮುದ್ರ ತೀರದಲ್ಲಿ ತೀವ್ರ ಅಲೆಗಳ ಮುನ್ನೆಚರಿಕೆ ನೀಡಿದೆ.

ಕರ್ನಾಟಕ ಹವಾಮಾನ ಜೂನ್ 28: ಇಂದು ಬೆಳಗ್ಗೆ 05:56ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:49ಕ್ಕೆ ಸೂರ್ಯಾಸ್ತವಾಗಲಿದೆ. 11:30 ಕ್ಕೆ ಚಂದ್ರೋಯವಾಗಲಿದ್ದು ನಾಳೆ ಬೆಳಗ್ಗೆ 10:51ಕ್ಕೆ ಚಂದ್ರ ಮುಳುಗಲಿದ್ದಾನೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ವಾತಾವರಣ 22.4 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್ ಘೋಷಿಸಿದೆ? ಇಲ್ಲಿದೆ ವಿವರ.
ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?
ನಿನ್ನೆ ಕರಾವಳಿಯ ಬಹುತೇಕ ಕಡೆ ಭಾರೀ ಮಳೆ ಆಗಿದೆ. ದ.ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 30 ಸೆಮೀ, ಉಡುಪಿ ಹಾಗೂ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ತಲಾ 21 ಸೆಮೀನಷ್ಟು ಮಳೆ ಆಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 17 ಸೆಮೀ, ಮಣಿ, ಕಅರ್ಕಳ, ಆಗುಂಬೆ, ಪಣಂಬೂರಿನಲ್ಲಿ ತಲಾ 15 ಸೆಮೀ, ಹೊನ್ನಾವರ, ಧರ್ಮಸ್ಥಳ, ಶಿರಾಲಿ, ಕೋಟ, ಉಪ್ಪಿನಂಗಡಿ, ಕೊಟ್ಟಿಗೆಹಾರದಲ್ಲಿ ತಲಾ 14 ಸೆಮೀ, ನಾಪೋಕ್ಲುವಿನಲ್ಲಿ 13 ಸೆಮೀ, ಕೊಡಗಿನಲ್ಲಿ 12 ಸೆಮೀನಷ್ಟು ಮಳೆ ಆಗಿದೆ. ಪುತ್ತೂರು, ಕೊಲ್ಲೂರು, ಸುಳು, ಮೂರ್ನಾಡು, ವಿರಾಜಪೇಟೆಯಲ್ಲಿ ತಲಾ 11 ಸೆಮೀ, ಮಂಗಳೂರಿನಲ್ಲಿ 10 ಸೆಮೀ, ಮಂಕಿಯಲ್ಲಿ 9 ಸೆಮೀ, ಕಳಸ, ಶೃಂಗೇರಿ, ಕುಂದಾಪುರದಲ್ಲಿ ತಲಾ 9 ಸೆಮೀ, ಕುಮಟಾ, ಅಂಕೋಲಾದಲ್ಲಿ ತಲಾ 8 ಸೆಮೀನಷ್ಟು ಮಳೆ ಆಗಿದೆ. ಇದನ್ನು ಹೊರತುಪಡಿಸಿ ಶಿವಮೊಗ್ಗ, ಚಾಮರಾಜನಗರ, ಹುಣಸೂರು, ಬಾಳೆಹೊನ್ನೂರು, ಬನವಾಸಿ ಸೇರಿದಂತೆ ಇತರ ಕಡೆ ಸಾಧಾರಣ ಮಳೆ ಆಗಿದೆ.
ಇಂದು ಎಲ್ಲಿ ಮಳೆ ಆಗಲಿದೆ
ಇಂದು ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಸೇರಿದಂತೆ ಇತರ ಕಡೆ ಹಗುರದಿಂದ ಸಾಧಾರಣ ಮಳೆ ಆಗಲಿದೆ.
ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳಲಿದೆ. ಜೊತೆಗೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗಂಟೆಗೆ 45-55 ಕಿಮೀ ಗಾಳಿಯೊಂದಿಗೆ ಮಳೆ ಆಗಲಿದೆ. ದಕ್ಷಿಣ ಕನ್ನಡ ಕರಾವಳಿಯಾದ ಮುಲ್ಕಿಯಿಂದ ಮಂಗಳೂರು, ಉಡುಪಿ ಕರಾವಳಿಯ ಬೈಂದೂರಿನಿಂದ ಕಾಪುವರೆಗೆ, ಉತ್ತರ ಕನ್ನಡ ಕರಾವಳಿಯ ಮಾಜಾಳಿಯಿಂದ ಭಟ್ಕಳದವರೆಗೆ ಭಾರೀ ಅಲೆಗಳ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಸಮುದ್ರದಲ್ಲಿ ಸಣ್ಣ ಹಡಗುಗಳ ಸಂಚರಿಸದಂತೆ ಎಚ್ಚರಿಕೆ ನೀಡಿದೆ. ಜೊತೆಗೆ ಸಮುದ್ರ ತೀರದಲ್ಲಿ ಮನರಂಜನಾ ಚಟುವಟಿಕೆ ಮಾಡದಂತೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನ ವಾತಾವರಣ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 40-50 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ 27 ° ಹಾಗೂ ಕನಿಷ್ಠ ತಾಪಮಾನ 21° C ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.
ಇಂದು ಪ್ರಮುಖ ನಗರಗಳ ವಾತಾವರಣ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 28) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.
ಬೆಂಗಳೂರು - 22°ಸೆ.
ಮಂಗಳೂರು- 24°ಸೆ.
ಚಿತ್ರದುರ್ಗ- 23°ಸೆ.
ಗದಗ- 22.2°ಸೆ.
ಹೊನ್ನಾವರ- 24.6°ಸೆ.
ಕಲಬುರ್ಗಿ- 25.2°ಸೆ.
ಬೆಳಗಾವಿ- 23°ಸೆ.
ಕಾರವಾರ- 28°ಸೆ.
