ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ; ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ, ಉಡುಪಿ ಸೇರಿ 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ; ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ, ಉಡುಪಿ ಸೇರಿ 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ರಾಜ್ಯದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲಗಳಲ್ಲಂತೂ ಭಾರೀ ಮಳೆ ಆಗುತ್ತಿದೆ. ಶುಕ್ರವಾರ ಮೂಲ್ಕಿಯಲ್ಲಿ 30ಸೆಮೀನಷ್ಟು ಮಳೆ ಪ್ರಮಾಣ ವರದಿ ಆಗಿದೆ. ಕೆಲವೆಡೆ ಮುನ್ನೆಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ .

ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ; ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ, ಉಡುಪಿ ಸೇರಿ 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌
ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ; ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ, ಉಡುಪಿ ಸೇರಿ 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

ಕರ್ನಾಟಕ ಹವಾಮಾನ ಜೂನ್‌ 29: ಇಂದು ಬೆಳಗ್ಗೆ 05:57ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:50ಕ್ಕೆ ಸೂರ್ಯಾಸ್ತವಾಗಲಿದೆ. 00:11 ಕ್ಕೆ ಚಂದ್ರೋಯವಾಗಲಿದ್ದು ನಾಳೆ ಮಧ್ಯಾಹ್ನ 12:40ಕ್ಕೆ ಚಂದ್ರ ಮುಳುಗಲಿದ್ದಾನೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್‌ ಸಿಟಿ ಬೆಂಗಳೂರಿನ ವಾತಾವರಣ 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್‌ ಘೋಷಿಸಿದೆ? ಇಲ್ಲಿದೆ ಮಾಹಿತಿ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?

ದ ಕನ್ನಡದ ಮೂಲ್ಕಿಯಲ್ಲಿ 30, ಉಡುಪಿಯಲ್ಲಿ 21, ಕೊಡಗಿನ ಭಾಗಮಂಡಲದಲ್ಲಿ 21 ಸೆಮೀ ಮಳೆ ಆಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 17, ಮಣಿ, ಕಾರ್ಕಳ, ಆಗುಂಬೆಯಲ್ಲಿ ತಲಾ 17 ಸೆಮೀ, ಪಣಂಬೂರು, ಬೆಳ್ತಂಗಡಿ,ಹೊನ್ನಾವರ , ಉತ್ತರ ಕನ್ನಡ, ಧರ್ಮಸ್ಥಳದಲ್ಲಿ ತಲಾ 15, ಶಿರಾಲಿ, ಕೋಟ, ಉಪ್ಪಿನಂಗಡಿ, ಕೊಟ್ಟಿಗೆಹಾರ, ನಾಪೋಕ್ಲುವಿನಲ್ಲಿ ತಲಾ 14, ಪೊನ್ನಂಪೇಟೆಯಲ್ಲಿ 13 ಸೆಮೀನಷ್ಟು ಮಳೆ ಆಗಿದೆ. ಪುತ್ತೂರು, ಕೊಲ್ಲೂಉರು, ಸುಳ್ಯ, ಮೂರ್ನಾಡು, ವಿರಾಜಪೇಟೆಯಲ್ಲಿ ತಲಾ 11 ಸೆಮೀ, ಮಂಕಿ, ಕಳಸ, ಶೃಂಗೇರಿ, ಕುಂದಾಪುರದಲ್ಲಿ ತಲಾ 9 ಸೆಮೀ, ಕುಮಟಾ, ಅಂಕೋಲಾದಲ್ಲಿ ತಲಾ 8 ಸೆಮೀನಷ್ಟು ಮಳೆ ಆಗಿದೆ. ಇದನ್ನು ಹೊರತಪಡಿಸಿ ಕುಶಾಲನಗರ, ಯಲ್ಲಾಪುರ, ಬಾಳೆ ಹೊನ್ನೂರು, ಹುಂಚದಕಟ್ಟೆ, ಸರಗೂರು, ಮುಂಡಗೋಡದಲ್ಲಿ ತಲಾ 2 ಸೆಮೀನಷ್ಟು ಮಳೆ ಆದರೆ ಉ ಕನ್ನಡದ ಬನವಾಸಿ, ಹಳಿಯಾಳ, ಶಿವಮೊಗ್ಗದ ತ್ಯಾಗರ್ತಿ, ಹಾಸನ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ, ಚಿಕ್ಕಮಗಳೂರಿನ ಎನ್‌ಆರ್‌ಪುರ, ನಂಜನಗೂಡು, ಮೈಸೂರಿನಲ್ಲಿ ತಲಾ 1 ಸೆಮೀನಷ್ಟು ಮಳೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಇಂದು ಎಲ್ಲಿ ಮಳೆ ಆಗಲಿದೆ?

ಇಂದು ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮತ್ತು ನಿರಂತರ ಗಾಳಿಯೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗಿನಲ್ಲಿ ಭಾರೀ ಮಳೆ ಆಗಲಿದೆ. ಉತ್ತರ ಕನ್ನಡದಲ್ಲಿ ಭಾರೀ ಮಳೆ ಆಗಿದೆ. ಉಡುಪಿ, ದಕ್ಷಿಣ ಕನ್ನಡದಲ್ಲಿ, ಉತ್ತರ ಕನ್ನಡದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?

ನಿನ್ನೆಯಂತೆಯೇ ದಕ್ಷಿಣ ಕನ್ನಡ ಕರಾವಳಿಯಾದ ಮುಲ್ಕಿಯಿಂದ ಮಂಗಳೂರು, ಉಡುಪಿ ಕರಾವಳಿಯ ಬೈಂದೂರಿನಿಂದ ಕಾಪುವರೆಗೆ, ಉತ್ತರ ಕನ್ನಡ ಕರಾವಳಿಯ ಮಾಜಾಳಿಯಿಂದ ಭಟ್ಕಳದವರೆಗೆ ಭಾರೀ ಅಲೆಗಳ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಸಮುದ್ರದಲ್ಲಿ ಸಣ್ಣ ಹಡಗುಗಳ ಸಂಚರಿಸದಂತೆ ಹಾಗೂ ಸಮುದ್ರ ತೀರದಲ್ಲಿ ಮನರಂಜನಾ ಚಟುವಟಿಕೆಗಳನ್ನು ನಡೆಸದಂತೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನ ವಾತಾವರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 40-50 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ 27 ° ಹಾಗೂ ಕನಿಷ್ಠ ತಾಪಮಾನ 21° C ಇರಲಿದೆ. ಸೋಮವಾರ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.

ಇಂದು ಪ್ರಮುಖ ನಗರಗಳ ವಾತಾವರಣ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 29) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.

ಬೆಂಗಳೂರು - 22°ಸೆ.

ಮಂಗಳೂರು- 25°ಸೆ.

ಚಿತ್ರದುರ್ಗ- 23°ಸೆ.

ಗದಗ- 23° ಸೆ.

ಹೊನ್ನಾವರ- 24.4°ಸೆ.

ಕಲಬುರ್ಗಿ- 24.8°ಸೆ.

ಬೆಳಗಾವಿ- 23°ಸೆ.

ಕಾರವಾರ- 28.4°ಸೆ.