ರಾಜ್ಯದಲ್ಲಿ ಮುಂದುವರೆದ ಮಳೆ; ಉ, ಕನ್ನಡ, ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯದಲ್ಲಿ ಮುಂದುವರೆದ ಮಳೆ; ಉ, ಕನ್ನಡ, ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಮುಂದುವರೆದ ಮಳೆ; ಉ, ಕನ್ನಡ, ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ನಿನ್ನೆ ಆಗುಂಬೆ, ಗೇರ್ಸೊಪ್ಪ, ಸಿದ್ದಾಪುರದಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಇಂದು ಭಾರತೀಯ ಹವಾಮಾನ ಇಲಾಖೆಯು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಮುಂದುವರೆದ ಮಳೆ; ಉ, ಕನ್ನಡ, ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ
ರಾಜ್ಯದಲ್ಲಿ ಮುಂದುವರೆದ ಮಳೆ; ಉ, ಕನ್ನಡ, ಶಿವಮೊಗ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ

ಕರ್ನಾಟಕ ಹವಾಮಾನ ಜುಲೈ 5: ಇಂದು ಬೆಳಗ್ಗೆ 05:58ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:50ಕ್ಕೆ ಸೂರ್ಯಾಸ್ತವಾಗಲಿದೆ. 05:04 ಕ್ಕೆ ಚಂದ್ರೋಯವಾಗಲಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್‌ ಸಿಟಿ ಬೆಂಗಳೂರಿನ ವಾತಾವರಣ 21.6 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್‌ ಘೋಷಿಸಿದೆ? ಇಲ್ಲಿದೆ ಮಾಹಿತಿ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?

ನಿನ್ನೆ ಕರಾವಳಿಯ ಬಹುತೇಕ ಕಡೆ ಮಳೆಯಾಗಿದೆ.  ಅಗುಂಬೆಯಲ್ಲಿ 25 ಸೆಮೀ, ಗೇರ್ಸೊಪ್ಪದಲ್ಲಿ 24 ಸೆಮೀ, ಉಡುಪಿಯ ಸಿದ್ದಾಪುರದಲ್ಲಿ 23 ಸೆಮೀ, ಚಿಕ್ಕಮಗಳೂರಿನ ಕಮ್ಮರಡಿಯಲ್ಲಿ 20 ಸೆಮೀನಷ್ಟು ಮಳೆ ಆಗಿದೆ. ಇದನ್ನು ಹೊರತುಪಡಿಸಿ ಲಿಂಗನಮಕ್ಕಿಯಲ್ಲಿ 19, ಕದ್ರಾದಲ್ಲಿ 15, ಸಿದ್ದಾಪುರದಲ್ಲಿ 15, ಶೃಂಗೇರಿಯಲ್ಲಿ 15, ಕುಂದಾಪುರದಲ್ಲಿ 13, ಮಂಕಿಯಲ್ಲಿ 12, ಕಾರ್ಕಳ, ಶಿರಾಲಿ, ಭಾಗಮಂಡಲದಲ್ಲಿ ತಲಾ 11 ಸೆಮೀ, ಕುಮಟಾ, ಹೊನ್ನಾವರ, ಕೊಪ್ಪ, ಜಯಪುರ, ಹುಂಚದ ಕಟ್ಟೆ, ಕೊಟ್ಟಿಗೆಹಾರ, ಧರ್ಮಸ್ಥಳದಲ್ಲಿ ತಲಾ 10 ಸೆಮೀ, ಅಂಕೋಲಾ, ಗೋಕರ್ಣ, ಲೋಂಡಾ, ಕಳಸ, ಕೋಟ, ಯಲ್ಲಾಪುರದಲ್ಲಿ ತಲಾ 9 ಸೆಮೀ, ಬೆಳ್ತಂಗಡಿ, ತ್ಯಾಗರ್ತಿಯಲ್ಲಿ 8 ಸೆಮೀ ಮಳೆ ಆಗಿದೆ. ಹಾಗೇ ಸುಳ್ಯದಲ್ಲಿ 6ಸೆಮೀ, ನಾಪೋಕ್ಲುವಿನಲ್ಲಿ 6, ಬಾಳೆ ಹೊನ್ನೂರಿನಲ್ಲಿ 6, ಮಾಣಿಯಲ್ಲಿ 5, ಸೋಮವಾರಪೇಟೆಯಲ್ಲಿ 5, ಪುತ್ತೂರಿನಲ್ಲಿ 4, ಹುಮನಾಬಾದ್‌, ಕಾರವಾರದಲ್ಲಿ ತಲಾ 3 ಸೆಮೀ ನಷ್ಟು ಮಳೆ ಆಗಿದೆ.

ಇಂದು ಎಲ್ಲಿ ಮಳೆ ಆಗಲಿದೆ

ಇಂದು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗಾ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯ ವೇಗ ((30-40 kmph) ಸಹಿತ ಸಾಧಾರಣ/ಗುಡುಗು ಸಹಿತ ಮಳೆ ಆಗಲಿದೆ.

ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?

ದಕ್ಷಿಣ ಕನನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಗಾಳಿ ಸಹಿತ ಗುಡುಗು ಸಹಿತ ಮಳೆ ಆಗಲಿದೆ. ಕರಾವಳಿಯಲ್ಲಿ ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ. ಬೆಳಗಾವಿ, ಧಾರವಾಡ, ಕೊಡಗಿನಲ್ಲಿ ಯೆಲ್ಲೋ ಅಲರ್ಟ್‌, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಇಂದು ಬೆಂಗಳೂರಿನ ವಾತಾವರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ಆಕಾಶವಿದ್ದು. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯು (30-40 kmph)ಗಾಳಿಯೊಂದಿಗೆ ಸಾಧಾರಣ/ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ° C ಮತುು 21 ° C ಇರಲಿದೆ. ಮುಂದಿನ 48 ಗಂಟೆಗಳ ಕಾಲ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.

ಇಂದು ಪ್ರಮುಖ ನಗರಗಳ ವಾತಾವರಣ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜುಲೈ 5) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.

ಬೆಂಗಳೂರು - 21.6°ಸೆ.

ಮಂಗಳೂರು- 24°ಸೆ.

ಚಿತ್ರದುರ್ಗ- 23°ಸೆ.

ಗದಗ- 23.2° ಸೆ.

ಹೊನ್ನಾವರ- 24.8°ಸೆ.

ಕಲಬುರ್ಗಿ- 24.4°ಸೆ.

ಬೆಳಗಾವಿ- 24°ಸೆ.

ಕಾರವಾರ- 26°ಸೆ.

Whats_app_banner